ಜಿಯೋದಿಂದ ಪ್ರತಿದಿನ 1 ಜಿಬಿ ಡಾಟಾ ಆಫರ್

Posted By:
Subscribe to Oneindia Kannada

ಮುಂಬೈ, ಜನವರಿ 07: ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಇನ್ನೊಂದು ಆಕರ್ಷಕ ಆಫರ್ ನೀಡಿದೆ. ಹೊಚ್ಚ ಹೊಸ ಹ್ಯಾಪಿ ನ್ಯೂ ಇಯರ್ 2018 ಆಫರ್‍ನಲ್ಲಿ ಮಾಸಿಕ ಕೇವಲ 149 ರೂ.ಗಳಿಗೆ ಪ್ರತಿದಿನ 1 ಜಿಬಿ ಡಾಟಾವನ್ನು ಜಿಯೋ ನೀಡಲಿದೆ.

ಪ್ರಸ್ತುತ ಚಾಲ್ತಿಯಲ್ಲಿರುವ ಎಲ್ಲಾ 1 ಜಿಬಿ ಪ್ಯಾಕ್‍ಗಳು ಎರಡು ಹೆಚ್ಚುವರಿ ಆಯ್ಕೆಗಳೊಂದಿಗೆ ವರ್ಧನೆಗೊಳ್ಳಲಿವೆ ಜತೆಗೆ 50 ಶೇಕಡಾ ಹೆಚ್ಚು ಡಾಟಾ ಅಥವಾ ಸರ್ ಪ್ರೈಸ್ ಪ್ಲಾನ್ ಮೇಲೆ 50 ರೂ. ರಿಯಾಯ್ತಿ ದೊರಕಲಿದೆ.

ಜಿಯೋ ಆಫರ್ 3,300 ರೂ. ತನಕ ಕ್ಯಾಶ್ ಬ್ಯಾಕ್

ಇದರಿಂದಾಗಿ ಜಿಯೋ ಗ್ರಾಹಕರಿಗೆ ತಿಂಗಳಿಗೆ ಕೇವಲ 149 ರೂ.ಗೆ ಅನಿಯಮಿತ ಮಾಸಿಕ ಪ್ಯಾಕ್ (ಪ್ರತಿದಿನ 1 ಜಿಬಿ) ದೊರೆಯಲಿದ್ದು, ಇದು ಟೆಲಿಕಾಂ ಉದ್ಯಮದಲ್ಲೇ ಅತ್ಯಂತ ಕಡಿಮೆಯ ಟ್ಯಾರಿಫ್ ಆಗಿದೆ.

Reliance Jio offers 1GB per day data on Rs 149 plan

ಇದಲ್ಲದೆ, ಕಂಪನಿಯ ಫ್ಲಾಗ್‍ಶಿಪ್ 399 ರೂ.ನ ಪ್ಲಾನ್ ಈಗ ಎರಡು ಹೆಚ್ಚುವರಿ ವಾರಗಳ ವ್ಯಾಲಿಡಿಟಿ ವರ್ಧನೆಯೊಂದಿಗೆ ಶೇಕಡಾ 20ರಷ್ಟು ಹೆಚ್ಚುವರಿ ಡಾಟಾ ಒದಗಿಸಲಿದೆ, ಪ್ರಸ್ತುತ 70 ದಿನಗಳಿರುವ ವ್ಯಾಲಿಡಿಟಿ 84 ದಿನಗಳಿಗೆ ಏರಲಿದೆ.

ರಿಲಯನ್ಸ್ ನಿಂದ ಹೊಸವರ್ಷಕ್ಕೆ ಎರಡು ಹೊಸ ಯೋಜನೆಗಳು

ಅಧಿಕ ಡಾಟಾ ಬಳಸುವ ಗ್ರಾಹಕರನ್ನು ಬೆಂಬಲಿಸುವ ಸಲುವಾಗಿ ಜಿಯೋ ವಿಶೇಷವಾದ ದೈನಿಕ 1.5 ಜಿಬಿ ಡಾಟಾ ಪ್ಯಾಕ್‍ಗಳನ್ನು ಉದ್ಯಮದಲ್ಲೇ ಅತಿ ಕನಿಷ್ಟ ದರವಾದ ಪ್ರತಿ ಜಿಬಿಗೆ 4 ರೂ.ನಂತೆ ನೀಡಲಿದೆ.

ಈ ಹೊಸ ಆಫರ್ ಜನವರಿ 9, 2018ರಿಂದ ಜಾರಿಗೊಳ್ಳಲಿದೆ. 2018 ಎಲ್ಲಾ ಜಿಯೋ ಗ್ರಾಹಕರಿಗೆ ಅಭೂತಪೂರ್ವ ಮೌಲ್ಯಗಳನ್ನು ನೀಡಲಿದೆ. ಈ ವರ್ಷ ಇನ್ನಷ್ಟು ಘೋಷಣೆಗಳು ಬರಲಿದ್ದು, ಇದು ಮೊದಲನೆಯ ಸಿಹಿ ಸುದ್ದಿಯಷ್ಟೇ ಎಂದು ಕಂಪನಿ ಮೂಲಗಳು ತಿಳಿಸಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As part of its 'Happy New Year' offer Reliance Jio has announced 1GB per day data usage at a recharge of Rs 149, which is Rs 50 lower than its earlier plan.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ