ಮಾರ್ಚ್ 31ರ ನಂತರವೂ ಜಿಯೋ ಬಳಸಿ ಉಚಿತ ಕರೆ ಮಾಡಿ!

ಮುಖೇಶ್ ಅಂಬಾನಿ ಅವರ ರಿಲಯನ್ಸ್ 4ಜಿ ಜಿಯೋ ನೀಡಿರುವ ಉಚಿತ ಸೇವೆ ಮಾರ್ಚ್‌ 31, 2017ಕ್ಕೆ ಕೊನೆಗೊಳ್ಳಲಿದ್ದು, ಮುಂದಿನ ಮೂರು ತಿಂಗಳಿಗಾಗಿ ಉಚಿತ ಕರೆ ಮುಂದುವರೆಯಲಿದೆ. ಆದರೆ, ಇಂಟರ್ನೆಟ್ ಡಾಟಾಗೆ ಮಾತ್ರ ಬೆಲೆ ತೆರಬೇಕಾಗುತ್ತದೆ.

ಮುಂಬೈ, ಫೆಬ್ರವರಿ 19: ಮುಖೇಶ್ ಅಂಬಾನಿ ಅವರ ಒಡೆತನದ ರಿಲಯನ್ಸ್ ಸಂಸ್ಥೆ ತನ್ನ 4ಜಿ ಜಿಯೋ ಉಚಿತ ಸೇವೆಯನ್ನು ವಿಸ್ತರಿಸಿದೆ. ಮಾರ್ಚ್‌ 31, 2017ಕ್ಕೆ ಕೊನೆಗೊಳ್ಳಲಿರುವ ಉಚಿತ ಸೇವೆಯಲ್ಲಿ ಮುಂದಿನ ಮೂರು ತಿಂಗಳಿಗೆ ವಿಸ್ತರಿಸಲಾಗಿದ್ದು, ಉಚಿತ ಕರೆ ಮುಂದುವರೆಸಬಹುದಾಗಿದೆ. ಆದರೆ, ಇಂಟರ್ನೆಟ್ ಡಾಟಾಗೆ ಹಣ ಪಾವತಿಸಬೇಕಾಗುತ್ತದೆ.

ಜೂನ್ ತಿಂಗಳ ಅಂತ್ಯದ ತನಕ ಉಚಿತ ಕರೆ ಸೌಲಭ್ಯ ಬಳಸಬಹುದಾಗಿದೆ. ಆದರೆ, ಇಂಟರ್ನೆಟ್ ಡಾಟಾ ಬಳಸಲು 100 ರು ತೆರಬೇಕಾಗುತ್ತದೆ ಎಂಬ ಸುದ್ದಿ ಬಂದಿದೆ. ಆದರೆ, ಇದಿನ್ನೂ ಅಧಿಕೃತವಾಗಿಲ್ಲ. [4ಜಿ: ಭಾರ್ತಿ ಏರ್ ಟೆಲ್ ಗೆ 12 ವರುಷ, ಜಿಯೋಗೆ 83 ದಿನ!]

Reliance Jio will now be charging Rs 100 for data, whereas the voice calls will remain free

ಕಳೆದ ವರ್ಷ ಸೆ. 5ರಂದು ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ರಿಲಯನ್ಸ್ ಜಿಯೋ ಗ್ರಾಹಕರಿಗೆ ಮೇಲಿಂದ ಮೇಲೆ ಅನೇಕ ಹೊಸ ಹೊಸ ಪ್ಲಾನ್ ನೀಡುತ್ತಾ ಬರುತ್ತಿದೆ.80 ದಿನಗಳಲ್ಲೇ 5 ಕೋಟಿ ಗ್ರಾಹಕರನ್ನು ಪಡೆದು ದಾಖಲೆ ಬರೆದಿರುವ ರಿಲಯನ್ಸ್‌ ಬಳಸುತ್ತಿರುವ ಗ್ರಾಹಕರ ಸಂಖ್ಯೆ 7.24 ಕೋಟಿಗೇರಿದೆ, ಮಾರ್ಚ್‌ ವೇಳೆಗೆ ಇದರ ಸಂಖ್ಯೆ 10 ಕೋಟಿ ತಲುಪುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+