ರಿಲಯನ್ಸ್ ಜಿಯೋದಿಂದ ಧನ್ ಧನಾ ಧನ್ ಯೋಜನೆ ಘೋಷಣೆ
ರಿಲಯನ್ಸ್ ಜಿಯೊ ತನ್ನ ಸಮ್ಮರ್ ಸರ್ಪ್ರೈಸ್ ಕೊಡುಗೆಯನ್ನು ಅಂತ್ಯಗೊಳಿಸಿ, ಮಂಗಳವಾರದದಂದು ‘ಧನ್ ಧನಾ ಧನ್ ’ ಎಂಬ ಹೆಸರಿನಲ್ಲಿ ಹೊಸ ಯೋಜನೆಯನ್ನು ಘೋಷಿಸಿದೆ.
ಬೆಂಗಳೂರು, ಏಪ್ರಿಲ್ 11: ರಿಲಯನ್ಸ್ ಜಿಯೊ ತನ್ನ ಸಮ್ಮರ್ ಸರ್ಪ್ರೈಸ್ ಕೊಡುಗೆಯನ್ನು ಅಂತ್ಯಗೊಳಿಸಿ, ಮಂಗಳವಾರದದಂದು 'ಧನ್ ಧನಾ ಧನ್ ' ಎಂಬ ಹೆಸರಿನಲ್ಲಿ ಹೊಸ ಯೋಜನೆಯನ್ನು ಘೋಷಿಸಿದೆ.
309 ರೂ.ಗಳ ಶುಲ್ಕದಿಂದ ಆರಂಭಗೊಳ್ಳುವ 'ಧನ್ ಧನಾ ಧನ್ ' ಬಳಸುವ ಚಂದಾದಾರರು 84 ದಿನಗಳ ಅವಧಿಗೆ ಪ್ರತಿದಿನ ಒಂದು ಜಿಬಿ ಡಾಟಾ ಮತ್ತು 509 ರೂ. ರೀಚಾರ್ಜ್ ಮೇಲೆ ಇದೇ ಅವಧಿಗೆ ಪ್ರತಿದಿನ ಎರಡು ಜಿಬಿ ಡಾಟಾ ಪಡೆಯಲಿದ್ದಾರೆ. ಜೊತೆಗೆ ಎಲ್ಲ ವಾಯ್ಸ್ ಕಾಲ್ ಉಚಿತವಾಗಿರುತ್ತವೆ. ಇವೆರಡೂ ಪ್ಲಾನ್‌ಗಳು ಜಿಯೊ ಪ್ರೈಮ್ ಸದಸ್ಯರಿಗೆ ಮೀಸಲಾಗಿವೆ.

ಮಿಕ್ಕಂತೆ ಧನ್ ಧನಾ ಧನ್ ಬಗ್ಗೆ ಲಭ್ಯ ಮಾಹಿತಿ ಹೀಗಿದೆ:
* ಸಮ್ಮರ್ ಸರ್ಪ್ರೈಸ್ ಕೊಡುಗೆ ಬಳಸುತ್ತಿರುವವರು ಧನ್ ಧನಾ ಧನ್ ಯೋಜನೆಗೆ ಅರ್ಹರಲ್ಲ.
* ಪ್ರೈಮ್ ಸದಸ್ಯರಲ್ಲದವರಿಗೆ ಪ್ರತಿದಿನ ಒಂದು ಜಿಬಿ ಪ್ಲಾನ್‌ನ್ನು 408 ರೂ.ಗೆ ಮತ್ತು ಎರಡು ಜಿಬಿ ಪ್ಲಾನ್‌ನ್ನು 608 ರೂ.ಗಳಿಗೆ ನಿಗದಿಗೊಳಿಸಲಾಗಿದೆ.
Here's how to live the #JioDhanDhanaDhan life. pic.twitter.com/yVKePMtizD
— Reliance Jio (@reliancejio) April 11, 2017
* ಈ ಯೋಜನೆಯು 84 ದಿನಗಳ ವ್ಯಾಲಿಡಿಟಿ ಹೊಂದಿರುತ್ತವೆ.
* 309 ರು ಶುಲ್ಕ ಒಂದು ಬಾರಿ ರೀಚಾರ್ಚ್ ಮಾತ್ರ.
*












Click it and Unblock the Notifications