ಮಕ್ಕಳು, ಮಹಿಳೆಯರಿಗಾಗಿ ಕ್ರಿಸ್ಮಸ್‍ನಂದು ವಿಶೇಷ ಆಭರಣಗಳು ಮಾರುಕಟ್ಟೆಗೆ

ಮುಂಬೈ, ಡಿ 24: ಈ ಕ್ರಿಸ್ಮಸ್‍ನ ವಿಶೇಷ ಸಂದರ್ಭದಂದು ರಿಲಯನ್ಸ್ ಜ್ಯುವೆಲ್ಸ್ ತಮ್ಮ ಎರಡು ವಿಶೇಷವಾದ ಸಂಗ್ರಹಗಳಾದ -ಬೆಲ್ಲಾ ಮತ್ತು ನಿತಾರಾ ಪರಿಚಯಿಸುತ್ತಿದೆ. ಬೆಲ್ಲಾ ಸಂಗ್ರಹವು ಮಹಿಳೆಯರ ಅಂತರಂಗದ ಅಭಿವ್ಯಕ್ತಿಯನ್ನು ಸಂಭ್ರಮಿಸಿದರೆ, ನಿತಾರ ಸಂಗ್ರಹವು ಮಕ್ಕಳ ಮಾಯಾಲೋಕವನ್ನು ಬಿಂಬಿಸುತ್ತದೆ.

ಮಾಯಾಲೋಕಗಳು ಮತ್ತು ಕನಸುಗಳ ಲೋಕದಿಂದ ಸ್ಫೂರ್ತಿ ಪಡೆದ ನಿತಾರಾ, ಮಕ್ಕಳಿಗಾಗಿ ಸೂಕ್ಷ್ಮವಾಗಿ ರಚಿಸಲಾದ ಆಭರಣಗಳು. ಮಕ್ಕಳು ಇಷ್ಟಪಡುವ ಉಡುಗೊರೆಯೂ ಆಗುತ್ತದೆ. ಯುನಿಕಾರ್ನ್, ತಾರೆಗಳು, ಹೂವುಗಳು, ಚಿಟ್ಟೆಗಳು ಮತ್ತು ಡಾಲ್ಫಿನ್‍ಗಳು. ಇವುಗಳನ್ನು ಮಕ್ಕಳು ಬಹಳ ಇಷ್ಟಪಡುತ್ತಾರೆ, ಮತ್ತು ಇವು ಪೆಂಡೆಂಟ್, ಕಿವಿಯೋಲೆ, ಮತ್ತು ಕಡಗದ ವಿನ್ಯಾಸದಲ್ಲಿ ಚಿನ್ನ ಮತ್ತು ವಜ್ರಗಳಿಂದ ಅಲಂಕೃತವಾಗಿದೆ. ಇವುಗಳ ದರ ರೂ. 3000ದಿಂದ ಆರಂಭವಾಗುತ್ತದೆ.

ಇದಲ್ಲದೆ, ಮತ್ತೊಂದು ಪ್ರತ್ಯೇಕವಾದ ವಿನ್ಯಾಸವಾದ ಬೆಲ್ಲಾ ಸಂಗ್ರಹವು, ಪ್ರತಿ ದಿನವನ್ನೂ ವಿಶೇಷವಾಗಿಸುತ್ತದೆ. ಬೆಲ್ಲಾದ ಆಭರಣಗಳು ಬಹಳ ಸರಳವಾಗಿದ್ದು, ಸಮಕಾಲೀನವಾಗಿದೆ, ಮತ್ತು ರೇಖಾಗಣಿತದ ಮಾದರಿಗಳಲ್ಲಿರುವ ಇವು ಮದರ್ ಆಫ್ ಪರ್ಲ್‍ನಿಂದ ಶೋಭಿತವಾಗಿದ್ದು, ಯುವಪೀಳಿಗೆಗೆ ಮತ್ತು ಮಹಿಳೆಯರಿಗೆ ಮೆಚ್ಚುಗೆಯಾಗುತ್ತದೆ. ವಿವರಗಳ ಮತ್ತು ನಿಖರತೆಗೆ ಪ್ರಾಮುಖ್ಯತೆ ನೀಡಿ ಸೂಕ್ಷ್ಮವಾಗಿ ರಚಿಸಲಾದ ಈ ಕಲಾಕೃತಿಗಳು, ಚಿನ್ನದ ಪೆಂಡೆಂಟ್ ಮತ್ತು ಕಡಗಳ ರೂಪದಲ್ಲಿ ರಚಿಸಲಾಗಿದೆ. ಬೆಲ್ಲಾ ಮಹಿಳೆಯಾಗಿ, ಇದು ಶಕ್ತಿ ಮತ್ತು ಘನತೆಯ ಪ್ರತೀಕ. ಬೆಲ್ಲಾ ಸಂಗ್ರಹವು ದೇಶಾದ್ಯಂತ ರೂ. 5800 ಗಳ ಆರಂಭಿಕ ದರಗಳಿಂದ ಲಭ್ಯವಿದೆ.

Reliance Jewels launches exclusive Jewellery collections for Kids, Millennials & Women Christmas

ಈ ಹೊಸ ಸಂಗ್ರಹಗಳ ಬಗ್ಗೆ ಮಾತನಾಡುತ್ತ, ಸುನಿಲ್ ನಾಯಕ್, ಸಿಇಒ ರಿಲಯನ್ಸ್ ಜ್ಯುವೆಲ್ಸ್ ಹೇಳಿದರು "ನಿತಾರಾ ಮತ್ತು ಬೆಲ್ಲಾ ಸಂಗ್ರಹದ ಪರಿಚಯದಿಂದ ರಿಲಯನ್ಸ್ ಜ್ಯುವೆಲ್ಸ್ ಬಹಳ ಹರ್ಷಗೊಂಡಿದೆ. ಮಕ್ಕಳಿಗೆ ಏನಾದರೂ ಮೋಜಿನದನ್ನು ಮತ್ತು ಮಹಿಳೆಯರಿಗೆ ಮತ್ತು ಯುವಪೀಳಿಗೆಗೆ ಏನಾದರೂ ಮೋಹಕವಾದದನ್ನು ನೀಡಲು ಕ್ರಿಸ್ಮಸ್ ಒಂದು ಉತ್ತಮ ಸಂದರ್ಭ ಎಂದು ನಮಗೆ ಅನಿಸಿತು. ನಿತಾರಾ ಮತ್ತು ಬೆಲ್ಲಾದ ಪ್ರತಿ ವಿನ್ಯಾಸವೂ ಮನೋಹರವಾಗಿದೆ ಮತ್ತು ಈ ಸೃಜನಾತ್ಮಕ ಕಲಾಕೃತಿಗಳು ಇಂದಿನ ಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿ ಸೊಬಗನ್ನು ಹೆಚ್ಚಿಸುತ್ತದೆ. ಈ ಅಗ್ಗವಾದ ದರಗಳಲ್ಲಿ ಸಮಕಾಲೀನ ಆಭರಣಗಳಿಂದ ನಾವು ರೋಮಾಂಚನಗೊಂಡಿದ್ದೇವೆ, ಮತ್ತು ನಮ್ಮ ಗ್ರಾಹರಿಗೆ ನಮ್ಮ ಕಾಳಜಿಯನ್ನು ತೋರಿಸಲು ಮತ್ತೊಂದು ಉತ್ತಮ ವಿಧಾನವಿಲ್ಲ.''

ನಿತಾರಾ ಮತ್ತು ಬೆಲ್ಲಾ ಸಂಗ್ರಹಗಳು ದೇಶಾದ್ಯಂತ ಎಲ್ಲಾ ರಿಲಯನ್ಸ್ ಜ್ಯುವೆಲ್ಸ್ ಮಳಿಗೆಗಳಲ್ಲಿ ಲಭ್ಯವಿದೆ. ಇದನ್ನು ನೀವು ರಿಲಯನ್ಸ್ ಜಿವೆಲ್ಸ್ ಶೋರೂಂ ಗಳಲ್ಲಿ ಕೊಳ್ಳಬಹುದು ಮತ್ತು ಚಿನ್ನಾಭರಣಗಳ ರಚನೆಯಲ್ಲಿ 30% ವರೆಗೆ ರಿಯಾಯಿತಿ ಮತ್ತು ವಜ್ರಾಭರಣಗಳ ಮೇಳೆ 30%ವರೆಗೆ ರಿಯಾಯಿತಿ ಪಡೆಯಬಹುದು. ಇವು ಸೀಮಿತ ಅವಧಿಯ ಕೊಡುಗೆ ಮತ್ತು ಷರತ್ತು ಹಾಗೂ ನಿಬಂಧನೆಗಳು ಅನ್ವಯಿಸುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+