ಇ -ಕೆವೈಸಿ ಪ್ರಕ್ರಿಯೆಗೂ ಡಿಜಿ ಲಾಕರ್ ಬಳಸಲು ಆರ್ ಬಿಐ ಅನುಮತಿ
ಬೆಂಗಳೂರು, ಜನವರಿ 13: ವಿವಿಧ ದಾಖಲೆಗಳನ್ನು ಆನ್ ಲೈನ್ ನಲ್ಲಿ ಸುರಕ್ಷಿತವಾಗಿ ಹೊಂದಬಹುದಾದ ಡಿಜಿ ಲಾಕರ್ ಗಳನ್ನು ಇನ್ಮುಂದೆ ಇ -ಕೆವೈಸಿ ಪ್ರಕ್ರಿಯೆಯಲ್ಲೂ ಬಳಸಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ನೀಡಿದೆ.
ನಾಗರಿಕರು ತಮ್ಮ ಡಿಜಿಲಾಕರ್ ನಲ್ಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಡಿಎಲ್ ಸೇರಿದಂತೆ ಕೆಲವು ದಾಖಲೆಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ಸರ್ಕಾರ ಅವಕಾಶ ನೀಡಿರುವುದು ಗೊತ್ತಿರಬಹುದು. ರೈಲ್ವೆ ಆನ್ ಲೈನ್ ಗುರುತಿನ ಚೀಟಿ ತೋರಿಸಬೇಕಾದ ಸಂದರ್ಭದಲ್ಲಿ ಡಿಜಿ ಲಾಕರ್ ನಲ್ಲಿರುವ ದಾಖಲೆಯನ್ನು ತೋರಿಸಬಹುದಾಗಿದೆ. ಡಿಜಿ ಲಾಕರ್‌ನಲ್ಲಿರುವ ಆಧಾರ್, ಡ್ರೈವಿಂಗ್ ಲೈಸೆನ್ಸ್ ಚೀಟಿಗಳನ್ನು ತೋರಿಸಿದರೆ ಅದನ್ನು ಪರಿಗಣಿಸುವಂತೆ ರೈಲ್ವೆ ಇಲಾಖೆ ಸುತ್ತೋಲೆ ಹೊರಡಿಸಿದೆ.
ಈಗ ಬ್ಯಾಂಕಿಂಗ್ ವ್ಯವಹಾರದಲ್ಲಿ ಗುರುತು, ವಿಳಾಸ ಮೊದಲಾದ ಮಾಹಿತಿ ದೃಢೀಕರಿಸುವ ಇ -ಕೆವೈಸಿ ಪ್ರಕ್ರಿಯೆ ಸಂದರ್ಭದಲ್ಲಿ ಡಿಜಿಲಾಕರ್ ಡಾಕ್ಯುಮೆಂಟ್ ಗಳನ್ನು ಸ್ವೀಕರಿಸಬಹುದಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.

ಡಿಜಿಲಾಕರ್ ನಲ್ಲಿರುವ ಡಾಕ್ಯುಮೆಂಟ್ ಗಳನ್ನು ಬ್ಯಾಂಕ್ ಅಥವಾ ಯಾವುದೇ ಹಣಕಾಸು ಸಂಸ್ಥೆಗಳ ಇ-ಕೆವೈಸಿ ಪ್ರಕ್ರಿಯೆಗೆ ಬಳಸಲು ಭಾರತೀಯ ರಿಸರ್ವ್ ಬ್ಯಾಂಕ್ ವತಿಯಿಂದ ಅವಕಾಶ ಕಲ್ಪಿಸಲಾಗಿದೆ.












Click it and Unblock the Notifications