ರುಪೇ ಕಾರ್ಡ್ ಬಳಸಿ ಆನ್ ಲೈನ್ ಶಾಪಿಂಗ್ ಮಾಡಿ

ಮುಂಬೈ, ಏ. 9: ಕೇವಲ ವೀಸಾ ಕಾರ್ಡ್ ಮತ್ತು ಮಾಸ್ಟರ್ ಕಾರ್ಡ್ ಗೆ ಸೀಮಿತವಾಗಿದ್ದ ಇ-ಕಾಮರ್ಸ್ ವ್ಯವಹಾರಗಳನ್ನು ಇನ್ನು ಮುಂದೆ ರುಪೇ ಕಾರ್ಡ್ ಮೂಲಕವೂ ನಡೆಸಬಹುದು.

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ಕೊಡಮಾಡುವ ರೂಪೇ ಕಾರ್ಡ್‌ ಬಳಸಿ ಇ-ಕಾಮರ್ಸ್‌ ವಹಿವಾಟು ನಡೆಸಬಹುದು ಎಂದು ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (ಎನ್‌ಪಿಸಿಐ) ತಿಳಿಸಿದೆ.[ಶೀಘ್ರವೇ ಭಾರತದ ಮಾರುಕಟ್ಟೆಗೆ ಆಲಿಬಾಬಾ ಆಗಮನ]

card

ಬಸ್‌, ರೈಲು ಮತ್ತು ವಿಮಾನದ ಟಿಕೆಟ್‌ ಖರೀದಿದಗೂ, ಕಾಯ್ದಿರುಸುವಿಕೆಗೂ ರುಪೇ ಕಾರ್ಡ್‌ ಬಳಸಬಹುದು. ವಿದೇಶಿ ಮೂಲದ ವೀಸಾ ಮತ್ತು ಮಾಸ್ಟರ್‌ ಕಾರ್ಡ್‌ ಗಳೇ ದೇಶದಲ್ಲಿ ಜನಪ್ರಿಯವಾಗಿವೆ. ರುಪೇ ಕಾರ್ಡ್ ಭಾರತದ್ದಾಗಿದ್ದು ಜನರನ್ನು ಸೆಳೆಯಲು ಈ ತಂತ್ರ ಅನುಸರಿಸಲಾಗಿದೆ.

ಫ್ಲಿಪ್‌ಕಾರ್ಟ್‌, ಐಆರ್‌ಸಿಟಿಸಿ, ಜೆಟ್‌ ಏರ್‌ವೇಸ್‌, ಸ್ನ್ಯಾಪ್‌ಡೀಲ್‌, ಎಲ್‌ಐಸಿ, ಬುಕ್‌ ಮೈ ಶೋ ಸೇರಿದಂತೆ ಸುಮಾರು 30 ಸಾವಿರಕ್ಕೂ ಅಧಿಕ ಆನ್‌ಲೈನ್‌ ಕಂಪೆನಿಗಳಲ್ಲಿ ರುಪೇ ಕಾರ್ಡ್‌ ಮೂಲಕ ವಹಿವಾಟು ನಡೆಸಬಹುದು.[ಇ ಕಾಮರ್ಸ್ ಗೆ ಕಾಲಿಟ್ಟ ಭಾರತೀಯ ಅಂಚೆ]

ದೇಶದಲ್ಲಿ ಈಗಾಗಲೇ 140 ಮಿಲಿಯನ್ ರುಪೇ ಕಾರ್ಡ್ ಗಳಿವೆ. ರಾಜ್ಯದ ಸರ್ಕಾರದ ಸ್ವಾಮ್ಯದಲ್ಲಿರುವ ಬ್ಯಾಂಕ್ ಗಳು ಈ ಕಾರ್ಡ್ ನೀಡುವುದರಲ್ಲಿ ಮುಂಚೂಣಿಯಲ್ಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+