ಪಬ್‍ಜೀ ಮೊಬೈಲ್ ಇಂಡಿಯಾ ಸೀರೀಸ್ ಘೋಷಣೆ, 1 ಕೋಟಿ ರು ಬಹುಮಾನ

ಬೆಂಗಳೂರು, ಜನವರಿ 10: ಕೇವಲ ಎಂಟು ತಿಂಗಳಲ್ಲಿ ಜಾಗತಿಕ ಮಟ್ಟದಲ್ಲಿ 200 ದಶಲಕ್ಷಕ್ಕೂ ಅಧಿಕ ಡೌನ್‍ಲೋಡ್ ಆಗಿ PUBG ಸಾಧನೆಯ ಉತ್ತುಂಗಕ್ಕೆ ಪಾರವೇ ಇಲ್ಲದಂತಾಗಿದೆ. ಆರಂಭವಾದ ಕೆಲವೇ ತಿಂಗಳಲ್ಲಿ ಪಬ್‍ಜಿ ಮೊಬೈಲ್ ಈ ಸಾಧನೆ ಮಾಡಿದೆ.

ಅಧಿಕೃತ ಪಬ್‍ಜಿ ಮೊಬೈಲ್ ಕ್ಯಾಂಪಸ್ ಚಾಂಪಿಯನ್‍ಶಿಪ್ ಅನ್ನು 2018 ರ ಅಕ್ಟೋಬರ್ ನಲ್ಲಿ ಆರಂಭಿಸಿದ ದಿನದಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

30 ನಗರಗಳಲ್ಲಿ 1000 ಕ್ಕೂ ಹೆಚ್ಚು ಕಾಲೇಜುಗಳಲ್ಲಿ ನಡೆದ ಈ ಟೂರ್ನಮೆಂಟ್‍ನಲ್ಲಿ 2,50,000 ಕ್ಕೂ ಹೆಚ್ಚು ಜನರು ನೋಂದಣಿ ಮಾಡಿಸಿಕೊಂಡಿದ್ದರು. ಅದೂ ಕೂಡ ಕೇವಲ 3 ವಾರಗಳಲ್ಲಿ. ಈ ಯಶಸ್ಸಿನ ಹಿನ್ನೆಲೆಯಲ್ಲಿ ಟೆನ್ಸೆಂಟ್ ಗೇಮ್ಸ್ ಮತ್ತು ಪಬ್‍ಜಿ ಕಾರ್ಪ್ ಇದೀಗ ಒಪ್ಪೊಪಬ್‍ಜೀ ಮೊಬೈಲ್ ಇಂಡಿಯಾ ಸೀರೀಸ್ 2019 ಅನ್ನು ಆರಂಭಿಸುತ್ತಿದೆ.

PUBG MOBILE is developed by Tencent Games and PUBG Corp

ಇದು ಭಾರತದಲ್ಲಿ ಆಯೋಜಿಸುತ್ತಿರುವ ಓಪನ್-ಟು-ಆಲ್ ಟೂರ್ನಮೆಂಟ್ ಇದಾಗಿದೆ. ದೇಶದಲ್ಲಿ ಇಕೊಸಿಸ್ಟಂ ಸುಸ್ಥಿರ ಇಸ್ಪೋಟ್ಸ್ ಅನ್ನು ನಿರ್ಮಾಣ ಮಾಡುವ ಬದ್ಧತೆಯ ನಿಖರವಾದ ಹೆಜ್ಜೆಯಾಗಿದೆ. ಭಾರತೀಯ ಇ-ಸ್ಪೋರ್ಟ್ಸ್ ಟೂರ್ನಮೆಂಟ್‍ನಲ್ಲಿ ಅತಿದೊಡ್ಡ ಬಹುಮಾನದ ಟೂರ್ನಮೆಂಟ್ ಇದಾಗಿದೆ.

ಬರೋಬ್ಬರಿ 1 ಕೋಟಿ ರೂಪಾಯಿ ನಗದು ಬಹುಮಾನದ ಟೂರ್ನಿ ಇದಾಗಿದ್ದು, ನಗದು ಬಹುಮಾನದ ಜತೆಗೆ ವಿಜೇತರಿಗೆ ಒಪ್ಪೋ ಸಂಸ್ಥೆಯು ಮೊಬೈಲ್ ಫೋನ್‍ಗಳನ್ನು ಬಹುಮಾನವಾಗಿ ಪ್ರಾಯೋಜನೆ ಮಾಡುತ್ತಿದೆ.

ಲೆವೆಲ್ 20 ರ ನಂತರ ಪಬ್‍ಜೀ ಮೊಬೈಲ್ ಅಕೌಂಟ್ ಹೊಂದಿರುವ ಎಲ್ಲಾ ಭಾರತೀಯ ಪ್ರಜೆಗಳು ಈ ಟೂರ್ನಮೆಂಟ್‍ನಲ್ಲಿ ಪಾಲ್ಗೊಳ್ಳಬಹುದಾಗಿದೆ. ಈ ಟೂರ್ನಿಯು ಆಟಗಾರರಿಗೆ ವೈವಿಧ್ಯಮಯ ಬ್ಯಾಟಲ್‍ಫೀಲ್ಡ್ ಅನ್ನು ಒದಗಿಸುತ್ತದೆ. ವಿವಿಧ ಮ್ಯಾಪ್‍ಗಳಲ್ಲಿ ಸ್ಕ್ವಾಡ್‍ಗಳು ಹೋರಾಟಗಳಲ್ಲಿ ತೊಡಗಿರುತ್ತಾರೆ. ಮೂಲ ಪಬ್‍ಜೀ ಮೊಬೈಲ್ ಮ್ಯಾಪ್ ಎರಾಂಗಲ್ಡ್ ಕೂಡ ಒಂದಾಗಿರುತ್ತದೆ. ಇನ್-ಗೇಮ್ ಕ್ಯಾಲಿಫೈಯರ್ ಹಂತದಲ್ಲಿ ನೋಂದಾಯಿತ ಸ್ಕ್ವಾಡ್‍ಗಳು ಒಟ್ಟಾಗಿ ಆಡುತ್ತಾರೆ.

ಇದರಲ್ಲಿ ಟಾಪ್ 2,000 ತಂಡಗಳು ಆನ್‍ಲೈನ್ ಪ್ಲೇಆಫ್‍ಗೆ ಆಯ್ಕೆಯಾಗುತ್ತವೆ. ಈ ಪೈಕಿ ಅತ್ಯುತ್ತಮವಾದ 20 ತಂಡಗಳನ್ನು ಗ್ರ್ಯಾಂಡ್ ಫೈನಲ್ಸ್‍ಗೆ ಆಯ್ಕೆ ಮಾಡಲಾಗುತ್ತದೆ. ಆಟಗಾರರಿಂದ ನೋಂದಣಿ ಮಾಡಿಸಿಕೊಳ್ಳಲು ಯಾವುದೇ ಮಿತಿ ಇರುವುದಿಲ್ಲ. ಆದಾಗ್ಯೂ, ಆನ್‍ಲೈನ್-ಕಟ್‍ಆಫ್‍ನಲ್ಲಿ ಫಿಲ್ಟರ್ ಮಾಡಲಾಗುತ್ತದೆ.

ಶ್ರೇಯಾಂಕದಲ್ಲಿ ಮೊದಲ ಸ್ಥಾನ ಪಡೆಯುವ ತಂಡ 30,00,000 ರೂಪಾಯಿಗಳ ಬಹುಮಾನವನ್ನು ಗಳಿಸಬಹುದಾಗಿದ್ದು, ಎರಡನೇ ಸ್ಥಾನ ಗಳಿಸುವ ತಂಡಕ್ಕೆ 10,00,000 ರೂಪಾಯಿ ಮತ್ತು ಮೂರನೇ ಸ್ಥಾನ ಪಡೆಯುವ ತಂಡಕ್ಕೆ 5,00,000 ರೂಪಾಯಿ ಸಿಗಲಿದೆ.

ಭಾರತದ ಈ ಸರಣಿಗೆ ನೋಂದಣಿ ಪ್ರಕ್ರಿಯೆ 2019 ರ ಜನವರಿ 3 ರಂದು ಆರಂಭವಾಗಿದ್ದು, ನೋಂದಣಿ ಉಚಿತವಾಗಿರುತ್ತದೆ. 2019 ರ ಮಾರ್ಚ್ 2 ಮತ್ತು 3 ರಂದು ಫೈನಲ್ಸ್ ನಡೆಯಲಿದೆ. ಈ ಟೂರ್ನಮೆಂಟ್ ಅನ್ನು ಪಬ್‍ಜೀ ಮೊಬೈಲ್‍ನ ಯೂಟ್ಯೂಬ್ ಮತ್ತು ಫೇಸ್‍ಬುಕ್ ಚಾನೆಲ್‍ನಲ್ಲಿ ಪ್ರಸಾರ ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+