ಭಾರತಕ್ಕೆ ಯುಎಸ್ ರೀತಿ ಮತ್ತು ನೇರ ಹಣ ವರ್ಗಾವಣೆ ಪ್ಯಾಕೇಜ್‌ ಬೇಕು: ಅಭಿಜಿತ್ ಬ್ಯಾನರ್ಜಿ

ನವದೆಹಲಿ, ಮೇ 5: ಭಾರತಕ್ಕೆ ಅಮೆರಿಕದಂತೆ ಹಾಗೂ ನೇರ ಹಣ ವರ್ಗಾವಣೆ ಮಾದರಿಯ ಪ್ಯಾಕೇಜ್‌ಗಳ ಅವಶ್ಯಕತೆ ಇದೆ ಎಂದು ನೋಬೆಲ್ ಪ್ರಶಸ್ತಿ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಹೇಳಿದ್ದಾರೆ.

Recommended Video

      ದಾವಣಗೆರೆ ನಗರದಲ್ಲಿಂದು ವ್ಯಾಪಾರ ವಹಿವಾಟು ಪ್ರಾರಂಭ | Davangere | Oneindia Kannada

      ದೇಶದಲ್ಲಿ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ರಘುರಾಮ್ ರಾಜನ್ ಬಳಿಕ ಅಭಿಜಿತ್ ಬ್ಯಾನರ್ಜಿ ಅವರ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.

      ಜನರಿಗೆ ನೀಡುತ್ತಿರುವ ನೇರ ನಗದು ವರ್ಗಾವಣೆ ಬಡ ಜನರಿಗೆ ತಲುಪುತ್ತಿದೆಯೇ ಎಂಬುದು ಚರ್ಚೆಯ ವಿಷಯವಾಗಿದೆ. 60% ಜನಸಂಖ್ಯೆಗೆ ಹಣವನ್ನು ನೀಡುವಲ್ಲಿ ಯಾವುದೇ ತಪ್ಪಿಲ್ಲ. ಬಹುಶಃ ಅವರಲ್ಲಿ ಕೆಲವರಿಗೆ ಇದು ಅಗತ್ಯವಿರುವುದಿಲ್ಲ. ಆದರೆ ಅವರು ಅದನ್ನು ಖರ್ಚು ಮಾಡಿದರೆ, ಅದು ಆರ್ಥಿಕತೆ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ.

      Provide Cash To India’s Poorest 60% To Revive Economy

      ತಮ್ಮ ಜೀವ ಉಳಿಸಲು ಆಹಾರ ಧಾನ್ಯಗಳ ಅಗತ್ಯವಿರುವ ಪ್ರತಿಯೊಬ್ಬ ವ್ಯಕ್ತಿಗೂ ಮೂರರಿಂದ ಆರು ತಿಂಗಳವರೆಗೆ ಸರ್ಕಾರ ತಾತ್ಕಾಲಿಕ ಪಡಿತರ ಚೀಟಿ ನೀಡಬೇಕು. ಹಣ, ಗೋಧಿ ಮತ್ತು ಅಕ್ಕಿಯನ್ನು ನೀಡಲು ಪಡಿತರ ಚೀಟಿಗಳನ್ನು ಬಳಸಬಹುದು ಎಂದು ಸಲಹೆ ನೀಡಿದರು.

      ಭಾರತದಲ್ಲಿ ಬೇಡಿಕೆಯ ಸಮಸ್ಯೆ ಇದೆ. ಈ ಸಮಸ್ಯೆ ಇನ್ನ ಮುಂದೆ ದೊಡ್ಡದಾಗಲಿದೆ. ಜನರ ಬಳಿ ಖರೀದಿಸಲು ಹಣದ ಕೊರತೆ ಇದೆ. ಇದರಿಂದ ಅಂಗಡಿಗಳನ್ನು ಮುಚ್ಚಲಾಗುತ್ತಿದೆ. ಭಾರತದಲ್ಲಿ ದೊಡ್ಡ ಪ್ಯಾಕೇಜ್ ಅನ್ನು ಘೋಷಿಸಿಲ್ಲ. ಯುಎಸ್, ಜಪಾನ್, ಯುರೋಪ್ ಏನು ಮಾಡುತ್ತಿವೆ ಎಂಬುದನ್ನು ನಾವು ನೋಡಬೇಕು.

      ನಾವು ಇನ್ನೂ ಜಿಡಿಪಿಯ 1% ಬಗ್ಗೆ ಮಾತನಾಡುತ್ತಿದ್ದೇವೆ. ಯುಎಸ್‍ಎ ಜಿಡಿಪಿಯ 10% ಹಣವನ್ನು ಕೊರೊನಾ ವಿರುದ್ಧದ ಹೋರಾಟಕ್ಕೆ ಮೀಸಲಿಟ್ಟಿದೆ ಎಂದರು.

      ಲಾಕ್‍ಡೌನ್‍ನಿಂದ ತೀವ್ರವಾಗಿ ಹಾನಿಗೊಳಗಾದ ಆರ್ಥಿಕತೆಯನ್ನು ರಕ್ಷಿಸಲು ಭಾರತವು ಒಂದು ದೊಡ್ಡ ಪ್ರತಿಕ್ರಿಯೆಯನ್ನು ಪರಿಗಣಿಸಬೇಕು. ಬೇಡಿಕೆಯನ್ನು ಸೃಷ್ಟಿಸಲು ಮತ್ತು ದಿವಾಳಿತನದ ಸರಪಳಿಗಳನ್ನು ತಡೆಯಲು ಜನರ ಕೈಯಲ್ಲಿ ಹಣವನ್ನು ನೀಡಬೇಕು ಎಂದು ಅಭಿಪ್ರಾಯಪಟ್ಟರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+