ಬಜೆಟ್ ವಿಶ್ಲೇಷಣೆ: ವಸತಿ ಕ್ಷೇತ್ರಕ್ಕೆ ದೊರೆತಿಲ್ಲ ವಿಶೇಷ ಪ್ರೋತ್ಸಾಹ

ಬೆಂಗಳೂರು, ಮಾ.6 : ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿರುವ 2015-16ನೇ ಸಾಲಿನ ಮುಂಗಡಪತ್ರವು ಉತ್ತಮ ಪ್ರಗತಿಯತ್ತ ಗುರಿಯಿಟ್ಟುಕೊಂಡಿದೆ. ಆದಾಗ್ಯೂ ವಸತಿ ಕ್ಷೇತ್ರಕ್ಕೆ ಈ ಬಾರಿಯ ಬಜೆಟ್ ನಲ್ಲಿ ವಿಶೇಷ ಪ್ರೋತ್ಸಾಹ ದೊರೆತಿಲ್ಲ ಎಂದು ಬ್ರಿಗೇಡ್ ಗ್ರೂಪ್‍ ಸಿಎಂಡಿ ಎಂ.ಆರ್.ಜೈಶಂಕರ್ ಬೇಸರ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್ ನಲ್ಲಿ ಮೂಲಸೌಕರ್ಯ, ಸ್ವಚ್ಛ ಭಾರತ, ಪಿಂಚಣಿ ಯೋಜನೆಗಳ ಪರಿಚಯ, ಕಪ್ಪುಹಣವನ್ನು ಮಟ್ಟ ಹಾಕುವುದು ಹಾಗೂ ಸುಗಮ ಉದ್ಯಮವನ್ನು ಸುಧಾರಿಸುವ ಕ್ರಮಗಳ ಮೂಲಕ ಪ್ರಗತಿ ಸಾಧಿಸುವತ್ತ ಆದ್ಯತೆ ನೀಡಲಾಗಿದೆ. ಆದರೆ ವಸತಿ ಕ್ಷೇತ್ರವನ್ನು ಪರಿಗಣಿಸಿದರೆ, 'ಎಲ್ಲರಿಗೂ ಸೂರು' ಎಂಬ ದೂರದೃಷ್ಟಿಯನ್ನು ಹೊರತುಪಡಿಸಿ ಬೇರೆ ಯಾವುದೇ ವಿಶೇಷ ಪ್ರೋತ್ಸಾಹ ದೊರೆತಿಲ್ಲ. ಆ ನಿಟ್ಟಿನಲ್ಲಿ ನಮ್ಮ ಉದ್ಯಮಕ್ಕೆ ಈ ಬಜೆಟ್ ಬಗ್ಗೆ ನಿರಾಶೆ ತಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Post budget reaction from M.R Jaishankar

ಆಳನೋಟ ಅಗತ್ಯ - ಸುರೇಶ್ ಹರಿ, ಕಾರ್ಯದರ್ಶಿಗಳು, ಕ್ರೆಡಾಯ್ ಬೆಂಗಳೂರು
ಈ ಮಧ್ಯೆ, ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಕ್ರೆಡಾಯ್ ಬೆಂಗಳೂರಿನ ಕಾರ್ಯದರ್ಶಿಗಳಾದ ಸುರೇಶ್ ಹರಿ ಅವರು ಬಜೆಟ್ ಪ್ರೇರೇಪಿಸುವಂತಿದೆ ಹಾಗೂ ಅದನ್ನು ಆಳವಾಗಿ ಅಧ್ಯಯನ ಮಾಡಬೇಕಿದೆ ಎಂದು ಹೇಳಿದ್ದಾರೆ. ಆದಾಗ್ಯೂ ಮೂಲಸೌಕರ್ಯದ ಪ್ರಗತಿಯತ್ತ ಸ್ಪಷ್ಟ ಗಮನ ಕಾಣುತ್ತಿದೆ.

ರಿಯಾಲ್ಟಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಕೌಶಲ್ಯಭರಿತ ಕಾರ್ಯಶಕ್ತಿಯನ್ನು ಹೆಚ್ಚಿಸಲಿರುವ ಕೌಶಲ್ಯ ಮಿಶನ್ ವರ್ಧನೆ. ಮೂಲಸಕೌರ್ಯದ ನಿಯಂತ್ರಣದಲ್ಲಿ ಸುಧಾರಣೆ, ಏಕ ಗವಾಕ್ಷಿ ವಿಲೇವಾರಿ-ಮೂಲಸೌಕರ್ಯ ನಿಧಿಗೆ ಅನುದಾನ ಹೆಚ್ಚಳ, ರಸ್ತೆ ಯೋಜನೆ, ಗ್ರಾಮೀಣ ಮತ್ತು ನಗರ ವಸತಿ, ಆರ್ ಇಐಟಿಗಳು/ ಇನ್ವ್ ಐಟಿಗಳಿಗಾಗಿ ಕ್ಯಾಪಿಟಲ್ ಗೈನ್ ಪದ್ಧತಿಯ ಸುಧಾರಣೆ, ಸಂಪತ್ತು ತೆರಿಗೆ ರದ್ದತಿ, ಹಂತ ಹಂತವಾಗಿ ಕಾರ್ಪೊರೇಟ್ ತೆರಿಗೆ ಇಳಿಕೆ, ನಗದು ವಹಿವಾಟುಗಳಿಗೆ ಕಡಿವಾಣ ಮತ್ತು 22 ಸಾಮಗ್ರಿಗಳ ಮೇಲಿನ ಅಬಕಾರಿ ಸುಂಕ ಇಳಿಕೆ ಘೋಷಣೆಗಳು ಈ ಕ್ಷೇತ್ರಕ್ಕೆ ನೆರವಾಗಬಹುದು ಎಂದರು.

Post budget reaction from M.R Jaishankar

ಕೆಲವು ವಿಷಯಗಳ ಬಗ್ಗೆ ಗಮನ ಹರಿಸಿಲ್ಲ ಅಥವಾ ಸ್ಪಷ್ಟವಾಗಿಲ್ಲ ಎಂದು ಹೇಳಿದ ಅವರು, ಜಿಎಸ್ ಟಿ ಪ್ರಾರಂಭ. ಇದರ ವಿಳಂಬವು ನಿರ್ದಿಷ್ಟ ರಾಜ್ಯ ತೆರಿಗೆಗಳ ಮೇಲೆ ಪರಿಣಾಮ ಬೀರುತ್ತದೆ, ಹಾಗಾಗಿ ಸದ್ಯಕ್ಕೆ ಸವಾಲಿದೆ. ಸ್ಮಾರ್ಟ್ ಸಿಟಿಗಳ ಬಗ್ಗೆ ಸ್ಪಷ್ಟ ನೀತಿಗಳಿಲ್ಲ. ಅಬಕಾರಿ ಸುಂಕ ಏರಿಕೆ, ಇದು ಒಳಸುರಿಗಳ ವೆಚ್ಚ ಹೆಚ್ಚಿಸಲಿದೆ. ಸೇವಾ ತೆರಿಗೆಯು ಶೇ.12.36ರಿಂದ ಶೇ.14ಕ್ಕೆ ಏರಿಕೆ- ಈ ಕ್ಷೇತ್ರವು ಈ ತೆರಿಗೆಯಿಂದ ವಿನಾಯ್ತಿಯನ್ನು ಬಯಸಿತ್ತು ಎಂದರು.

ಆದಾಗ್ಯೂ ಒಟ್ಟಾರೆ ಆರ್ಥಿಕತೆಯತ್ತ ಉತ್ತಮ ಪ್ರಯತ್ನ ಕಾಣುತ್ತಿದೆ. ಬಜೆಟ್ ಕುರಿತ ಎಲ್ಲಾ ಚಟುವಟಿಕೆಯಿಂದ ರಿಯಲ್ ಎಸ್ಟೇಟ್ ಕ್ಷೇತ್ರವು ಅನುಕೂಲ ಪಡೆದುಕೊಳ್ಳಲಿದೆ ಮತ್ತು 2015ನೇ ವರ್ಷವು ಭರವಸೆದಾಯಕವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. (ಒನ್ಇಂಡಿಯಾ ಬಿಜಿನೆಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+