ಪಿಎಫ್ ವಯೋಮಿತಿ 58 ರಿಂದ 60ಕ್ಕೆ ಏರಿಸಲು ಚಿಂತನೆ
ನವದೆಹಲಿ, ಫೆ. 16 : ಕಾರ್ಮಿಕರ ಭವಿಷ್ಯ ನಿಧಿ ಪಡೆಯುವ ವಯೋಮಿತಿಯಲ್ಲಿ ಏರಿಕೆ ಮಾಡಬೇಕೆಂಬ ಪ್ರಸ್ತಾವನೆಗೆ ಒಪ್ಪಿಗೆ ಸಿಗುವ ಲಕ್ಷಣಗಳು ಗೋಚರವಾಗಿವೆ.
ಪಿಂಚಣಿ ಪಡೆಯುವ ವಯೋಮಿತಿಯನ್ನು 58 ರಿಂದ 60ಕ್ಕೆ ಏರಿಸಬೇಕು ಎಂಬ ಪ್ರಸ್ತಾವನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾರ್ಮಿಕರ ಭವಿಷ್ಯ ನಿಧಿ ಇಲಾಖೆ (ಇಪಿಎಫ್ಒ) ಶೀಘ್ರ ತೀರ್ಮಾನ ತೆಗೆದುಕೊಳ್ಳಲಿದೆ.[ಡಿಸೆಂಬರ್ ನಿಂದ ಪಿಎಫ್ ವಿಥ್ ಡ್ರಾ ಬಹಳ ಸುಲಭ]

ಸದ್ಯ ಪಿಎಫ್ ಅವಧಿ 58 ವರ್ಷಕ್ಕೆ ಕೊನೆಗೊಳ್ಳುತ್ತಿದೆ. ಆ ಬಳಿಕ ಪಿಂಚಣಿ ನೀಡಲಾಗುತ್ತಿದೆ. ಆದರೆ ಈ ಸೌಲಭ್ಯ ಜಾರಿಗೆ ಬಂದರೆ 60 ವರ್ಷದವರೆಗೆ ಕೆಲಸ ಮಾಡುವ ಕಾರ್ಮಿಕರು ಹಣದ ಹೂಡಿಕೆಯನ್ನು ಮುಂದುವರಿಸಬಹುದು.[ವಿದೇಶದ ಭಾರತೀಯ ಕಂಪನಿ ಉದ್ಯೋಗಿಗಳಿಗೂ ಪಿಎಫ್]
ಅಲ್ಲದೇ 58 ವರ್ಷದ ನಂತರ ಹೂಡಿಕೆ ಮಾಡಿದ ಹಣಕ್ಕೆ ಪ್ರೋತ್ಸಾಹ ಧನ ಸಹ ನೀಡಲಾಗುವುದು. ಈ ಬಗ್ಗೆ ಅಧಿಕೃತ ನಿರ್ಧಾರ ತೆಗೆದುಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ. ಪ್ರೋತ್ಸಾಹ ಧನ ನೀಡಿಕೆ ಸೌಲಭ್ಯ ವಿಸ್ತರಣೆ ಜವಾಬ್ದಾರಿ ಇಪಿಎಫ್ ಒದ ವಿಮಾ ನಿಗಮದ ಮೇಲಿರುತ್ತದೆ ಎಂದು ಇಪಿಎಫ್ ಒದ ಪ್ರಕಟಣೆ ತಿಳಿಸಿದೆ.












Click it and Unblock the Notifications