ಚುನಾವಣೆ ಬಳಿಕ ಇಂಧನ ದರ 70 ರಿಂದ 80 ಪೈಸೆ ಏರಿಕೆ

ನವದೆಹಲಿ, ಮೇ 29: ಲೋಕಸಭೆ ಚುನಾವಣೆ 2019ರ ಫಲಿತಾಂಶ ಹೊರ ಬಂದ ನಂತರ ಪೆಟ್ರೋಲ್, ಡೀಸೆಲ್ ದರ ಏರಿಕೆ ನಿರೀಕ್ಷಿತವಾಗಿದೆ. ಆದರೆ, ಮೇ 19ರಂದು 7ನೇ ಹಾಗೂ ಕೊನೆ ಹಂತದ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ) ಬೆಲೆ ಏರಿಕೆ ಬಗ್ಗೆ ಘೋಷಿಸಿತ್ತು. ಅದರಂತೆ, ಮೇ 20ರಿಂದ ಇಂದಿನ ತನಕ ಸರಿ ಸುಮಾರು 70 ರಿಂದ 80 ಪೈಸೆಯಂತೆ ಇಂಧನ ದರ ಏರಿಕೆ ಕಂಡಿದೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮಂಗಳವಾರ(ಮೇ 29)ದಂದು ನೀಡಿರುವ ಪ್ರಕಟಣೆಯಂತೆ, ಕಳೆದ 9 ದಿನಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 83ಪೈಸೆ ಹಾಗೂ ಡೀಸೆಲ್ ಬೆಲೆ 73 ಪೈಸೆ ಪ್ರತಿ ಲೀಟರ್ ಗೆ ಏರಿಕೆಯಾಗಿದೆ.

ಇನ್ನು ಬೆಲೆ ಏರಿಕೆ ಮುಂದುವರೆದಿದ್ದು ಮಂಗಳವಾರದಂದು ಪೆಟ್ರೋಲ್ ಬೆಲೆ11 ಪೈಸೆ, ಹಾಗೂ ಡೀಸೆಲ್ ಬೆಲೆ 5 ಪೈಸೆ ಏರಿಕೆ ಕಂಡಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ 2018ರ ಸಂದರ್ಭದಲ್ಲಿ 19 ದಿನಗಳ ಕಾಲ ಇಂಧನ ಬೆಲೆಯನ್ನು ಏರಿಕೆ ಮಾಡಿರಲಿಲ್ಲ. ಮೇ 14, 2018ರ ಪೆಟ್ರೋಲ್ ಬೆಲೆ 3.8 ರು ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆ 3.38 ರು ಪ್ರತಿ ಲೀಟರ್ ನಷ್ಟು ಏರಿಕೆ ಮಾಡಲಾಗಿತ್ತು. ಈಗ ಇದೇ ರೀತಿ ಏಪ್ರಿಲ್, ಮೇ ತಿಂಗಳಿನಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್ ಸಂಸ್ಥೆಗಳು ಇಂಧನ ದರ ಏರಿಕೆಯನ್ನು ತಡೆ ಹಿಡಿದಿದ್ದವು.

ಭಾರತ ತನ್ನ ಶೇ 80ರಷ್ಟು ಇಂಧನವನ್ನು ಆಮದು

ಭಾರತ ತನ್ನ ಶೇ 80ರಷ್ಟು ಇಂಧನವನ್ನು ಆಮದು

ಇರಾನ್ ಮೇಲೆ ಅಮೆರಿಕ ಹೇರುವ ನಿರ್ಬಂಧದ ಮೇಲೆ ಭಾರತ, ಚೀನಾ, ದಕ್ಷಿಣ ಕೊರಿಯಾ, ಜಪಾನ್, ಟರ್ಕಿ, ಇಟಲಿ, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ತೈವಾನ್ ದೇಶಗಳ ಭವಿಷ್ಯ ನಿಂತಿದೆ. ಹೀಗಾಗಿ, ಪೂರೈಕೆ ಕೊರತೆಯಿಂದ ಇಂಧನ ಬೆಲೆ ಏರಿಕೆ ಅನಿವಾರ್ಯ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹೇಳಿದೆ. ಕಚ್ಚಾತೈಲ ಬೆಲೆ ಈ ತಿಂಗಳ ಅಂತ್ಯಕ್ಕೆ ಏರಿಕೆಯಾಗುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ.ಭಾರತ ತನ್ನ ಶೇ 80ರಷ್ಟು ಇಂಧನವನ್ನು ಆಮದು ಮಾಡಿಕೊಳ್ಳುತ್ತಿದೆ.

3 ರಿಂದ 5 ರು ಪ್ರತಿ ಲೀಟರ್ ಏರಿಕೆ ಸಾಧ್ಯತೆ

3 ರಿಂದ 5 ರು ಪ್ರತಿ ಲೀಟರ್ ಏರಿಕೆ ಸಾಧ್ಯತೆ

ರೀಟೈಲ್ ದರವನ್ನು ಏರಿಕೆ ಮಾಡುವ ಸಾಧ್ಯತೆ ಹೆಚ್ಚಿದ್ದು, 3 ರಿಂದ 5 ರು ಪ್ರತಿ ಲೀಟರ್ ನಂತೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಬಹುದು. ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಪೆಟ್ರೋಲ್ 3 ರು ಪ್ರತಿ ಲೀಟರ್ ಹಾಗೂ ಡೀಸೆಲ್ 5 ರು ಪ್ರತಿ ಲೀಟರ್ ನಂತೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗಿತ್ತು. ಈ ನಷ್ಟವನ್ನು ಭರಿಸಲು ಈಗ ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಮಾಡಬಹುದು

ಬೆಂಗಳೂರು ನಗರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ

ಬೆಂಗಳೂರು ನಗರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ

ಬೆಂಗಳೂರು ನಗರದಲ್ಲಿ ಪೆಟ್ರೋಲ್ ಬೆಲೆ
* ಮಂಗಳವಾರ(ಮೇ 29)ದಂದು ಪೆಟ್ರೋಲ್: 74.21ರು (0.10 ಪೈಸೆ ಏರಿಕೆ)
* ಸೋಮವಾರದಂದು ಪೆಟ್ರೋಲ್ : 74.21 ರು(+0.10ಪೈಸೆ )
* ಭಾನುವಾರದಂದು ಪೆಟ್ರೋಲ್ : 74.11ರು (+0.10ಪೈಸೆ )

ಡೀಸೆಲ್ ಬೆಲೆ
* ಮಂಗಳವಾರ(ಮೇ 29)ದಂದು ಡೀಸೆಲ್ : 68.86ರು (0.5 ಪೈಸೆ ಏರಿಕೆ)
* ಸೋಮವಾರದಂದು ಡೀಸೆಲ್: 68.86 ರು(+0.05ಪೈಸೆ)
* ಭಾನುವಾರದಂದು ಡೀಸೆಲ್: 68.81ರು

ನವದೆಹಲಿ ನಗರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ

ನವದೆಹಲಿ ನಗರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ

ನವದೆಹಲಿ ನಗರದಲ್ಲಿ ಪೆಟ್ರೋಲ್ ಬೆಲೆ
* ಮಂಗಳವಾರ(ಮೇ 29)ದಂದು ಪೆಟ್ರೋಲ್: 71.86ರು (0.11 ಪೈಸೆ ಏರಿಕೆ)
* ಸೋಮವಾರದಂದು ಪೆಟ್ರೋಲ್ : 71.86 ರು(+0.09ಪೈಸೆ )
* ಭಾನುವಾರದಂದು ಪೆಟ್ರೋಲ್ : 71.77ರು (+0.10ಪೈಸೆ )
ಡೀಸೆಲ್ ಬೆಲೆ
* ಮಂಗಳವಾರ(ಮೇ 29)ದಂದು ಡೀಸೆಲ್ : 68.69ರು (0.50 ಪೈಸೆ ಏರಿಕೆ)
* ಸೋಮವಾರದಂದು ಡೀಸೆಲ್: 66.69 ರು(+0.05ಪೈಸೆ)
* ಭಾನುವಾರದಂದು ಡೀಸೆಲ್: 66.64ರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+