ಇಂಧನ ದರ ಕುಸಿತ: ಈಗ 9 ತಿಂಗಳಲ್ಲೇ ಅತ್ಯಧಿಕ ಕಡಿಮೆ ಮೊತ್ತ
ಬೆಂಗಳೂರು, ಜನವರಿ 01 : ಹೊಸ ವರ್ಷಾಚರಣೆ ಸಂದರ್ಭದಲ್ಲಿ ವಾಹನ ಸವಾರರಿಗೆ ಶುಭ ಸುದ್ದಿ ಸಿಕ್ಕಿದೆ. ಕಳೆದ ಒಂಭತ್ತು ತಿಂಗಳಲ್ಲೆ ಅತ್ಯಧಿಕ ಕಡಿಮೆ ಮೊತ್ತಕ್ಕೆ ಇಂಧನ ದರ ಕುಸಿದಿದೆ. ಪೆಟ್ರೋಲ್ ದರ ಸರಾಸರಿ 19 -21 ಪೈಸೆ ಹಾಗೂ ಡೀಸೆಲ್ ದರ 23-25 ಪೈಸೆ ದರದಂತೆ ಇಳಿಕೆ ಕಂಡಿದೆ.
ನವದೆಹಲಿಯಲ್ಲಿ ಲೀಟರ್ ಪೆಟ್ರೋಲ್ 68.84 ಹಾಗೂ ಲೀಟರ್ ಡೀಸೆಲ್ಗೆ 46 ಪೈಸೆ ಇಳಿಕೆಯಾಗಿ 62.86 ರೂ.ಗೆ ತಲುಪಿದೆ.
ಅಕ್ಟೋಬರ್ನಲ್ಲಿ ಇಂಧನ ಬೆಲೆ ಗಗನಕ್ಕೇರಿತ್ತು. ದೆಹಲಿಯಲ್ಲಿ ಗರಿಷ್ಠ 84ಕ್ಕೆ ತಲುಪಿದರೆ, ವಾಣಿಜ್ಯ ನಗರಿಯಲ್ಲಿ ಗರಿಷ್ಠ 91.34 ರೂ.ಗೆ ಏರಿಕೆಯಾಗಿತ್ತು. ಇದೀಗ ಆ ದರ ದೆಹಲಿಯಲ್ಲಿ ಕನಿಷ್ಠ 68.84ಕ್ಕೆ ತಲುಪಿದರೆ, ಮುಂಬೈನಲ್ಲಿ 74.47ಕ್ಕೆ ಕುಸಿದಿದೆ.
ಇರಾನ್ ಮೇಲೆ ಹೇರಿದ್ದ ನಿಷೇಧವನ್ನು ಅಮೆರಿಕದ ಟ್ರಂಪ್ ಸರ್ಕಾರವು ತಾತ್ಕಾಲಿಕವಾಗಿ ಸಡಿಲಿಕೆ ಮಾಡಿದ್ದು, ತೈಲ ಉತ್ಪಾದನೆ ಮೇಲೆ ನಿಯಂತ್ರಣ ಸಾಧಿಸಿದ್ದು, ಪ್ರತಿ ಬ್ಯಾರೆಲ್ ಗೆ 86.74 ಯುಎಸ್ ಡಾಲರ್ ನಷ್ಟು ತಲುಪಿದ್ದ ಕಚ್ಚಾತೈಲ ಬೆಲೆ ಈಗ ಶೇ 40 ರಷ್ಟು ಕುಸಿತ ಕಂಡಿದ್ದರಿಂದ ತೈಲ ದರ ಇಳಿಕೆ ಸಾಧ್ಯವಾಗಿದೆ.

ಬೆಂಗಳೂರಿನಲ್ಲಿ ಇಂಧನ ದರ ಎಷ್ಟಿದೆ?
ಪೆಟ್ರೋಲ್ ದರ
ಮಂಗಳವಾರ (ಜನವರಿ 01) ದಂದು ಪೆಟ್ರೋಲ್ 69.21ರು (18 ಪೈಸೆ ಇಳಿಕೆ)
ಸೋಮವಾರ ಪೆಟ್ರೋಲ್ 69.39 ರು(21 ಪೈಸೆ ಇಳಿಕೆ)
ಭಾನುವಾರದಂದು ಪೆಟ್ರೋಲ್ 69.60ರು (22ಪೈಸೆ ಕಡಿತ)
ಡೀಸೆಲ್ ಬೆಲೆ
ಮಂಗಳವಾರ(ಜನವರಿ 01)ದಂದು ಡೀಸೆಲ್ 63.01 ರು (19 ಪೈಸೆ ಇಳಿಕೆ) ಸೋಮವಾರದಂದು ಡೀಸೆಲ್ 63.20 ರು (23 ಪೈಸೆ ಇಳಿಕೆ)
ಭಾನುವಾರದಂದು ಡೀಸೆಲ್ 63.43 ರು (24 ಪೈಸೆ ಇಳಿಕೆ)

ಚೆನ್ನೈಯಲ್ಲಿ ಇಂಧನ ದರ ಇಳಿಕೆ
ಮಂಗಳವಾರ (ಜನವರಿ 01) ದಂದು ಪೆಟ್ರೋಲ್ 71.22ರು (19 ಪೈಸೆ ಇಳಿಕೆ)
ಸೋಮವಾರ ಪೆಟ್ರೋಲ್71.41 ರು(21 ಪೈಸೆ ಇಳಿಕೆ)
ಭಾನುವಾರದಂದು ಪೆಟ್ರೋಲ್ 71.62ರು (23ಪೈಸೆ ಕಡಿತ)
ಡೀಸೆಲ್ ಬೆಲೆ
ಮಂಗಳವಾರ(ಜನವರಿ 01)ದಂದು ಡೀಸೆಲ್ 66.14 ರು (21 ಪೈಸೆ ಇಳಿಕೆ) ಸೋಮವಾರದಂದು ಡೀಸೆಲ್ 66.35 ರು (24 ಪೈಸೆ ಇಳಿಕೆ)
ಭಾನುವಾರದಂದು ಡೀಸೆಲ್ 66.59 ರು (25 ಪೈಸೆ ಇಳಿಕೆ)

ಮುಂಬೈಯಲ್ಲಿ ಇಂಧನ ದರ
ಮಂಗಳವಾರ (ಜನವರಿ 01) ದಂದು ಪೆಟ್ರೋಲ್ 65.56ರು (20 ಪೈಸೆ ಇಳಿಕೆ)
ಸೋಮವಾರ ಪೆಟ್ರೋಲ್ 65.76 ರು(25 ಪೈಸೆ ಇಳಿಕೆ)
ಭಾನುವಾರದಂದು ಪೆಟ್ರೋಲ್ 66.01ರು (24 ಪೈಸೆ ಕಡಿತ)
ಡೀಸೆಲ್ ಬೆಲೆ
ಮಂಗಳವಾರ(ಜನವರಿ 01)ದಂದು ಡೀಸೆಲ್ 65.56 ರು (20 ಪೈಸೆ ಇಳಿಕೆ) ಸೋಮವಾರದಂದು ಡೀಸೆಲ್ 65.76 ರು (25 ಪೈಸೆ ಇಳಿಕೆ)
ಭಾನುವಾರದಂದು ಡೀಸೆಲ್ 66.01 ರು (24 ಪೈಸೆ ಇಳಿಕೆ)

ಕೋಲ್ಕತ್ತಾದಲ್ಲಿ ಇಂಧನ ದರ
ಮಂಗಳವಾರ (ಜನವರಿ 01) ದಂದು ಪೆಟ್ರೋಲ್ 70.78ರು (18 ಪೈಸೆ ಇಳಿಕೆ)
ಸೋಮವಾರ ಪೆಟ್ರೋಲ್ 70.96 ರು(31 ಪೈಸೆ ಇಳಿಕೆ)
ಭಾನುವಾರದಂದು ಪೆಟ್ರೋಲ್ 71.27ರು (10ಪೈಸೆ ಕಡಿತ)
ಡೀಸೆಲ್ ಬೆಲೆ
ಮಂಗಳವಾರ(ಜನವರಿ 01)ದಂದು ಡೀಸೆಲ್ 64.42ರು (19 ಪೈಸೆ ಇಳಿಕೆ) ಸೋಮವಾರದಂದು ಡೀಸೆಲ್ 64.61 ರು (35 ಪೈಸೆ ಇಳಿಕೆ)
ಭಾನುವಾರದಂದು ಡೀಸೆಲ್ 63.96 ರು (11 ಪೈಸೆ ಇಳಿಕೆ)












Click it and Unblock the Notifications