ದೀಪಾವಳಿಗೂ ಮುನ್ನ ಪೆಟ್ರೋಲ್, ಡೀಸೆಲ್ ಇನ್ನಷ್ಟು ಇಳಿಕೆ

ನವದೆಹಲಿ, ನವೆಂಬರ್ 04: ದೀಪಾವಳಿ ಹಬ್ಬಕ್ಕೂ ಮುನ್ನ ವಾಹನ ಸವಾರರಿಗೆ ನೆಮ್ಮದಿಯ ಸುದ್ದಿ ಸಿಗುವ ಸಾಧ್ಯತೆಯಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಭಾನುವಾರ (ನವೆಂಬರ್ 04) ಬೆಳಗ್ಗೆ ಪರಿಷ್ಕೃತ ದರ ಪಟ್ಟಿ ಪ್ರಕಟಿಸಿವೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ. ಪ್ರತಿ ಬ್ಯಾರೆಲ್ ಬೆಲೆ 72.57 ಡಾಲರ್ ನಷ್ಟಿದೆ. ಇತ್ತೀಚೆಗೆ 86 ಡಾಲರ್ ಪ್ರತಿ ಬ್ಯಾರೆಲ್ ನಂತೆ ಏರಿಕೆಯಾಗಿತ್ತು.

ಇದಲ್ಲದೆ, ಡಾಲರ್ ಎದುರು ರೂಪಾಯಿ ಮೌಲ್ಯ ಸುಧಾರಿಸಿದೆ. ಹೀಗಾಗಿ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸತತವಾಗಿ ಇಳಿಕೆಯಾಗುತ್ತಿದೆ.

ತೈಲ ಬೆಲೆ ಮೇಲೆ ನಿಯಂತ್ರಣ ಸಿಗದ ಕಾರಣ ಜನಸಾಮಾನ್ಯರ ಮೇಲೆ ತೀವ್ರ ಆರ್ಥಿಕ ಹೊರೆಯಾಗುತ್ತಿದೆ ಎಂದು ವಿರೋಧಪಕ್ಷಗಳ ಪ್ರತಿಭಟನೆ ನಡೆಸಿ, ತೀವ್ರ ಒತ್ತಡ ಹೇರಿದ್ದವು. ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಅಕ್ಟೋಬರ್ 4ರಂದು 2.50 ರೂ. ಇಳಿಕೆ ಮಾಡಿತ್ತು. ಆದರೆ, ಕಡಿಮೆ ಮಾಡಿದ ಮೊತ್ತವನ್ನು ಮೀರಿ ಹತ್ತೇ ದಿನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿತ್ತು. ಆದರೆ, ಈಗ ಪರಿಸ್ಥಿತಿ ಸುಧಾರಿಸಿದ್ದು, ಬೆಲೆ ಸತತವಾಗಿ ಕುಸಿಯುತ್ತಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆ

ಬೆಂಗಳೂರಿನಲ್ಲಿ ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆ

ಬೆಂಗಳೂರಿನಲ್ಲಿ ಕೂಡ ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆಯಾಗಿದೆ. ಶನಿವಾರ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 19 ಪೈಸೆ ಇಳಿಕೆ ಕಂಡು, ಪ್ರತಿ ಲೀಟರ್ ಗೆ 79.63ರು ನಷ್ಟಿತ್ತು.

ಭಾನುವಾರದಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 21 ಪೈಸೆ ಕಡಿಮೆಯಾಗಿದ್ದು, 79.42ರು ನಷ್ಟಿದೆ. ಡೀಸೆಲ್ ಬೆಲೆ ಭಾನುವಾರದಂದು 17ಪೈಸೆ ಕಡಿಮೆಯಾಗಿದ್ದು, 73.76ರು ನಷ್ಟಿದೆ. ಶನಿವಾರದಂದು 11ಪೈಸೆ ಕಡಿಮೆಯಾಗಿದ್ದು, 73.93ರು ನಷ್ಟಿತ್ತು.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂಧನ ದರ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂಧನ ದರ

ನವದೆಹಲಿಯಲ್ಲಿ ಭಾನುವಾರದಂದು ಪೆಟ್ರೋಲ್ 21 ಪೈಸೆ ಹಾಗೂ ಡಿಸೇಲ್ 17 ಪೈಸೆ ದರ ಕಡಿತವಾಗಿದೆ. ಭಾನುವಾರದಂದು ದೆಹಲಿಯಲ್ಲಿ 78.78ರು (ನಿನ್ನೆ 78.99ರು) ಹಾಗೂ ಡಿಸೇಲ್ 73.36ರು (ಡೀಸೆಲ್ ಬೆಲೆ ಪ್ರತಿ ಲೀಟರ್ 73.53 ರು) ನಷ್ಟಿದೆ.

ವಾಣಿಜ್ಯ ನಗರಿ ಮುಂಬೈಯಲ್ಲಿ ಇಂಧನ ಬೆಲೆ

ವಾಣಿಜ್ಯ ನಗರಿ ಮುಂಬೈಯಲ್ಲಿ ಇಂಧನ ಬೆಲೆ

ವಾಣಿಜ್ಯ ನಗರಿ ಮುಂಬೈಯಲ್ಲಿ ಇಂಧನ ಬೆಲೆ ಬೇರೆ ನಗರಗಳಿಗೆ ಹೋಲಿಸಿದರೆ ಯಾವಾಗಲೂ ಅಧಿಕವಾಗಿರುತ್ತದೆ. ಇದಕ್ಕೆ ಜಿಎಸ್ ಟಿ ಹೇರಿಕೆಯೇ ಕಾರಣವಾಗಿದೆ. ಮುಂಬೈ ನಗರದಲ್ಲಿ ಭಾನುವಾರದಂದು ಪೆಟ್ರೋಲ್ ದರ ಪ್ರತಿ ಲೀಟರ್ ಪೆಟ್ರೋಲ್ 84.28ರು ನಷ್ಟಿದ್ದರೆ, ಡೀಸೆಲ್ ಬೆಲೆ 76.88ರುನಷ್ಟಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಶನಿವಾರದಂದು ಪೆಟ್ರೋಲ್ ದರ ಪ್ರತಿ ಲೀಟರ್ ಗೆ 84.49 ರು ನಷ್ಟಿತ್ತು. ಡೀಸೆಲ್ ಬೆಲೆ 77.06 ರೂ.ಗಳಷ್ಟಿತ್ತು.

ಕೋಲ್ಕತ್ತಾ ಹಾಗೂ ಚೆನ್ನೈ ನಗರಗಳಲ್ಲಿ ಬೆಲೆ

ಕೋಲ್ಕತ್ತಾ ಹಾಗೂ ಚೆನ್ನೈ ನಗರಗಳಲ್ಲಿ ಬೆಲೆ

ಕೋಲ್ಕತಾ ನಗರದಲ್ಲಿ ಭಾನುವಾರದಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 80.68ರು ಹಾಗೂ ಡೀಸೆಲ್ ಬೆಲೆ 75.22ರು ನಷ್ಟಿದೆ. ಶನಿವಾರದಂದು ಪೆಟ್ರೋಲ್ ಬೆಲೆ 80.89 ರೂ. ಇದ್ದರೆ, ಡೀಸೆಲ್ ದರ 75.39 ರೂ.ಗೆ ಮಾರಾಟ ಆಗುತ್ತಿತ್ತು.

ಚೆನ್ನೈನಲ್ಲಿ ಭಾನುವಾರದಂದು ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 81.84 ರು ಹಾಗೂ ಡೀಸೆಲ್ ಬೆಲೆ 77.55ರು ನಷ್ಟಿದೆ. ಶನಿವಾರದಂದು ಪೆಟ್ರೋಲ್ ಬೆಲೆ 82.06ರು ಹಾಗೂ ಡೀಸೆಲ್ ಬೆಲೆ 77.73ರು ನಷ್ಟಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+