ಪೆಟ್ರೋಲ್, ಡೀಸೆಲ್ ದರದಲ್ಲಿ ತುಸು ಇಳಿಕೆ, ನಿಮ್ಮ ನಗರದಲ್ಲಿ ಎಷ್ಟು?
ಬೆಂಗಳೂರು, ಮೇ 12: ಲೋಕಸಭೆ ಚುನಾವಣೆ 2019ರ ಫಲಿತಾಂಶ ಹೊರ ಬೀಳುತ್ತಿದ್ದಂತೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಸಾಧ್ಯತೆ ಕಂಡು ಬಂದಿದೆ. ಇರಾನ್ ನಿಂದ ತಲ ಖರೀದಿಗೆ ಅಮೆರಿಕ ನಿರ್ಬಂಧ ಹೇರುವ ಭೀತಿ ಎದುರಾಗಿದೆ. ಹೀಗಾಗಿ, ಇಂಧನ ಆಮದು ಮಾಡಿಕೊಳ್ಳಲು ಭಾರತವು ಬೇರೆ ದೇಶವನ್ನು ಹುಡುಕಬೇಕಾಗಿದೆ.
ಕಳೆದ ವರ್ಷಾಂತ್ಯಕ್ಕೆ ಇರಾನ್ ಮೇಲೆ ನಿರ್ಬಂಧವನ್ನು ಅಮೆರಿಕ ಮುಂದುವರೆಸಿದ್ದೇ ಆದಲ್ಲಿ ಕಚ್ಚಾ ತೈಲ ಬೆಲೆ 100 ಡಾಲರ್ ಮುಟ್ಟಿದರೂ ಅಚ್ಚರಿಯೇನಿಲ್ಲ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಸೌದಿ ಅರೇಬಿಯಾ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಹಾಗೂ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವಿನ ತೈಲ ಒಪ್ಪಂದದಿಂದಾಗಿ ಕಚ್ಚಾ ತೈಲ ಬೆಲೆ ಸ್ಥಿಮಿತಕ್ಕೆ ಬಂದಿತ್ತು.
ಇರಾನ್ ಮೇಲೆ ಅಮೆರಿಕ ಹೇರುವ ನಿರ್ಬಂಧದ ಮೇಲೆ ಭಾರತ, ಚೀನಾ, ದಕ್ಷಿಣ ಕೊರಿಯಾ, ಜಪಾನ್, ಟರ್ಕಿ, ಇಟಲಿ, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ತೈವಾನ್ ದೇಶಗಳ ಭವಿಷ್ಯ ನಿಂತಿದೆ. ವಾರಾಂತ್ಯದಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. ಶನಿವಾರದಂದು ಪೆಟ್ರೋಲ್ ಬೆಲೆ ಸರಾಸರಿ 48 ಪೈಸೆ ಇಳಿಕೆಯಾಗಿದೆ. ಭಾನುವಾರದಂದು ಕೂಡಾ ಪ್ರಮುಖ ನಗರಗಳಲ್ಲಿ ಇದೇ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ.

ಕಚ್ಚಾತೈಲ ಬೆಲೆ ಏರಿಕೆ ಸಾಧ್ಯತೆ
ಕಚ್ಚಾತೈಲ ಬೆಲೆ ಈ ತಿಂಗಳ ಅಂತ್ಯಕ್ಕೆ ಏರಿಕೆಯಾಗುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ. ಮೇ 19ರ ತನಕವಾದರೂ ಪೆಟ್ರೋಲ್, ಡೀಸೆಲ್ ದರದಲ್ಲಿ ಹೆಚ್ಚಿನ ಏರಿಕೆ ಮಾಡುವುದಿಲ್ಲ. ಮೇ 23ರ ನಂತರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಬೆಲೆ ಏರಿಕೆ ಮಾಡಲಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತ ತನ್ನ ಶೇ 80ರಷ್ಟು ಇಂಧನವನ್ನು ಆಮದು ಮಾಡಿಕೊಳ್ಳುತ್ತಿದೆ.

ಬೆಂಗಳೂರು ನಗರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ
ಬೆಂಗಳೂರು ನಗರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ
* ಭಾನುವಾರ(ಮೇ 12)ದಂದು ಪೆಟ್ರೋಲ್: 74.07ರು(0.44 ಪೈಸೆ ಇಳಿಕೆ) * ಶನಿವಾರದಂದು ಪೆಟ್ರೋಲ್ : 74.51 ರು(-0.55ಪೈಸೆ )
* ಶುಕ್ರವಾರದಂದು ಪೆಟ್ರೋಲ್ : 75.06ರು (0.16ಪೈಸೆ ಕಡಿತ)
ಡೀಸೆಲ್ ಬೆಲೆ
* ಭಾನುವಾರ(ಮೇ 12)ದಂದು ಡೀಸೆಲ್ : 68.26ರು(0.18 ಪೈಸೆ ಇಳಿಕೆ)
* ಶನಿವಾರದಂದು ಡೀಸೆಲ್: 68.44 ರು(-0.24ಪೈಸೆ)
* ಶುಕ್ರವಾರದಂದು ಡೀಸೆಲ್: 68.68ರು (0.55ಪೈಸೆ ಕಡಿತ)

ನವದೆಹಲಿಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ
ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ
* ಭಾನುವಾರ(ಮೇ 12)ದಂದು ಪೆಟ್ರೋಲ್: 71.73ರು (0.42 ಪೈಸೆ ಇಳಿಕೆ)
* ಶನಿವಾರದಂದು : 72.15 ರು(-0.48ಪೈಸೆ )
* ಶುಕ್ರವಾರದಂದು : 72.63ರು (0.21ಪೈಸೆ ಕಡಿತ)
ಡೀಸೆಲ್ ಬೆಲೆ
* ಭಾನುವಾರ(ಮೇ 12)ದಂದು ಡೀಸೆಲ್ : 66.11ರು(0.17 ಪೈಸೆ ಇಳಿಕೆ)
* ಶನಿವಾರ(ಮೇ11)ದಂದು : 66.28 ರು(-0.19ಪೈಸೆ)
* ಶುಕ್ರವಾರ(ಮೇ10)ದಂದು : 66.47ರು (0.09ಪೈಸೆ ಕಡಿತ)

ಚೆನ್ನೈ ನಗರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ
ಚೆನ್ನೈ ನಗರದಲ್ಲಿ ಪೆಟ್ರೋಲ್ ಬೆಲೆ
* ಭಾನುವಾರ(ಮೇ 12)ದಂದು ಪೆಟ್ರೋಲ್: 74.46ರು(0.44 ಪೈಸೆ ಇಳಿಕೆ)
* ಶನಿವಾರ(ಮೇ11) : 74.90 ರು(-0.50ಪೈಸೆ )
* ಶುಕ್ರವಾರ(ಮೇ 10): 75.40ರು (0.23ಪೈಸೆ ಕಡಿತ)
ಡೀಸೆಲ್ ಬೆಲೆ
* ಭಾನುವಾರ(ಮೇ 12)ದಂದು ಡೀಸೆಲ್ : 69.886ರು(0.18 ಪೈಸೆ ಇಳಿಕೆ)
* ಶನಿವಾರ(ಮೇ 11) ದಂದು: 70.06 ರು(-0.20ಪೈಸೆ)
* ಶುಕ್ರವಾರ(ಮೇ10)ದಂದು : 70.26ರು (0.10ಪೈಸೆ ಕಡಿತ)

ಮುಂಬೈ ನಗರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ
ಮುಂಬೈ ನಗರದಲ್ಲಿ ಪೆಟ್ರೋಲ್ ಬೆಲೆ
* ಭಾನುವಾರ(ಮೇ 12)ದಂದು ಪೆಟ್ರೋಲ್: 77.34ರು(0.41 ಪೈಸೆ ಇಳಿಕೆ)
* ಶನಿವಾರ(ಮೇ 11): 77.75 ರು(-0.48ಪೈಸೆ )
* ಶುಕ್ರವಾರ(ಮೇ10) : 78.23ರು (0.21ಪೈಸೆ ಕಡಿತ)
ಡೀಸೆಲ್ ಬೆಲೆ
* ಭಾನುವಾರ(ಮೇ 12)ದಂದು ಡೀಸೆಲ್ : 69.27ರು(0.18 ಪೈಸೆ ಇಳಿಕೆ)
* ಶನಿವಾರ(ಮೇ 11): 69.45 ರು(-0.20ಪೈಸೆ)
* ಶುಕ್ರವಾರ(ಮೇ 10): 69.65ರು (0.09ಪೈಸೆ ಕಡಿತ)












Click it and Unblock the Notifications