ಮೆಟ್ರೋ ಸಿಟಿಗಳಲ್ಲಿ ಪೆಟ್ರೋಲ್, ಡೀಸೆಲ್ ಮತ್ತೆ ಏರಿಕೆ
ನವದೆಹಲಿ, ಆಗಸ್ಟ್ 02: ಎರಡು ದಿನಗಳಿಂದ ಪರಿಷ್ಕರಣೆಗೊಳ್ಳದ ಇಂಧನ ಬೆಲೆಯಲ್ಲಿ ಗುರುವಾರ(ಆಗಸ್ಟ್ 02)ದಂದು ಏರಿಕೆ ಕಂಡು ಬಂದಿದೆ. ಮೆಟ್ರೋ ಸಿಟಿಗಳಲ್ಲಿ ಪೆಟ್ರೋಲ್ ಡೀಸೆಲ್ ದರ ಏರಿಕೆ ಮಾಡಿರುವುದಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಟಿಸಿದೆ.
ಸತತ ಎರಡು ದಿನಗಳ ಕಾಲ ಬದಲಾವಣೆ ಕಾಣದಿದ್ದ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಗುರುವಾರ ಬೆಳಗ್ಗೆ ಏರಿಕೆ ಕಂಡು ಬಂದಿದೆ. ಬ್ರೆಂಟ್ ಕಚ್ಚಾ ತೈಲ ಬೆಲೆಯಲ್ಲಿ ಶೇಕಡಾ 0.2 ರಷ್ಟು ಏರಿಕೆಯಾಗಿ, ಪ್ರತಿ ಬ್ಯಾರೆಲ್ ಗೆ 72.56 ಯುಎಸ್ ಡಾಲರ್ ನಷ್ಟಾಗಿದೆ.
ಹೀಗಾಗಿ, ತೈಲ ಬೆಲೆ ಏರಿಸಲಾಗಿದೆ. ಅಂತಾರಾಷ್ಟ್ರೀಯ ಮಾರಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹಾಗೂ ಯುಎಸ್ ಡಾಲರ್ ಎದುರು ರುಪಾಯಿ ಏರಿಳಿತದ ಆಧಾರದ ಮೇಲೆ ಸರ್ಕಾರಿ ಸ್ವಾಮ್ಯದ ಐಒಸಿ, ಬಿಪಿ ಹಾಗೂ ಎಚ್ಪಿ ಕಂಪನಿಗಳು ತೈಲ ಬೆಲೆಯನ್ನು ಪರಿಷ್ಕರಿಸಲಿವೆ.

ಬೆಳಗ್ಗೆ 6 ಗಂಟೆಗೆ ಪರಿಷ್ಕರಣೆಗೊಂಡ ಬಳಿಕ ಮಹಾನಗರಗಳಲ್ಲಿ ಪೆಟ್ರೋಲ್ ಬೆಲೆ 11 ರಿಂದ 15 ಪೈಸೆ ಏರಿಕೆಯಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆ 15 ಪೈಸೆ ಏರಿಕೆಯಾಗಿ ಪ್ರತಿ ಲೀಟರ್ ಗೆ 76.43 ರೂಪಾಯಿಯಾಗಿದೆ. ಕೊಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 79.33 ರೂಪಾಯಿಯಾಗಿದೆ. ಮುಂಬೈನಲ್ಲಿ ಗುರುವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 83.87 ರೂಪಾಯಿ, ಹಾಗೂ ಚೆನ್ನೈನಲ್ಲಿ 79.39 ರು ಇದೆ (ಐಒಸಿ ವೆಬ್ ತಾಣದ ಮಾಹಿತಿಯಂತೆ)
ಡಿಸೇಲ್ ಬೆಲೆ ಕೂಡ ಏರಿಕೆಯಾಗಿದ್ದು, ನವದೆಹಲಿಯಲ್ಲಿ 67.93ರು, ಕೋಲ್ಕತ್ತಾ 70.69ರು, ಮುಂಬೈ 72.12 ಹಾಗೂ ಚೆನ್ನೈನಲ್ಲಿ 71.74ರು ನಷ್ಟಿದೆ.












Click it and Unblock the Notifications