ಕಚ್ಚಾತೈಲ ಬೆಲೆ ಏರಿಕೆ, ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ದುಬಾರಿ
ಬೆಂಗಳೂರು, ಜನವರಿ 20: ಕಳೆದ ನಾಲ್ಕು ದಿನಗಳಿಂದ ಏರಿಕೆ ಹಾದಿಯಲ್ಲಿದ್ದ ಇಂಧನ ಬೆಲೆ ಭಾನುವಾರ ಕೂಡಾ ಏರಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವುದು ಮತ್ತು ಡಾಲರ್ಎದುರು ಭಾರತದ ರೂಪಾಯಿ ತನ್ನ ಮೌಲ್ಯ ಕಳೆದುಕೊಳ್ಳುತ್ತಿರುವುದೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಕಾರಣವಾಗಿದೆ.
ಒಪೆಕ್ ನಿಂದ ಕಚ್ಚಾತೈಲ ಉತ್ಪಾದನೆ ಹಾಗೂ ಪೂರೈಕೆ ಮೇಲೆ ಕಡಿವಾಣ ಹಾಕಲಾಗಿದೆ. ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 60.46 ಯುಎಸ್ ಡಾಲರ್ ನಷ್ಟಿದೆ.
ಪ್ರತಿ ಬ್ಯಾರೆಲ್ ಗೆ 80 ಯುಎಸ್ ಡಾಲರ್ ಗೇರಿದ್ದ ಕಚ್ಚಾತೈಲ ಬೆಲೆ ಇತ್ತೀಚಿನ ತಿಂಗಳುಗಳಲ್ಲಿ ಇಳಿಕೆಯಾಗಿದೆ. ಕಚ್ಚಾ ತೈಲ ಬೆಲೆ ಶೇಕಡಾ 40ರಷ್ಟು ಇಳಿಕೆ ಕಂಡಿದ್ದರಿಂದ ಡಿಸೇಲ್, ಪೆಟ್ರೋಲ್ ಬೆಲೆಯೂ ಶೇಕಡಾ 20ರಷ್ಟು ಇಳಿಕೆಯಾಗಿದೆ. ಶೇ 80ರಷ್ಟು ಇಂಧನವನ್ನು ಭಾರತವು ಆಮದು ಮಾಡಿಕೊಳ್ಳುತ್ತಿದೆ.
ಕರ್ನಾಟಕದಲ್ಲಿ ಜನವರಿ 01ರಿಂದ ಸೆಸ್ ಏರಿಕೆಯಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 1.30 ರೂ.ನಷ್ಟು ಹೆಚ್ಚಳವಾಗಿದೆ.ಇದರಿಂದ ರಾಜ್ಯದ ವಾಹನ ಸವಾರರ ಜೇಬಿಗೆ ಮತ್ತೆ ಕತ್ತರಿ ಬಿದ್ದಂತಾಗಿದೆ.
ಸದ್ಯ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 23 ಪೈಸೆ ಏರಿಕೆ ಕಂಡು 70.95 ರೂ. ಇದೆ. ಡೀಸೆಲ್ ಬೆಲೆ29 ಪೈಸೆ ಏರಿಕೆ ಕಂಡು 65.45 ರೂ. ಆಗಿದೆ.

ದೆಹಲಿಯಲ್ಲಿ ಇಂಧನ ಬೆಲೆ
ಪೆಟ್ರೋಲ್
ಭಾನುವಾರ (ಜನವರಿ 20) : ಪ್ರತಿ ಲೀಟರ್ ಗೆ 70.95 (23 ಪೈಸೆ ಏರಿಕೆ)
ಶನಿವಾರ (ಜನವರಿ 19) : 70.72 (17 ಪೈಸೆ ಏರಿಕೆ)
ಶುಕ್ರವಾರ (ಜನವರಿ 18) : 70.55 (08 ಪೈಸೆ ಏರಿಕೆ)
ಡೀಸೆಲ್
ಭಾನುವಾರ (ಜನವರಿ 20) : ಪ್ರತಿ ಲೀಟರ್ ಗೆ 65.45 ರು (29 ಪೈಸೆ ಏರಿಕೆ)
ಶನಿವಾರ (ಜನವರಿ 19) : 65.16 ರು (19 ಪೈಸೆ ಏರಿಕೆ)
ಶುಕ್ರವಾರ (ಜನವರಿ 18) : 64.97 (19 ಪೈಸೆ ಏರಿಕೆ)

ಬೆಂಗಳೂರಲ್ಲಿ ಇಂಧನ ಬೆಲೆ
ಪೆಟ್ರೋಲ್
ಭಾನುವಾರ (ಜನವರಿ 20) : ಪ್ರತಿ ಲೀಟರ್ ಗೆ 73.29 (24 ಪೈಸೆ ಏರಿಕೆ)
ಶನಿವಾರ (ಜನವರಿ 19) : 73.05 ರು (18 ಪೈಸೆ ಏರಿಕೆ)
ಶುಕ್ರವಾರ (ಜನವರಿ 18) : 72.87 (05 ಪೈಸೆ ಏರಿಕೆ)
ಡೀಸೆಲ್
ಭಾನುವಾರ (ಜನವರಿ 20) : ಪ್ರತಿ ಲೀಟರ್ ಗೆ 67.60 ರು (30 ಪೈಸೆ ಏರಿಕೆ)
ಶನಿವಾರ (ಜನವರಿ 19) : 67.30 ರು (20 ಪೈಸೆ ಏರಿಕೆ)
ಶುಕ್ರವಾರ (ಜನವರಿ 18) : 67.10 ರು (17 ಪೈಸೆ ಏರಿಕೆ)

ಮುಂಬೈನಲ್ಲಿ ಇಂಧನ ಬೆಲೆ
ಪೆಟ್ರೋಲ್
ಭಾನುವಾರ (ಜನವರಿ 20) : ಪ್ರತಿ ಲೀಟರ್ ಗೆ 76.58 (23 ಪೈಸೆ ಏರಿಕೆ)
ಶನಿವಾರ (ಜನವರಿ 19) : 76.35 ರು (17 ಪೈಸೆ ಏರಿಕೆ)
ಶುಕ್ರವಾರ (ಜನವರಿ 18) : 76.18 ರು (07 ಪೈಸೆ ಏರಿಕೆ)
ಡೀಸೆಲ್
ಭಾನುವಾರ (ಜನವರಿ 20) : ಪ್ರತಿ ಲೀಟರ್ ಗೆ 68.53 ರು (31 ಪೈಸೆ ಏರಿಕೆ)
ಶನಿವಾರ (ಜನವರಿ 19) : 68.22 ರು (20 ಪೈಸೆ ಏರಿಕೆ)
ಶುಕ್ರವಾರ (ಜನವರಿ 18) : 68.02 ರು (20 ಪೈಸೆ ಏರಿಕೆ)

ಚೆನ್ನೈನಲ್ಲಿ ಇಂಧನ ಬೆಲೆ
ಪೆಟ್ರೋಲ್
ಭಾನುವಾರ (ಜನವರಿ 20) : ಪ್ರತಿ ಲೀಟರ್ ಗೆ 73.65 (24 ಪೈಸೆ ಏರಿಕೆ)
ಶನಿವಾರ (ಜನವರಿ 19) : 73.41 ರು (18 ಪೈಸೆ ಏರಿಕೆ)
ಶುಕ್ರವಾರ (ಜನವರಿ 18) : 73.23 ರು (08 ಪೈಸೆ ಏರಿಕೆ)
ಡೀಸೆಲ್
ಭಾನುವಾರ (ಜನವರಿ 20) : ಪ್ರತಿ ಲೀಟರ್ ಗೆ 69.14 ರು (31 ಪೈಸೆ ಏರಿಕೆ)
ಶನಿವಾರ (ಜನವರಿ 19) : 68.83 ರು (21 ಪೈಸೆ ಏರಿಕೆ)
ಶುಕ್ರವಾರ (ಜನವರಿ 18) : 68.62 ರು (19 ಪೈಸೆ ಏರಿಕೆ)

ಚೆನ್ನೈನಲ್ಲಿ ಇಂಧನ ಬೆಲೆ
ಪೆಟ್ರೋಲ್
ಭಾನುವಾರ (ಜನವರಿ 20) : ಪ್ರತಿ ಲೀಟರ್ ಗೆ 73.65 (24 ಪೈಸೆ ಏರಿಕೆ)
ಶನಿವಾರ (ಜನವರಿ 19) : 73.41 ರು (18 ಪೈಸೆ ಏರಿಕೆ)
ಶುಕ್ರವಾರ (ಜನವರಿ 18) : 73.23 ರು (08 ಪೈಸೆ ಏರಿಕೆ)
ಡೀಸೆಲ್
ಭಾನುವಾರ (ಜನವರಿ 20) : ಪ್ರತಿ ಲೀಟರ್ ಗೆ 69.14 ರು (31 ಪೈಸೆ ಏರಿಕೆ)
ಶನಿವಾರ (ಜನವರಿ 19) : 68.83 ರು (21 ಪೈಸೆ ಏರಿಕೆ)
ಶುಕ್ರವಾರ (ಜನವರಿ 18) : 68.62 ರು (19 ಪೈಸೆ ಏರಿಕೆ)












Click it and Unblock the Notifications