ಸತತ 5ನೇ ದಿನವೂ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಳಿಕೆ
Recommended Video
ನವದೆಹಲಿ, ಫೆಬ್ರವರಿ 03: ಮೋದಿ ಸರ್ಕಾರ್ 2.0 ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಬಳಿಕ ಸೋಮವಾರದಂದು ತೈಲ ಬೆಲೆಯಲ್ಲಿ ಇಳಿಮುಖ ಕಂಡು ಬಂದು ಬಂದಿದೆ. ಪೆಟ್ರೋಲ್ ಪ್ರತಿ ಲೀಟರ್ ಗೆ 6 ಪೈಸೆ ಇಳಿಕೆಯಾಗಿದ್ದರೆ, ಡೀಸೆಲ್ ದರದಲ್ಲಿ ಸರಾಸರಿ 5 ರಿಂದ 9 ಪೈಸೆ ಇಳಿಕೆ ಕಂಡು ಬಂದಿದೆ.
ಭಾನುವಾರದಂದು ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಪ್ರತಿ ಲೀಟರ್ ಪೆಟ್ರೋಲ್ ಬೆಲೆಯನ್ನು 9 ಪೈಸೆ ಇಳಿಕೆ ಮಾಡಿದ್ದವು, ಡಿಸೇಲ್ ಬೆಲೆಯಲ್ಲೂ 8 ಪೈಸೆ ಇಳಿಕೆಯಾಗಿತ್ತು. ಭಾನುವಾರದಂದೂ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ ಭಾನುವಾರ 73.10 ರೂಪಾಯಿ ಹಾಗೂ ಡಿಸೇಲ್ ಬೆಲೆ ಲೀಟರ್ ಗೆ 66.14 ರೂಪಾಯಿಯಿತ್ತು. ಇಂದು ಕ್ರಮವಾಗಿ ಪೆಟ್ರೋಲ್ ಬೆಲೆ 73.04 ರು ಹಾಗೂ ಡೀಸೆಲ್ ಪ್ರತಿ ಲೀಟರ್ 66.09 ರು ನಷ್ಟಿದೆ.
ಏಪ್ರಿಲ್ 1ರಿಂದ ಬಿಎಸ್ -6 ಹೊರಸೂಸುವಿಕೆಯ ಮಾನದಂಡ ಜಾರಿಗೆ ಬರುವುದರಿಂದ ಪೆಟ್ರೋಲ್ ಬೆಲೆಯಲ್ಲಿ 50 ಪೈಸೆ ಹಚ್ಚಳವಾಗುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 6 ಪೈಸೆ ಇಳಿದಿದೆ. ಲೀಟರ್ ಪೆಟ್ರೋಲ್ ಬೆಲೆ 75.52 ರೂಪಾಯಿಯಷ್ಟಿದೆ. ಡಿಸೇಲ್ ಬೆಲೆ 8 ಪೈಸೆ ಇಳಿಕೆಯಾಗಿದ್ದು, ಪ್ರತಿ ಲೀಟರ್ ಬೆಲೆ 68 ರೂಪಾಯಿ 32 ಪೈಸೆಯಾಗಿದೆ.

Iಈ ಅಂಶಗಳು ಇಂಧನ ದರವನ್ನು ನಿರ್ಧರಿಸುತ್ತವೆ
ಇಂಡಿಯನ್ ಕರೆನ್ಸಿ ಹಾಗೂ ಯುಎಸ್ ಡಾಲರ್ ನಡುವಿನ ವಿನಿಮಯ ದರ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಎಲ್ಲವೂ ಇಂಧನ ದರವನ್ನು ನಿರ್ಧರಿಸುತ್ತವೆ. ಭಾರತ ಸುಮಾರು 80% ಇಂಧನ ಅಗತ್ಯವನ್ನು ಆಮದು ಮಾಡಿಕೊಳ್ಳುತ್ತಿದೆ. ಸೋಮವಾರದಂದು ಶೇ 2.2% ಕುಸಿದು 51.51 ಡಾಲರ್ ಪ್ರತಿ ಬ್ಯಾರೆಲ್ ನಂತೆ ದರವಿತ್ತು. ಬ್ರೆಂಟ್ ಕಚ್ಚಾತೈಲ 56.25 ಡಾಲರ್ ನಷ್ಟಿದೆ.
ಚೀನಾದಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಜಾಗತಿಕವಾಗಿ ತೈಲ ಬೆಲೆ ಸತತವಾಗಿ ಕುಗ್ಗುತ್ತಿದೆ. ಚೀನಾದಲ್ಲಿನ ಕರೋನಾ ವೈರಾಣು ಭೀತಿಯಿಂದ 40 ಮಿಲಿಯನ್ ಪ್ರವಾಸಿಗರಿಗೆ ನಿರ್ಬಂಧ ಪರಿಸ್ಥಿತಿ ತಲೆ ದೋರಿದೆ.

ಬೆಂಗಳೂರಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಫೆ. 03: 75.52 ರು(-0.06 ಪೈಸೆ ಇಳಿಕೆ)
ಫೆ. 02: 75.58 ರು(-0.08 ಪೈಸೆ ಇಳಿಕೆ)
ಫೆ. 01: 75.66 ರು(-0.05 ಪೈಸೆ ಇಳಿಕೆ)
ಜನವರಿ 31: 75.71 ರು(-0.10 ಪೈಸೆ ಇಳಿಕೆ)
ಡೀಸೆಲ್ (ಪ್ರತಿ ಲೀಟರ್)
ಫೆ. 03: 68.32 ರು(-0.08 ಪೈಸೆ ಇಳಿಕೆ)
ಫೆ. 02: 68.40 ರು(-0.06 ಪೈಸೆ ಇಳಿಕೆ)
ಫೆ. 01: 68.46 ರು(-0.02 ಪೈಸೆ ಇಳಿಕೆ)
ಜನವರಿ 31: 68.48 ರು(-0.09 ಪೈಸೆ ಇಳಿಕೆ)

ಮುಂಬೈನಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಫೆ. 03: 78.69 ರು(-0.06 ಪೈಸೆ ಇಳಿಕೆ)
ಫೆ. 02: 78.75 ರು(-0.05 ಪೈಸೆ ಇಳಿಕೆ)
ಫೆ. 01: 78.83 ರು(-0.05 ಪೈಸೆ ಇಳಿಕೆ)
ಜನವರಿ 31: 78.88 ರು(-0.05 ಪೈಸೆ ಇಳಿಕೆ)
ಡೀಸೆಲ್ (ಪ್ರತಿ ಲೀಟರ್)
ಫೆ. 03: 69.27 ರು(-0.09 ಪೈಸೆ ಇಳಿಕೆ)
ಫೆ. 02: 69.36 ರು(-0.06 ಪೈಸೆ ಇಳಿಕೆ)
ಫೆ. 01: 69.42 ರು(-0.05 ಪೈಸೆ ಇಳಿಕೆ)
ಜನವರಿ 31: 69.47 ರು(-0.09 ಪೈಸೆ ಇಳಿಕೆ)

ಚೆನ್ನೈನಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಫೆ. 03: 75.89 ರು(-0.06 ಪೈಸೆ ಇಳಿಕೆ)
ಫೆ. 02: 75.95 ರು(-0.08 ಪೈಸೆ ಇಳಿಕೆ)
ಫೆ. 01: 76.03 ರು(-0.06 ಪೈಸೆ ಇಳಿಕೆ)
ಜನವರಿ 31: 76.09 ರು(-0.10 ಪೈಸೆ ಇಳಿಕೆ)
ಡೀಸೆಲ್ (ಪ್ರತಿ ಲೀಟರ್)
ಫೆ. 03: 69.81 ರು(-0.08 ಪೈಸೆ ಇಳಿಕೆ)
ಫೆ. 02: 69.89 ರು(-0.07 ಪೈಸೆ ಇಳಿಕೆ)
ಫೆ. 01: 69.96 ರು(-0.05 ಪೈಸೆ ಇಳಿಕೆ)
ಜನವರಿ 31: 70.01 ರು(-0.08 ಪೈಸೆ ಇಳಿಕೆ)

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಫೆ. 03: 73.04 ರು(-0.06 ಪೈಸೆ ಇಳಿಕೆ)
ಫೆ. 02: 73.10 ರು(-0.09 ಪೈಸೆ ಇಳಿಕೆ)
ಫೆ. 01: 73.19 ರು(-0.08 ಪೈಸೆ ಇಳಿಕೆ)
ಜನವರಿ 31: 73.27 ರು(-0.09 ಪೈಸೆ ಇಳಿಕೆ)
ಡೀಸೆಲ್ (ಪ್ರತಿ ಲೀಟರ್)
ಫೆ. 03: 66.09 ರು(-0.05 ಪೈಸೆ ಇಳಿಕೆ)
ಫೆ. 02: 66.14 ರು(-0.08 ಪೈಸೆ ಇಳಿಕೆ)
ಫೆ. 01: 66.22 ರು(-0.06 ಪೈಸೆ ಇಳಿಕೆ)
ಜನವರಿ 31: 66.28 ರು(-0.08 ಪೈಸೆ ಇಳಿಕೆ)












Click it and Unblock the Notifications