ಲಾಕ್ಡೌನ್ ಹೊರೆ: 8 ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ನವದೆಹಲಿ, ಜೂನ್ 14: ಕೊರೊನಾವೈರಸ್ ಮಹಾಮಾರಿಗೆ ಸಿಲುಕಿ ಜಾಗತಿಕ ತೈಲ ಮಾರುಕಟ್ಟೆ ಕೂಡಾ ತತ್ತರಿಸಿದೆ. ಭಾರತದಲ್ಲಿ ಸತತವಾಗಿ 8 ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಕಳೆದ ಒಂದು ವಾರದಲ್ಲಿ ಸುಮಾರು 4 ರು ನಷ್ಟು ಏರಿಕೆ ಕಂಡು ಬಂದಿದೆ. ನವದೆಹಲಿಯಲ್ಲಿಂದು ಪೆಟ್ರೋಲ್ ದರ ಪ್ರತಿ ಲೀಟರ್ ಗೆ 75.78 ರು ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ 74.03 ರು ನಷ್ಟಿದೆ.

Recommended Video

      ವಾಹನ ಸವಾರರ ಜೇಬಿಗೆ ಮತ್ತೆ ಮತ್ತೆ ಕತ್ತರಿ | petrol price hiked

      ಭಾನುವಾರದಂದು ಪೆಟ್ರೋಲ್ ದರದಲ್ಲಿ 62 ಪೈಸೆ ಪ್ರತಿ ಲೀಟರ್ ಹಾಗೂ ಡೀಸೆಲ್ ದರಲ್ಲಿ 64 ಪ್ರತಿ ಲೀಟರ್ ನಂತೆ ಹೆಚ್ಚಳವಾಗಿದೆ. ಒಟ್ಟಾರೆ ಕಳೆದ 8 ದಿನಗಳಲ್ಲಿ ಪೆಟ್ರೋಲ್ ದರದಲ್ಲಿ 4.52 ರು ಹೆಚ್ಚಳವಾಗಿದ್ದರೆ, ಡೀಸೆಲ್ ದರಲ್ಲಿ 4.64 ರು ಹೆಚ್ಚಳವಾಗಿದೆ.

      ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ತೈಲ ಕಂಪನಿಗಳು ಇನ್ನು ಕೆಲದಿನಗಳ ಕಾಲ ಬೆಲೆ ಏರಿಕೆ ಮುಂದುವರೆಸಲಿವೆ. ಮಾರ್ಚ್ 16ರಿಂದ ಇಲ್ಲಿ ತನಕ ಬೆಲೆ ಏರಿಕೆಗೆ ಅಬಕಾರಿ ಸುಂಕದಲ್ಲಿ ಹೆಚ್ಚಳ, ಲಾಕ್ಡೌನ್, ಪೂರೈಕೆಯಲ್ಲಿ ವ್ಯತ್ಯಯ ಕಾರಣ ಎನ್ನಬಹುದು.

      Petrol, diesel price hiked by Rs 4 in 8 days. Check todays price

      ಜಾಗತಿಕವಾಗಿ ಕಚ್ಚಾತೈಲ ಬೆಲೆಯಲ್ಲಿ ಕಳೆದ ವಾರ ಶೇ 8ರಷ್ಟು ಇಳಿಕೆಯಲಾಗಿದ್ದು, ಪ್ರತಿ ಬ್ಯಾರೆಲ್ ಗೆ 40 ಯುಎಸ್ ಡಾಲರ್ ನಷ್ಟಾಗಿದೆ.

      ನವದೆಹಲಿ: ಪೆಟ್ರೋಲ್ ₹75.78; ಡೀಸೆಲ್ ₹74.03
      ಬೆಂಗಳೂರು: ಪೆಟ್ರೋಲ್ ₹78.23; ಡೀಸೆಲ್ ₹70.39
      ಚೆನ್ನೈ: ಪೆಟ್ರೋಲ್ ₹79.53; ಡೀಸೆಲ್ ₹72.18
      ಹೈದರಾಬಾದ್: ಪೆಟ್ರೋಲ್ ₹78.67; ಡೀಸೆಲ್ ₹72.36
      ಮುಂಬೈ: ಪೆಟ್ರೋಲ್ ₹82.70; ಡೀಸೆಲ್ ₹72.64
      ಕೋಲ್ಕತ್ತಾ: ಪೆಟ್ರೋಲ್ ₹77.64; ಡೀಸೆಲ್ ₹69.80

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+