20 ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ

Recommended Video

      20 ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ..! | Oneindia Kannada

      ನವದೆಹಲಿ, ಜನವರಿ 7: ಸತತ ಬೆಲೆ ಏರಿಕೆಯಿಂದ ಗ್ರಾಹಕರು ತತ್ತರಿಸುವಂತೆ ಮಾಡಿದ್ದ ತೈಲ ಬೆಲೆ ಕಳೆದ ವರ್ಷದ ಅಂತ್ಯದಿಂದ ಜನಸಾಮಾನ್ಯರಿಗೆ ಕೊಂಚ ನಿರಾಳ ಉಂಟುಮಾಡಿತ್ತು. ಆದರೆ ಸತತ 20 ದಿನಗಳ ಇಳಿಕೆ ಬಳಿಕ ಸೋಮವಾರ ಮತ್ತೆ ಬೆಲೆ ಹೆಚ್ಚಳವಾಗಿದೆ.

      2019ರಲ್ಲಿ ಇದೇ ಮೊದಲ ಬಾರಿಗೆ ತೈಲ ದುಬಾರಿಯಾಗಿದೆ. ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 21 ಪೈಸೆ ಮತ್ತು ಡೀಸೆಲ್‌ಗೆ 8 ಪೈಸೆ ಹೆಚ್ಚಳ ಕಂಡಿದೆ.

      ಭಾನುವಾರ 68.29ರಷ್ಟಿದ್ದ ಪೆಟ್ರೋಲ್ ಬೆಲೆ ಸೋಮವಾರ ರೂ. 68.50ಕ್ಕೆ ತಲುಪಿದೆ. ಡೀಸೆಲ್ ದರ 62.16ರಿಂದ 62.24ಕ್ಕೆ ಮುಟ್ಟಿದೆ.

      Petrol diesel fuel price hiked after 20 days

      ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ ಕ್ರಮವಾಗಿ 74.16 ಮತ್ತು 65.12 ರೂ.ನಂತೆ ಮಾರಾಟವಾಗುತ್ತಿವೆ.

      ಕರ್ನಾಟಕ ಸರ್ಕಾರವು ಶುಕ್ರವಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ 32 ಹಾಗೂ ಶೇ 21ಕ್ಕೆ ಹೆಚ್ಚಿಸಿತ್ತು.

      ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್‌ಗೆ 21 ಪೈಸೆ ಹಾಗೂ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 9 ಪೈಸೆಯಷ್ಟು ಹೆಚ್ಚಳವಾಗಿದೆ. ಪೆಟ್ರೋಲ್ 70.74 ರೂ. ಮತ್ತು ಡೀಸೆಲ್ 64.28 ರೂ.ನಂತೆ ಮಾರಾಟವಾಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+