ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಶುಕ್ರವಾರದಂದು ಇಳಿಕೆ
ನವದೆಹಲಿ, ಜನವರಿ 04: ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಶುಕ್ರವಾರ ಇಳಿಕೆ ಕಂಡು ಬಂದಿದೆ. ಕಳೆದ ಎರಡು ದಿನಗಳಿಂದ ಇಂಧನ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿರಲಿಲ್ಲ.
ಶುಕ್ರವಾರದಂದು ಪೆಟ್ರೋಲ್ ಬೆಲೆ 21 ಪೈಸೆ ಹಾಗೂ ಡಿಸೇಲ್ ಬೆಲೆ 22 ಪೈಸೆಯಷ್ಟು ಇಳಿಕೆ ಕಂಡಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ 21 ಪೈಸೆ ಇಳಿಕೆ ಕಂಡಿದ್ದು ಪ್ರತಿ ಒಂದು ಲೀಟರ್ ಗೆ 68.44 ರೂಪಾಯಿಯಾಗಿದೆ. ಡಿಸೇಲ್ ಬೆಲೆ 22 ಪೈಸೆ ಇಳಿಕೆ ಕಂಡು ಪ್ರತಿ ಲೀಟರ್ ಗೆ 62.44 ರೂಪಾಯಿಯಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ ಶುಕ್ರವಾರ 21 ಪೈಸೆ ಇಳಿಕೆ ಕಂಡ ಪೆಟ್ರೋಲ್ ಬೆಲೆ ಲೀಟರ್ ಗೆ 69.01 ರೂಪಾಯಿಯಾಗಿದೆ. ಡಿಸೇಲ್ ಬೆಲೆ 20 ಪೈಸೆ ಇಳಿಕೆ ಕಂಡು 62.80 ರೂಪಾಯಿಯಾಗಿದೆ.
ಗುರುಗ್ರಾಮ, ನೋಯ್ಡಾ ಎನ್ ಸಿಆರ್ ಪ್ರದೇಶದಲ್ಲಿ ಪೆಟ್ರೋಲ್ ಬೆಲೆ 69.77 ರು ಹಾಗೂ 68.74ರು ನಷ್ಟಿದ್ದರೆ, ಡೀಸೆಲ್ ಬೆಲೆ 62.71 ರು ಹಾಗೂ 62.10 ರು ನಷ್ಟಿದೆ. ಈ ಪ್ರದೇಶಗಳಲ್ಲಿ ಪೆಟ್ರೋಲ್ ಬೆಲೆ 16 ಪೈಸೆ ಹಾಗೂ ಡೀಸೆಲ್ ಬೆಲೆ 18 ಪೈಸೆ ಇಳಿಕೆಯಾಗಿದೆ.
ಒಪೆಕ್ ರಾಷ್ಟ್ರಗಳಿಂದ ಇಂಧನ ಪೂರೈಕೆ ಮೇಲೆ ಕಡಿವಾಣಬಿದ್ದಿದ್ದು, ಕಚ್ಚಾತೈಲ ಬೆಲೆ 39 ಸೆಂಟುಗಳಷ್ಟು ಇಳಿಕೆ ಕಂಡಿದ್ದು, ಪ್ರತಿ ಬ್ಯಾರೆಲ್ ಗೆ 55.56 ಯುಎಸ್ ಡಾಲರ್ ನಷ್ಟಿದೆ.
ಶುಕ್ರವಾರದಂದು ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆಯಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಕಚ್ಚಾ ತೈಲ ಬೆಲೆ ಶೇಕಡಾ 40ರಷ್ಟು ಇಳಿಕೆ ಕಂಡಿದ್ದರಿಂದ ಡಿಸೇಲ್, ಪೆಟ್ರೋಲ್ ಬೆಲೆಯೂ ಶೇಕಡಾ 20ರಷ್ಟು ಇಳಿಕೆಯಾಗಿದೆ. ಶೇ 80ರಷ್ಟು ಇಂಧನವನ್ನು ಭಾರತವು ಆಮದು ಮಾಡಿಕೊಳ್ಳುತ್ತಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ದರ
ಪೆಟ್ರೋಲ್
ಜನವರಿ 04ರಂದು ಪೆಟ್ರೋಲ್ ಬೆಲೆಯಲ್ಲಿ 20 ಪೈಸೆಯಷ್ಟು ಇಳಿಕೆಯಾಗಿದ್ದು, ಪ್ರತಿ ಲೀಟರ್ ಗೆ 69.01 ರು ನಷ್ಟಿದೆ. ಜನವರಿ 03 ಹಾಗೂ 02ರಂದು ಪ್ರತಿ ಲೀಟರ್ ಗೆ 69.21ರಷ್ಟಿದ್ದು ಯಾವುದೇ ಬದಲಾವಣೆಯಾಗಿಲ್ಲ. ಜನವರಿ 01ರಂದು 18ಪೈಸೆ ಇಳಿಕೆಯಾಗಿದ್ದು, 69.21ರು ನಷ್ಟಿತ್ತು.
ಡೀಸೆಲ್
ಜನವರಿ 04ರಂದು ಪ್ರತಿ ಡೀಸೆಲ್ ಬೆಲೆ 21ಪೈಸೆಯಷ್ಟು ಇಳಿಕೆಯಾಗಿದ್ದು, ಪ್ರತಿ ಲೀಟರ್ ಗೆ 62.80ರು ನಷ್ಟಿದೆ. ಜನವರಿ 03 ಹಾಗೂ ಜನವರಿ 02ರಂದು ಪ್ರತಿ ಲೀಟರ್ ಡೀಸೆಲ್ ಬೆಲೆ 63.01ರಷ್ಟಿತ್ತು ಹಾಗೂ ಜನವರಿ 01ರಂದು 19ಪೈಸೆ ಇಳಿಕೆಯಾಗಿ 63.01ರುಗೆ ಬಂದಿತ್ತು.

ಚೆನ್ನೈನಲ್ಲಿ ಪೆಟ್ರೋಲ್, ಡೀಸೆಲ್ ದರ
ಪೆಟ್ರೋಲ್
ಜನವರಿ 04ರಂದು ಪೆಟ್ರೋಲ್ ಬೆಲೆಯಲ್ಲಿ 21 ಪೈಸೆಯಷ್ಟು ಇಳಿಕೆಯಾಗಿದ್ದು, ಪ್ರತಿ ಲೀಟರ್ ಗೆ 71.01 ರು ನಷ್ಟಿದೆ. ಜನವರಿ 03 ಹಾಗೂ 02ರಂದು ಪ್ರತಿ ಲೀಟರ್ ಗೆ 71.22ರಷ್ಟಿದ್ದು ಯಾವುದೇ ಬದಲಾವಣೆಯಾಗಿರಲಿಲ್ಲ. ಜನವರಿ 01ರಂದು 19ಪೈಸೆ ಇಳಿಕೆಯಾಗಿದ್ದು, 71.22ರು ನಷ್ಟಿತ್ತು.
ಡೀಸೆಲ್
ಜನವರಿ 04ರಂದು ಪ್ರತಿ ಡೀಸೆಲ್ ಬೆಲೆ 23ಪೈಸೆಯಷ್ಟು ಇಳಿಕೆಯಾಗಿದ್ದು, ಪ್ರತಿ ಲೀಟರ್ ಗೆ 65.91ರು ನಷ್ಟಿದೆ. ಜನವರಿ 03 ಹಾಗೂ ಜನವರಿ 02ರಂದು ಪ್ರತಿ ಲೀಟರ್ ಡೀಸೆಲ್ ಬೆಲೆ 66.14ರಷ್ಟಿತ್ತು ಹಾಗೂ ಜನವರಿ 01ರಂದು 21ಪೈಸೆ ಇಳಿಕೆಯಾಗಿ 66.14ರುಗೆ ಬಂದಿತ್ತು.

ಹೈದರಾಬಾದಿನಲ್ಲಿ ಪೆಟ್ರೋಲ್, ಡೀಸೆಲ್ ದರ
ಪೆಟ್ರೋಲ್
ಜನವರಿ 04ರಂದು ಪೆಟ್ರೋಲ್ ಬೆಲೆಯಲ್ಲಿ 31ಪೈಸೆಯಷ್ಟು ಇಳಿಕೆಯಾಗಿದ್ದು, ಪ್ರತಿ ಲೀಟರ್ ಗೆ 72.60 ರು ನಷ್ಟಿದೆ. ಜನವರಿ 03ರಂದು ಪ್ರತಿ ಲೀಟರ್ ಗೆ 72.93ರು ರಷ್ಟು ಏರಿಕೆಯಾಗಿತ್ತು. ಜನವರಿ02ರಂದು ಪ್ರತಿ ಲೀಟರ್ ಗೆ 72.82ರು ನಷ್ಟಿತ್ತು.ಜನವರಿ 01ರಂದು 19 ಪೈಸೆ ಇಳಿಕೆಯಾಗಿ 72.82ರುಗೆ ಬಂದಿತ್ತು.
ಡೀಸೆಲ್
ಜನವರಿ 04ರಂದು ಪ್ರತಿ ಡೀಸೆಲ್ ಬೆಲೆ 34ಪೈಸೆಯಷ್ಟು ಇಳಿಕೆಯಾಗಿದ್ದು, ಪ್ರತಿ ಲೀಟರ್ ಗೆ 67.88ರು ನಷ್ಟಿದೆ. ಜನವರಿ 03ರಂದು 11 ಪೈಸೆ ಇಳಿಕೆಯಾಗಿ 68.22ರು ಹಾಗೂ ಜನವರಿ 02ರಂದು ಪ್ರತಿ ಲೀಟರ್ ಡೀಸೆಲ್ ಬೆಲೆ 68.11ರಷ್ಟಿತ್ತು ಹಾಗೂ ಜನವರಿ 01ರಂದು 21ಪೈಸೆ ಇಳಿಕೆಯಾಗಿ 68.11ರುಗೆ ಬಂದಿತ್ತು

ಮುಂಬೈಯಲ್ಲಿ ಪೆಟ್ರೋಲ್, ಡೀಸೆಲ್ ದರ
ಪೆಟ್ರೋಲ್
ಜನವರಿ 04ರಂದು ಪೆಟ್ರೋಲ್ ಬೆಲೆಯಲ್ಲಿ 20ಪೈಸೆಯಷ್ಟು ಇಳಿಕೆಯಾಗಿದ್ದು, ಪ್ರತಿ ಲೀಟರ್ ಗೆ 74.30 ರು ನಷ್ಟಿದೆ. ಜನವರಿ 02ರಂದು ಯಾವುದೇ ಬದಲಾವಣೆಯಾಗಿರಲಿಲ್ಲ. ಜನವರಿ 01ರಂದು 17ಪೈಸೆ ಇಳಿಕೆಯಾಗಿ 74.30ರುಗೆ ಬಂದಿತ್ತು.
ಡೀಸೆಲ್
ಜನವರಿ 04ರಂದು ಪ್ರತಿ ಡೀಸೆಲ್ ಬೆಲೆ 22ಪೈಸೆಯಷ್ಟು ಇಳಿಕೆಯಾಗಿದ್ದು, ಪ್ರತಿ ಲೀಟರ್ ಗೆ 65.34ರು ನಷ್ಟಿದೆ. ಜನವರಿ 03ರಂದು ಹಾಗೂ ಜನವರಿ 02ರಂದು ಪ್ರತಿ ಲೀಟರ್ ಡೀಸೆಲ್ ಬೆಲೆ 65.56ರಷ್ಟಿತ್ತು ಹಾಗೂ ಜನವರಿ 01ರಂದು 20ಪೈಸೆ ಇಳಿಕೆಯಾಗಿ 65.56ರುಗೆ ಬಂದಿತ್ತು












Click it and Unblock the Notifications