ವಾಹನ ಸವಾರರ ಗಮನಕ್ಕೆ : ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ
ಬೆಂಗಳೂರು, ಜನವರಿ 17: ಬುಧವಾರದಂದು ಪೆಟ್ರೋಲ್ ದರದಲ್ಲಿ ಇಳಿಕೆ ಕಂಡು ಬಂದಿದ್ದರೆ, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿತ್ತು. ಆದರೆ, ಗುರುವಾರದಂದು ಪೆಟ್ರೋಲ್ ಹಾಗೂ ಡೀಸೆಲ್ ಎರಡರ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗುರುವಾರದಂದು ಪೆಟ್ರೋಲ್ ಬೆಲೆಯಲ್ಲಿ 14 ಪೈಸೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಈಗ 70.47 ರೂಪಾಯಿಗಳಾಗಿದೆ. ಡೀಸೆಲ್ ಬೆಲೆಯಲ್ಲಿ 19 ಪೈಸೆ ಏರಿಕೆಯಾಗಿದ್ದು, ಈಗ ಪ್ರತಿ ಲೀಟರ್ ಡೀಸೆಲ್ ಬೆಲೆ 64.78 ರೂಪಾಯಿಗಳಾಗಿದೆ.
ಜಾಗತಿಕ ಆರ್ಥಿಕ ಪ್ರಗತಿ ಇಳಿಕೆಯಾಗಿ, ಬುಧವಾರದಂದು ಕಚ್ಚಾತೈಲ ಬೆಲೆಯಲ್ಲಿ ಕುಸಿತ ಕಂಡು ಬಂದಿತ್ತು. ಒಪೆಕ್ ನಿಂದ ಕಚ್ಚಾತೈಲ ಉತ್ಪಾದನೆ ಹಾಗೂ ಪೂರೈಕೆ ಮೇಲೆ ಕಡಿವಾಣ ಹಾಕಲಾಗಿದೆ. ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 60.46 ಯುಎಸ್ ಡಾಲರ್ ನಷ್ಟಿತ್ತು
ಯೂರೋಪ್ ಒಕ್ಕೂಟದಿಂದ ಹೊರಬರುವ 'ಬ್ರೆಕ್ಸಿಟ್ ಒಪ್ಪಂದ' ಕುರಿತ ಇಂಗ್ಲೆಂಡ್ ನಿಲುವು, ತೆರೆಸಾ ಮೇ ಸರ್ಕಾರದ ಪರಿಸ್ಥಿತಿ ಬಗ್ಗೆ ಆತಂಕಗೊಂಡಿದ್ದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರುಪಾಯಿ ಮೌಲ್ಯ, ಕಚ್ಚಾತೈಲ ಬೆಲೆ ಏರಿಳಿತದ ನಿರೀಕ್ಷೆಯಿತ್ತು. ತೆರೆಸಾ ಮೇ ಸರ್ಕಾರ ಬಹುಮತ ಗಳಿಸಿದ್ದು, ಇಂಧನ ಬೆಲೆ ಕುಸಿತ ತಪ್ಪಿಸಿದೆ.

ಬೆಂಗಳೂರಿನಲ್ಲಿ ಇಂಧನ ಬೆಲೆ
ಪೆಟ್ರೋಲ್
ಗುರುವಾರ (ಜನವರಿ 17) : 72.74 ರು ಪ್ರತಿ ಲೀಟರ್ (10 ಪೈಸೆ ಏರಿಕೆ)
ಜನವರಿ 16: 72.64 ರು ಪ್ರತಿ ಲೀಟರ್ (0.09 ಪೈಸೆ ಇಳಿಕೆ)
ಜನವರಿ 15: 72.73 ರು (29 ಪೈಸೆ ಏರಿಕೆ)
ಡೀಸೆಲ್
ಗುರುವಾರ (ಜನವರಿ 17) : 66.86 ಪ್ರತಿ ಲೀಟರ್ (15 ಪೈಸೆ ಏರಿಕೆ)
ಜನವರಿ 16 : 66.71 ರು ಪ್ರತಿ ಲೀಟರ್ (12 ಪೈಸೆ ಏರಿಕೆ)
ಜನವರಿ 15: 66.59 ರು (30 ಪೈಸೆ ಏರಿಕೆ)

ಮುಂಬೈನಲ್ಲಿ ಇಂಧನ ಬೆಲೆ
ಪೆಟ್ರೋಲ್
ಗುರುವಾರ ಜನವರಿ 17: 16.11 ರು ಪ್ರತಿ ಲೀಟರ್ (14 ಪೈಸೆ ಏರಿಕೆ)
ಜನವರಿ 16: 75.97 ರು ಪ್ರತಿ ಲೀಟರ್ (0.08 ಪೈಸೆ ಇಳಿಕೆ)
ಜನವರಿ 15: 76.05 ರು (28 ಪೈಸೆ ಏರಿಕೆ)
ಡೀಸೆಲ್
ಗುರುವಾರ (ಜನವರಿ 17) : 67.82 ರು ಪ್ರತಿ ಲೀಟರ್ (20 ಪೈಸೆ ಏರಿಕೆ)
ಜನವರಿ 16 : 67.62 ರು ಪ್ರತಿ ಲೀಟರ್ (13 ಪೈಸೆ ಏರಿಕೆ)
ಜನವರಿ 15: 67.49 ರು (31 ಪೈಸೆ ಏರಿಕೆ)

ಚೆನ್ನೈನಲ್ಲಿ ಇಂಧನ ಬೆಲೆ
ಪೆಟ್ರೋಲ್
ಗುರುವಾರ (ಜನವರಿ 17) : 73.15 ರು ಪ್ರತಿ ಲೀಟರ್ (15 ಪೈಸೆ ಇಳಿಕೆ)
ಜನವರಿ 16: 73.00 ರು ಪ್ರತಿ ಲೀಟರ್ (0.08 ಪೈಸೆ ಇಳಿಕೆ)
ಜನವರಿ 15: 73.08 ರು (28 ಪೈಸೆ ಏರಿಕೆ)
ಡೀಸೆಲ್
ಗುರುವಾರ (ಜನವರಿ 17) : 68.42 ರು ಪ್ರತಿ ಲೀಟರ್ (20 ಪೈಸೆ ಏರಿಕೆ)
ಜನವರಿ 16 : 68.22 ರು ಪ್ರತಿ ಲೀಟರ್ (13 ಪೈಸೆ ಏರಿಕೆ)
ಜನವರಿ 15: 68.09 ರು (30 ಪೈಸೆ ಏರಿಕೆ)

ನವದೆಹಲಿಯಲ್ಲಿ ಇಂಧನ ಬೆಲೆ
ಪೆಟ್ರೋಲ್
ಗುರುವಾರ ಜನವರಿ 16: 70.47 ರು ಪ್ರತಿ ಲೀಟರ್ (0.14 ಪೈಸೆ ಇಳಿಕೆ)
ಜನವರಿ 16: 70.33 ರು ಪ್ರತಿ ಲೀಟರ್ (0.08 ಪೈಸೆ ಇಳಿಕೆ)
ಜನವರಿ 15: 70.41 ರು (28 ಪೈಸೆ ಏರಿಕೆ)
ಡೀಸೆಲ್
ಗುರುವಾರ (ಜನವರಿ 17) : 64.78 ರು ಪ್ರತಿ ಲೀಟರ್ (19 ಪೈಸೆ ಏರಿಕೆ)
ಜನವರಿ 16 : 64.59 ರು ಪ್ರತಿ ಲೀಟರ್ (12 ಪೈಸೆ ಏರಿಕೆ)
ಜನವರಿ 15: 64.47 ರು (29 ಪೈಸೆ ಏರಿಕೆ)












Click it and Unblock the Notifications