ಕ್ರೆಡಿಟ್ ಕಾರ್ಡ್ ನಿಂದ ಪೇಟಿಎಂಗೆ ಹಣ ವರ್ಗಾಯಿಸಿದರೆ ಶೇ.2ರಷ್ಟು ಶುಲ್ಕ
ಬೆಂಗಳೂರು, ಮಾರ್ಚ್. 09 : ಕ್ರೆಡಿಟ್ ಕಾರ್ಡ್ ಮೂಲಕ ಪೇಟಿಎಂ ವ್ಯಾಲೆಟ್ ಗೆ ಹಣ ವರ್ಗಾವಣೆ ಮಾಡಿಕೊಳ್ಳುವ ಚಂದಾದಾರರಿಗೆ ಶೇ.2ರಷ್ಟು ಶುಲ್ಕ ವಿಧಿಸಲು ಪೇಟಿಎಂ ನಿರ್ಧರಿಸಿದೆ.
ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಡಿಜಿಟಲ್ ವ್ಯಾಲೆಟ್ ಗೆ ಹಣ ವರ್ಗಾಯಿಸುವ ಮೂಲಕ ಉಚಿತ ಕ್ರೆಡಿಟ್ ಪಡೆಯುವ ಮತ್ತು ಜಿರೋ ವಹಿವಾಟಿನ ವೆಚ್ಚದ ಮೂಲಕ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸುವ ಬಳಕೆದಾರರ ಕ್ರಮದ ಪರಿಣಾಮ ಪೇಟಿಎಂ ಈ ನಿರ್ಧಾರ ಕೈಗೊಂಡಿದೆ. ಈ ನಿಯಮ ಮಾರ್ಚ್ 8ರಿಂದಲೇ ಅನ್ವಯವಾಗಿದೆ. [ಪೇಟಿಎಂ ವಾಲೆಟ್ ಉಪಯೋಗಿಸುವುದು, ಹಣ ವರ್ಗಾವಣೆ ಹೇಗೆ?]

ಆದರೆ, ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್ ಸೇರಿದಂತೆ ಇತರೆ ವಿಧಾನಗಳಿಂದ ಪೇಟಿಎಂ ವ್ಯಾಲೆಟ್ ಗೆ ಹಣ ವರ್ಗಾಹಿಸುವುದಕ್ಕೆ ಯಾವುದೇ ಹೆಚ್ಚುವರಿ ಅನ್ವಯವಾಗುವುದಿಲ್ಲ.
ಐನೂರು-ಸಾವಿರ ರು ಮುಖಬೆಲೆ ನೋಟು ನಿಷೇಧದ ಬಳಿಕ ಸಣ್ಣ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು ಯಾವುದೇ ಶುಲ್ಕ ವಿಧಿಸಿರಲಿಲ್ಲ. ಹಾಗೂ ಪೇಟಿಎಂ ವ್ಯಾಲೆಟ್ ನಲ್ಲಿರುವ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ಮರಳಿ ವರ್ಗಾಯಿಸಲು ಯಾವುದೇ ಶುಲ್ಕ ಇರುವುದಿಲ್ಲ.












Click it and Unblock the Notifications