ಡಿಜಿಟಲ್ ಪಾವತಿ : ಪೇಪಾಲ್ ಫಾರ್ ಬ್ಯುಸಿನೆಸ್ ಬಿಡುಗಡೆ

ಮುಂಬೈ, ಅಕ್ಟೋಬರ್ 04: ಜಾಗತಿಕ ತಂತ್ರಜ್ಞಾನದ ಪ್ಲಾಟ್‍ಫಾರ್ಮ್ ಹಾಗೂ ಡಿಜಿಟಲ್ ಪಾವತಿ ಮುಂಚೂಣಿ ಸಂಸ್ಥೆ, ಪೇಪಾಲ್, ಇಂದು ಭಾರತದಲ್ಲಿ ತನ್ನ ಮೊದಲ ವ್ಯಾಪಾರಿ-ಕೇಂದ್ರಿತ ಆ್ಯಪ್ ಪೇಪಾಲ್ ಫಾರ್ ಬ್ಯುಸಿನೆಸ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಈ ಆ್ಯಪ್ ಮೂಲಕ ಸಣ್ಣ/ಮಧ್ಯಮ ವ್ಯಾಪಾರಿಗಳು ಹಾಗೂ ಫ್ರೀಲ್ಯಾನ್ಸರ್‍ಗಳು ತಮ್ಮ ದೇಶೀಯ ಹಾಗೂ ಅಂತಾರಾಷ್ಟ್ರೀಯ ಉದ್ದಿಮೆಯನ್ನು ಅತ್ಯಂತ ಸುಗಮವಾಗಿ ಪೇಪಾಲ್‍ನ ಅತ್ಯುತ್ಕೃಷ್ಟ ರಿಸ್ಕ್ ಮತ್ತು ಭದ್ರತಾ ಪ್ಲಾಟ್ ಫಾರಂನ ಬೆಂಬಲದೊಂದಿಗೆ ನಡೆಸಬಹುದಾಗಿದೆ.

ಸಣ್ಣ/ಮಧ್ಯಮ ಉದ್ದಿಮೆ ಮತ್ತು ಫ್ರೀಲ್ಯಾನ್ಸರ್‍ಗಳು ಯಾವತ್ತೂ ಲಗುಬಗೆಯಿಂದ ಇರಬೇಕಾದ್ದು ಅವರ ಪ್ರಮುಖ ಅವಶ್ಯಕತೆಯಾಗಿರುತ್ತದೆ. ಇಂಥವರಿಗೆ ಈ ಆ್ಯಪ್ ಕಂಪ್ಯೂಟೆಡ್ ಸೇಲ್ಸ್ ಇನ್‍ಸೈಟ್‍ಗಳನ್ನು ಒದಗಿಸುವುದಲ್ಲದೆ, ವೃತ್ತಿಪರ ಇನ್‍ವಾಯ್ಸ್ ಮಾಡುವ ಸಾಮರ್ಥ್ಯ ಮತ್ತು ಜಗತ್ತಿನಾದ್ಯಂತದ ಬಗೆ ಬಗೆಯ ಕರೆನ್ಸಿಗಳಿಂದಲೂ ಪಾವತಿಯನ್ನು ಸ್ವೀಕರಿಸಲು ಅನುವು ಮಾಡಿಕೊಡುತ್ತದೆ.

PayPal launches merchant App for business in India

ಆ್ಯಪ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಪೇಪಾಲ್ ಇಂಡಿಯಾ ನಿರ್ದೇಶಕ-ಗ್ರೋತ್, ನರ್ಸಿ ಸುಬ್ರಮಣಿಯನ್, ಪಾವತಿಯನ್ನು ಯಾವಾಗಲೂ ಸುಗಮ ಹಾಗೂ ಸುರಕ್ಷಿತವಾಗಿ ಆಗುವಂತೆ, ಜೊತೆಗೆ ವ್ಯಾಪಾರಿಗಳು ಮತ್ತು ಫ್ರೀಲ್ಯಾನ್ಸರ್‍ಗಳು ತಮ್ಮ ಉದ್ದಿಮೆಯಲ್ಲಿ ಪ್ರಗತಿ ಸಾಧಿಸುವಂತೆ ಮಾಡುವುದು ನಮ್ಮ ಪ್ರಮುಖ ಉದ್ದೇಶವಾಗಿದೆ.

ಆ್ಯಪ್‍ನಲ್ಲಿನ ಪ್ರಮುಖ ಫೀಚರ್‍ಗಳು: - ದೇಶೀಯ ಮತ್ತು ಅಂತಾರಾಷ್ಟ್ರೀಯ ವಹಿವಾಟಿಗೆ ಒಂದೇ ಆ್ಯಪ್- ಬಹುಕರೆನ್ಸಿಯ ಮೊತ್ತಗಳನ್ನು ವೀಕ್ಷಿಸುವಂಥ ಅವಕಾಶ - ಸುಗಮವಾಗಿ ಇನ್‍ವಾಯ್ಸ್ ಸೃಷ್ಟಿಸುವ ಸಾಮರ್ಥ್ಯ - ಸುಗಮವಾಗಿ ಮಾರಾಟದ ಒಳನೋಟವನ್ನು ನೋಡಲು ಅವಕಾಶ - ನಿಯಮಿತವಾಗಿ ಮರುಪಾವತಿ ವಿತರಣೆ ಈ ಹೊಸ ಆ್ಯಪ್ ಬಿಡುಗಡೆಯ ಮೂಲಕ, ತಂತ್ರಜ್ಞಾನದ ಮುಖಾಂತರವಾಗಿ ಸಣ್ಣ ಉದ್ಯಮಗಳ ಸಂಪೂರ್ಣ ಸಮಸ್ಯೆಗಳನ್ನು ಪರಿಹರಿಸುವುದು ಪೇಪಾಲ್ ಉದ್ದೇಶವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+