ಆನ್ ಲೈನ್ ಫೈಲ್ ಹಂಚಿಕೆ ತಾಣ ಬಾಗಿಲು ಮುಚ್ಚುತ್ತಿದೆ!

ಬೆಂಗಳೂರು, ಫೆ.12: ಒಂದೇ ಒಂದು ಕ್ಲಿಕ್ ಮಾಡುವ ಮೂಲಕ ಅತಿ ದೊಡ್ಡ ದೊಡ್ಡ ಗಾತ್ರದ ಫೈಲ್ ಗಳನ್ನು ಆನ್ ಲೈನ್ ನಲ್ಲಿ ಹಂಚಲು ವೇದಿಕೆ ನೀಡಿದ್ದ Rapidshare ವೆಬ್ ತಾಣ ತನ್ನ ಕೊನೆ ದಿನಗಳನ್ನು ಎದುರಿಸುತ್ತಿದೆ. ಮಾ.31ರಿಂದ ವೆಬ್ ತಾಣ ಸಂಪೂರ್ಣ ಮುಚ್ಚಲಿದೆ.

ಇಂಟರ್ನೆಟ್ ನಲ್ಲಿ ಫೈಲ್ ಹೋಸ್ಟಿಂಗ್ ಸೇವೆಯನ್ನು ಆರಂಭಿಸಿದ ಸ್ವಿಟ್ಜರ್ಲೆಂಡ್ ಮೂಲದ ಅಗ್ರಗಣ್ಯ ಸಂಸ್ಥೆ Rapidshare 2002ರಿಂದಲೂ ಕಾರ್ಯ ನಿರ್ವಹಿಸುತ್ತಿದೆ. ಲಕ್ಷಾಂತರ ಮಂದಿ ಈ ವೇದಿಕೆಯನ್ನು ಬಳಸಿಕೊಂಡು ಅಸಂಖ್ಯಾತ ಫೈಲ್ ಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುಲಭವಾಗಿ, ಸರಳವಾಗಿ, ತ್ವರಿತವಾಗಿ ರವಾನೆ ಮಾಡುತ್ತಿದ್ದರು. ಈಗ ಮಾ.31ರ ನಂತರ ಎಲ್ಲಾ ಖಾತೆದಾರರು ಹಾಗೂ ಅವರು ಸಂಗ್ರಹಿಸಿದ ಮಾಹಿತಿ ಡಿಲಿಟ್ ಆಗಲಿದೆ.

Online Hosting Service Rapidshare Shuts Down

ಈ ರೀತಿ ಫೈಲ್ ಶೇರಿಂಗ್ ವೆಬ್ ತಾಣಗಳ ಮೂಲಕ ಅಕ್ರಮವಾಗಿ ನಕಲಿ ಆಡಿಯೋ, ವಿಡಿಯೋ ಹಾಗೂ ಗುಪ್ತ ದಾಖಲೆಗಳು ರವಾನೆಯಾಗುತ್ತಿವೆ ಎಂಬ ದೂರುಗಳು ಕೇಳಿ ಬಂದಿತ್ತು. ಅನೇಕ ಕೇಸುಗಳನ್ನು ಸಂಸ್ಥೆ ಎದುರಿಸಿತ್ತು. ಜರ್ಮನಿ ಮಾತ್ರ ಏನು ತೊಂದರೆಯಿಲ್ಲ ವೆಬ್ ಸೈಟ್ ನಡೆಸಿಕೊಂಡು ಹೋಗಿ ಎಂದಿತ್ತು. ನಿರಂತರವಾಗಿ ಆಡಳಿತಗಾರರು, ಪೈರಸಿ ವಿರೋಧಿ ಆಂದೋಲನಗಾರ ಒತ್ತಡದಿಂದ ಬೇಸತ್ತ ಸಂಸ್ಥೆ 2013ರಲ್ಲಿ ಸುಮಾರು 45 ಜನ ಉದ್ಯೊಗಿಗಳನ್ನು ಕೆಲಸದಿಂದ ವಜಾಗೊಳಿಸಿತ್ತು.

ಒಂದು ಅಂದಾಜಿನ ಪ್ರಕಾರ 10 ಪೆಟಾ ಬೈಟ್ಸ್ ನಷ್ಟು ಫೈಲ್ಸ್ ರವಾನೆಯಾಗಿದೆ. ಒಂದೇ ಸಲಕ್ಕೆ ಸುಮಾರು 3 ಮಿಲಿಯನ್ ಬಳಕೆದಾರರನ್ನು ತಡೆದುಕೊಳ್ಳುವಷ್ಟು ಸಾಮರ್ಥ್ಯ ಈ ವೆಬ್ ತಾಣಕ್ಕಿತ್ತು.

ಹಣ ಪಾವತಿಸಿ ಪ್ರೀಮಿಯಂ ಫೈಲ್ ಶೇರಿಂಗ್ ಸೇವೆ ಪಡೆದ ಗ್ರಾಹಕರು [email protected]ಗೆ ಇಮೇಲ್ ಮಾಡಿ ತಮ್ಮ ಫೈಲ್ ಗಳನ್ನು ಉಳಿಸಿಕೊಳ್ಳಬಹುದು. ಇದಕ್ಕೆ ಫೆ.28 ಕೊನೆ ದಿನಾಂಕ. ಉಳಿದಂತೆ ಸಂಪೂರ್ಣವಾಗಿ ಎಲ್ಲಾ ಸೇವೆಗಳು ಮಾ.31ರಿಂದ ಬಂದ್ ಆಗಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+