ಒನ್ ಪ್ಲಸ್ ಸ್ಮಾರ್ಟ್ ಫೋನಿನಿಂದ ಸಂಭ್ರಮದ ಆಫರ್

ಬೆಂಗಳೂರು, ಸೆ. 05: ಒನ್ ಪ್ಲಸ್ ಇಂದು ಭಾರತದಲ್ಲಿ ಯಶಸ್ವಿ 1000 ದಿನಗಳನ್ನು ಪೂರೈಸಿರುವುದಾಗಿ ಘೋಷಿಸಿದೆ. ಈ ಮೈಲಿಗಲ್ಲನ್ನು ತನ್ನ ಬಳಕೆದಾರರೊಂದಿಗೆ ಸಂಭ್ರಮಿಸಲು ವಿಶೇಷ ಉತ್ತೇಜಕ ಕಾರ್ಯಕ್ರಮ 'ಒನ್ ಪ್ಲಸ್ 1000 ದಿನಗಳ'ನ್ನು ಘೋಷಿಸಿದೆ.

ಒನ್‍ಪ್ಲಸ್ 1000 ದಿನಗಳ ಮಾರಾಟದಲ್ಲಿ ಕಂಪನಿಯ ಫ್ಲಾಗ್‍ಶಿಪ್ ಡಿವೈಸ್ ಒನ್‍ಪ್ಲಸ್ 3ಟಿ 29,999ರೂ.ಗೆ ಬದಲಾಗಿ 25,999ರೂ.ಗೆ ಲಭ್ಯವಿದೆ. ಈ ಪ್ರೊಮೊಷನಲ್ ಕಾರ್ಯಕ್ರಮ ಸೆ.5,2017ರಂದು ಆರಂಭವಾಗಲಿದ್ದು ಸೆ.7,2017ರಂದು ಅಂತ್ಯಗೊಳ್ಳಲಿದೆ.

OnePlus Brand Store Offer great discount Sept 05 to 07, 2017

ಈ 3 ದಿನಗಳ ಪ್ರಮೊಷನ್ ಅವಧಿಯಲ್ಲಿ ಗ್ರಾಹಕರು ಹೆಚ್ಚುವರಿ 2000 ರೂ. ಕ್ಯಾಶ್ ಬ್ಯಾಕ್ ಅನ್ನು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಗಳ ಮೇಲೆ ಪಡೆಯಬಹುದು. ಹಳೆಯ ಫೋನ್ ಗಗಳ ವಿನಿಮಯದ ವೇಳೆ 2000 ರೂ. ವಿನಿಮಯ ಕೊಡುಗೆಯನ್ನು ಒನ್ ಪ್ಲಸ್ 3ಟಿ ಮತ್ತು ಒನ್‍ಪ್ಲಸ್ 5ಗಳ ಮೇಲೆ ಪಡೆಯಬಹುದು. ಜೊತೆಗೆ 12 ತಿಂಗಳ ಜಿರೊ ಇಎಂಐ ಕೊಡುಗೆ ಮತ್ತು 100 ಅದೃಷ್ಟಶಾಲಿಗಳು ಕ್ಲಿಯರ್ ಟ್ರಿಪ್ ನಿಂದ ದೇಶೀಯ ಪ್ಲೈಟ್ ವೋಚರ್ ಪಡೆಯಬಹುದು.

ಒನ್ ಪ್ಲಸ್ ಸಂಶೋಧನಾತ್ಮಕ ಸ್ಮಾರ್ಟ್‍ಫೋನ್ ಗಳಲ್ಲಿ ಗ್ರಾಹಕರ ಮೊದಲ ಆಯ್ಕೆಯಾಗಿದೆ. ಐಡಿಸಿ ಕ್ಯು2 2017 ಮಾರ್ಕೆಟ್ ವರದಿ ಪ್ರಕಾರ ಪ್ರೀಮಿಯಂ ಸ್ಮಾರ್ಟ್‍ಫೋನ್ ವಲಯದಲ್ಲಿ ಒನ್ ಪ್ಲಸ್ ಶೇ.14ರಷ್ಟು ಪಾಲು ಹೊಂದಿದೆ(400 ಡಾಲರ್ ಮತ್ತು ಅಧಿಕ ವಲಯದಲ್ಲಿ).

ಭಾರತದಲ್ಲಿ ಒನ್ ಪ್ಲಸ್ ಪ್ರಯಾಣ ಒನ್ ಪ್ಲಸ್ ಒನ್ ಬಿಡುಗಡೆಯೊಂದಿಗೆ ಆರಂಭಗೊಂಡಿತ್ತು. ಬ್ರ್ಯಾಂಡ್ ತನ್ನದೆ ನಿರ್ವಹಣೆ ವ್ಯವಸ್ಥೆ ಆಕ್ಸಿಜನ್ ಒಎಸ್ ನೊಂದಿಗೆ ಒನ್ ಪ್ಲಸ್ 2 ಮತ್ತು ಒನ್ ಪ್ಲಸ್ ಎಕ್ಸ್ ಗಗಳನ್ನು ಬಿಡುಗಡೆಗೊಳಿಸಿತು. ನೆವೆರ್ ಸೆಟಲ್ ಎಂಬ ತನ್ನ ಧ್ಯೇಯದಂತೆ ತನ್ನ 4ನೇ ಮಾದರಿ ಒನ್ ಪ್ಲಸ್ 3ಯನ್ನು ಸುರಕ್ಷಿತ ಮತ್ತು ವೇಗಯುತ ಚಾರ್ಜಿಂಗ್ ಬ್ಯಾಟರಿಯೊಂದಿಗೆ ಪರಿಚಯಿಸಿತು.

ಒನ್ ಪ್ಲಸ್ 3ಟಿ ಹೆಚ್ಚಿನ ಆಯ್ಕೆಗಳೊಂದಿಗಿನ ಮತ್ತೊಂದು ಯಶಸ್ವಿ ಫೋನ್. ಈ ವರ್ಷದ ಅಂತ್ಯದೊಳಗೆ ಇನ್ನೂ 3 ಸ್ಮಾರ್ಟ್‍ಫೋನ್ ಗನ್ ಗಳನ್ನು ತರಲಿದೆ. ಈ ವರ್ಷ ಜೂನ್ ನಲ್ಲಿ ಬಿಡುಗಡೆಗೊಂಡ ಒನ್ ಪ್ಲಸ್ 5, 8ಜಿಬಿ ರ್ಯಾಮ್‍ನೊಂದಿಗೆ, ಗರಿಷ್ಠ ರೆಸಲ್ಯೂಷನ್ ನ ಡ್ಯುಯಲ್ ಕ್ಯಾಮೆರಾದೊಂದಿಗಿನ ಕ್ರಾಂತಿಕಾರಕ ಫೋನ್ ಎನಿಸಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+