ಆಯಿಲ್ ಇಂಡಿಯಾ ಲಿಮಿಟೆಡ್‌ಗೆ 249 ಕೋಟಿ ರೂಪಾಯಿ ತ್ರೈಮಾಸಿಕ ನಷ್ಟ
ನವದೆಹಲಿ, ಆಗಸ್ಟ್ 22: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಎರಡನೇ ಅತಿದೊಡ್ಡ ತೈಲ ಮತ್ತು ಅನಿಲ ಉತ್ಪಾದಕ ಆಯಿಲ್ ಇಂಡಿಯಾ ಲಿಮಿಟೆಡ್ ಇತಿಹಾಸದಲ್ಲಿ ಎರಡನೇ ಬಾರಿಗೆ ತ್ರೈಮಾಸಿಕ ನಷ್ಟ ಅನುಭವಿಸಿದೆ.
ಕಚ್ಚಾ ತೈಲ ಬೆಲೆಗಳು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಯಾದ ನಂತರ ಆಯಿಲ್ ಇಂಡಿಯಾ ಲಿಮಿಟೆಡ್ ಎರಡನೇ ಬಾರಿಗೆ ನಷ್ಟ ಕಂಡಿದೆ. ಹಿಂದಿನ ಅವಧಿಗೆ ಇದೇ ಅವಧಿಯಲ್ಲಿ 624.80 ಕೋಟಿ ನಿವ್ವಳ ಲಾಭದೊಂದಿಗೆ ಹೋಲಿಸಿದರೆ 2020-21ರ ಹಣಕಾಸು ವರ್ಷದ ಮೊದಲ ತ್ರೈಮಾಸಿದಲ್ಲಿ 248.61 ಕೋಟಿ ನಿವ್ವಳ ನಷ್ಟವನ್ನು ಹೊಂದಿದೆ.
''ಇದು ಒಐಎಲ್ ಇತಿಹಾಸದಲ್ಲೇ ಎರಡನೇ ತ್ರೈಮಾಸಿಕ ನಷ್ಟವಾಗಿದೆ. 2018-19ರ ಆರ್ಥಿಕ ವರ್ಷದಲ್ಲಿ ನಮಗೆ ತ್ರೈಮಾಸಿಕ ನಷ್ಟವಾಗಿತ್ತು" ಎಂದು ಒಐಎಲ್ ಹಣಕಾಸು ನಿರ್ದೇಶಕ ಹರೀಶ್ ಮಾಧವ್ ಶನಿವಾರ ಹೇಳಿದ್ದಾರೆ.

ಜೂನ್ ತ್ರೈಮಾಸಿಕದಲ್ಲಿ ಕಂಪನಿಯು ಉತ್ಪಾದಿಸಿದ ತೈಲದ ಬೆಲೆ ಬ್ಯಾರೆಲ್‌ಗೆ 30.43 ಡಾಲರ್‌ಗೆ ಇಳಿದಿದ್ದರಿಂದ ಈ ನಷ್ಟವು ಸಂಭವಿಸಿದೆ. ಒಂದು ವರ್ಷದ ಹಿಂದೆ ಬ್ಯಾರೆಲ್ ಬೆಲೆ 66.33 ಡಾಲರ್‌ಗೆ ತಲುಪಿದೆ ಎಂದು ಅವರು ಹೇಳಿದರು.












Click it and Unblock the Notifications