ಕೇವಲ 10 ದಿನದಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಪಡೆಯಿರಿ
ನವದೆಹಲಿ, ಸೆಪ್ಟೆಂಬರ್. 14: ತೆರಿಗೆ ರಿಟರ್ನ್ಸ ದಾಖಲು ಮಾಡಿದ ಹತ್ತೇ ದಿನದಲ್ಲಿ ನಿಮ್ಮ ಮರುಪಾವತಿ ಹಣ ಕೈ ಸೇರಲಿದೆ. ಆದಾಯ ತೆರಿಗೆ ಇಲಾಖೆ ತೆರಿಗೆ ಪಾವತಿದಾರರಿಗೆ ಇಂಥದ್ದೊಂದು ಶುಭ ಸುದ್ದಿ ನೀಡಿದೆ.
ಎಲೆಕ್ಟ್ರಾನಿಕ್ ವ್ಯವಸ್ಥೆ ಮತ್ತು ಆಧಾರ್ ಆಧಾರಿತ ಐಟಿಆರ್ ಅರ್ಜಿ ಪರಿಶೀಲನೆ ನಡೆಯುತ್ತಿರುವುದರಿಂದ ಇದೀಗ ವೇಗವಾಗಿ ತೆರಿಗೆ ರಿಟರ್ನ್ಸ್ ಮರುಪಾವತಿಯಾಗುತ್ತಿದೆ. ಇದು ಅರ್ಥ ವ್ತವಸ್ಥೆಯಲ್ಲಿ ವೇಗ ಸಾಧಿಸಲು ನೆರವಾಗಿದೆ.[ತೆರಿಗೆ ಕಳ್ಳರ ಮಾಹಿತಿ ನೀಡಿ, ಬಹುಮಾನ ಗಳಿಸಿ]

ಕಳೆದ ವರ್ಷಕ್ಕೆ ಹೋಲಿಸಿದತೆ ಇ ಪೈಲಿಂಗ್ ನಲ್ಲಿ ಶೇ.22.14 ಏರಿಕೆಯಾಗಿದೆ. ಸೆಪ್ಟೆಂಬರ್ 7 ರವೆರೆಗೆ 2.06 ಕೋಟಿ ರು. ಆನ್ ಲೈನ್ ರಿಟರ್ನ್ಸ್ ಸ್ವೀಕರಿಸಲಾಗಿದೆ.
ಮರುಪಾವತಿ ಮಾಡಲೆಂದೇ ಅಧಿಕಾರಿಗಳ ತಂಡ ನಿಯೋಜನೆ ಮಾಡಲಾಗಿದೆ. ನಿಮ್ಮ ಆಧಾರ್ ಸಂಖ್ಯೆ ನೊಂದಣಿಯಾಗಿದ್ದರೆ ಮೊದಲು ತಿಂಗಳುಗಟ್ಟಲೇ ಹಿಡಿಯುತ್ತಿದ್ದ ಕೆಲಸ ಇದೀಗ ಸುಲಭ ಮತ್ತು ಸರಳವಾಗಿದೆ. ಗ್ರಾಹಕ ಮತ್ತು ಅಧಿಕಾರಿಗಳಿಗೂ ದಾಖಲೆ ಪರಿಶೀಲನೆ ನಡೆಸುವಾಗ ಯಾವುದೇ ಗೊಂದಲ ಉಂಟಾಗುತ್ತಿಲ್ಲ. ಕೇಂದ್ರ ಸರ್ಕಾರದ ಡಿಜಿಟಲೀಕರಣ ನೀತಿ ಗ್ರಾಹಕ ಸ್ನೇಹಿಯಾಗಿಮಾರ್ಪಡುತ್ತಿದೆ.












Click it and Unblock the Notifications