• search

ಬೆಂಗಳೂರಲ್ಲಿ 5ಜಿ ಲ್ಯಾಬ್ ಸ್ಥಾಪನೆ: ನೋಕಿಯಾ

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಬೆಂಗಳೂರು, ಅ.13: ಫ್ರೆಂಚ್ ಸಂಸ್ಥೆ ಅಲ್ಕಾಟೆಲ್ ಲೂಸೆಂಟ್ ಖರೀದಿಗೆ ನೋಕಿಯಾ ಸಹಿ ಹಾಕಿದ ಮೇಲೆ ಫಿನ್ಲೆಂಡ್ ಮೂಲದ ನೆಟ್ವರ್ಕ್ ಉಪಕರಣಗಳ ಉತ್ಪಾದನಾ ಸಂಸ್ಥೆ ನೋಕಿಯಾ ಮತ್ತೆ ಮಾರುಕಟ್ಟೆಯಲ್ಲಿ ಸುದ್ದಿಯಲ್ಲಿದೆ. ಸಂಸ್ಥೆಯ ಸಿಇಒ ರಾಜೀವ್ ಸೂರಿ ಅವರು ತಮ್ಮ ಮೊದಲ ಸುದ್ದಿಗೋಷ್ಠಿಯಲ್ಲೇ ಬೆಂಗಳೂರಿನಲ್ಲಿ 5ಜಿ ಲ್ಯಾಬ್ ಸ್ಥಾಪನೆ ಬಗ್ಗೆ ಮಾತನಾಡಿದ್ದಾರೆ.

    ಮೈಕ್ರೋಸಾಫ್ಟ್ ಸಂಸ್ಥೆ ನೆರಳು ನೋಕಿಯಾ ಮೇಲೆ ಚಾಚಿ ಕೊನೆಗೆ ನೋಕಿಯಾ ಮೊಬೈಲ್ ಅಸ್ತಿತ್ವವೇ ಕಳೆದುಕೊಂಡಿತು. ಕೊನೆಗೂ ಮೈಕ್ರೋಸಾಫ್ಟ್ ಕೂಡಾ ನೋಕಿಯಾ ಹೆಸರನ್ನು ಕೈಬಿಟ್ಟು ತನ್ನದೇ ಬ್ರ್ಯಾಂಡ್ ಗೆ ಹೆಚ್ಚು ಒತ್ತು ನೀಡಿದ್ದು ಈಗ ಇತಿಹಾಸ. ಈಗ ನೋಕಿಯಾ ಸಂಸ್ಥೆ ನೆಟ್ವರ್ಕ್ ಕ್ಷೇತ್ರದಲ್ಲಿ ವಿಶ್ವದ ನಂ.2 ಸ್ಥಾನದಲ್ಲಿದ್ದು, ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡಿದೆ.

    ಅಲ್ಕಾಟೆಲ್-ಲೂಸೆಂಟ್ ಕಂಪನಿಯನ್ನು ಬುಧವಾರ ಸುಮಾರು 15.6 ಬಿಲಿಯನ್ ಯುರೋಸ್ (16.58 ಬಿಲಿಯನ್ ಯುಎಸ್ ಡಿ) ಕೊಟ್ಟು ಖರೀದಿಸಿದೆ. ಈ ಡೀಲ್ 2016ರಲ್ಲಿ ಪರಿಪೂರ್ಣವಾಗಲಿದೆ.ಈ ಡೀಲ್ ನಂತರ ಎರಡು ಕಂಪನಿಗಳ ಒಟ್ಟು ಮಾನವ ಸಂಪನ್ಮೂಲ ಬಲ 11,400ಕ್ಕೇರಲಿದೆ. [ನೋಕಿಯಾದಿಂದ ನೆಟ್ವರ್ಕ್ ಕ್ಷೇತ್ರದಲ್ಲಿ ಭಾರಿ ಡೀಲ್]

    ವೈರ್ ಲೆಸ್ ಮಾರುಕಟ್ಟೆಯಲ್ಲಿ ಎರಿಕ್ಸನ್ ಶೇ40ರಷ್ಟು ಸ್ವಾಮ್ಯತೆ ಹೊಂದಿದ್ದರೆ ನೋಕಿಯಾ ಶೇ35 ರಷ್ಟಿದೆ. ಚೀನಾದ ಹ್ಯೂವೈ ಶೇ 20ರಷ್ಟು ಪಾಲು ಹೊಂದಿದೆ. [ನೋಕಿಯಾ ಹೆಸರು ಕೈಬಿಟ್ಟ ಮೈಕ್ರೋಸಾಫ್ಟ್]

    ಎಲ್ಲರಿಗೂ ಸವಾಲು: ಎರಿಕ್ಸನ್, ಹ್ಯೂವೈ ಅಲ್ಲದೆ, ಕ್ಲೌಂಡ್ ಕಂಪ್ಯೂಟಿಂಗ್ ಬಳಕೆ ಮಾಡುತ್ತಿರುವ ಗೂಗಲ್, ಫೇಸ್ ಬುಕ್ ವಿರುದ್ಧ ಕೂಡಾ ನೋಕಿಯಾ ಪೈಪೋಟಿಗೆ ನಿಂತಿದೆ.

    ಭಾರತ ನಮ್ಮ ಲಕ್ಕಿ ಕೇಂದ್ರ

    ಭಾರತ ನಮ್ಮ ಲಕ್ಕಿ ಕೇಂದ್ರ

    ಮೊಬೈಲ್ ಹ್ಯಾಂಡ್ ಸೆಟ್ ಜನಪ್ರಿಯಗೊಂಡ ಕಾಲದಿಂದಲೂ ಭಾರತದೊಡನೆ ನಮ್ಮ ಸಂಸ್ಥೆ ಉತ್ತಮ ಬಾಂಧವ್ಯ ಹೊಂದಿದೆ.ಈಗ ಎಲ್ಟಿಇ, 5ಜಿ ಇಂಟರ್ನೆಟ್ ಆಫ್ ಥಿಂಗ್ಸ್ (IoT) ಸ್ಥಾಪನೆಗೆ ಮುಂದಾಗಿದ್ದೇವೆ. ಜಾಗತಿಕವಾಗಿ ನಮ್ಮ ಉತ್ಪನ್ನಗಳು ಹೇಗೆ ಮಾರುಕಟ್ಟೆ ಪ್ರವೇಶಿಸುತ್ತದೆಯೋ ಅದೇ ಉತ್ಪನ್ನಗಳು ಭಾರತದಲ್ಲೂ ಕಾಣಿಸಲಿದೆ.

    ಐದನೇ ಲ್ಯಾಬ್ ಬೆಂಗಳೂರಲ್ಲಿ ಸ್ಥಾಪನೆ

    ಐದನೇ ಲ್ಯಾಬ್ ಬೆಂಗಳೂರಲ್ಲಿ ಸ್ಥಾಪನೆ

    ಬೆಂಗಳೂರಲ್ಲಿ ವರ್ಷಾಂತ್ಯಕ್ಕೆ 5ಜಿ ಲ್ಯಾಬ್ ಆರಂಭಗೊಳ್ಳಲಿದೆ. ಇದೇ ರೀತಿ ಲ್ಯಾಬ್ ಯುಎಸ್, ಚೀನಾ, ಜಪಾನ್ ಹಾಗೂ ಕೊರಿಯಾದಲ್ಲಿ ಕಾರ್ಯನಿರ್ವಹಿಸಲಿದೆ. ಮೋದಿ ಅವರ ಡಿಜಿಟಲ್ ಇಂಡಿಯಾಗೆ ಅನುಗುಣವಾಗಿ ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ರಾಜೀವ್ ಹೇಳಿದರು.

    ರಾಜೀವ್ ಬಗ್ಗೆ ಒಂದಿಷ್ಟು

    ರಾಜೀವ್ ಬಗ್ಗೆ ಒಂದಿಷ್ಟು

    1967ರಲ್ಲಿ ಭಾರತದಲ್ಲಿ ಜನಿಸಿದ ರಾಜೀವ್ ಅವರು ಯಶಪಾಲ್ ಹಾಗೂ ಆಶಾ ಸೂರಿ ದಂಪತಿಯ ಪುತ್ರ. ಕುವೈಟಿನಲ್ಲಿ ಬಾಲ್ಯವನ್ನು ಕಳೆದ ರಾಜೀವ್ ಅವರು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 1989ರ ಬ್ಯಾಚಿನ ವಿದ್ಯಾರ್ಥಿಯಾಗಿದ್ದರು. ಪತ್ನಿ ನೀನಾ(ಅವರು ಕೂಡಾ ಉದ್ಯಮಿ) ಇಬ್ಬರು ಪುತ್ರರಾದ ಅಂಕಿತ್ (20), ಅನಿಶ್(17) ಅವರ ಜತೆ ಹೆಲ್ಸಿಂಕಿ, ಫಿನ್ಲೆಂಡ್ ನಲ್ಲಿ ನೆಲೆಸಿದ್ದಾರೆ.

    ನೆಟ್ವರ್ಕಿಂಗ್ ಪರಿಣತ ರಾಜೀವ್

    ನೆಟ್ವರ್ಕಿಂಗ್ ಪರಿಣತ ರಾಜೀವ್

    1995ರಲ್ಲಿ ನೋಕಿಯಾ ಸೇರಿದ ಸೂರಿ ಅವರು ನೋಕಿಯಾ ಸಿಮೆನ್ಸ್ ನೆಟ್ವರ್ಕ್ ಸರ್ವಿಸ್ ವಿಭಾಗದ ಅಭಿವೃದ್ಧಿಗೆ ಕಾರಣಕರ್ತರಾದರು. 2009ರಲ್ಲಿ ನೋಕಿಯಾ ಸಲ್ಯೂಷನ್ಸ್ ಅಂಡ್ ನೆಟ್ವರ್ಕ್ಸ್(ಎನ್ ಎಸ್ ಎನ್) ಮುಖ್ಯಸ್ಥರಾದರು. ನೋಕಿಯಾ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಈಗ ಅಧ್ಯಕ್ಷ ಹಾಗೂ ಸಿಇಒ ಆಗಿದ್ದಾರೆ. [ಹೆಚ್ಚಿನ ವಿವರ ಇಲ್ಲಿ ಓದಿ]

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Rajeev Suri, president and chief executive of the Finnish communications and information technology company. In his first media interaction said, We will be setting up a 5G Internet of Things (IoT) lab in Bengaluru which is one of five globally.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more