ಜುಲೈ 01: ಇಂಧನ ಬೆಲೆ ಯಥಾಸ್ಥಿತಿ, ಸವಾರರಿಗೆ ತುಸು ನೆಮ್ಮದಿ

ನವದೆಹಲಿ, ಜುಲೈ 1: ಜೂನ್ 7ರಿಂದ ಪ್ರತಿದಿನದಂದು ಇಂಧನ ದರವನ್ನು ಸರ್ಕಾರಿ ಸ್ವಾಮ್ಯದ ಪ್ರಮುಖ ಮೂರು ತೈಲ ಕಂಪನಿಗಳು ಪರಿಷ್ಕರಿಸುತ್ತಿವೆ. ಆದರೆ, ಕಳೆದರೆಡು ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿಲ್ಲ.

ಸತತವಾಗಿ 23ನೇ ದಿನಗಳ ಕಾಲ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಪರಿಷ್ಕರಣೆ ಮಾಡಲಾಗಿದೆ. ಆದರೆ, ಜೂನ್ 28, ಜೂನ್ 30 ಹಾಗೂ ಜುಲೈ 1 ಬುಧವಾರದಂದು ಯಾವುದೇ ಏರಿಕೆ, ಇಳಿಕೆ ಇಲ್ಲ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲ್ ಹೇಳಿದೆ.

ಸೋಮವಾರದಂದು ಡೀಸೆಲ್ ದರಲ್ಲಿ 13ಪೈಸೆ ಪ್ರತಿ ಲೀಟರ್ ನಂತೆ ಹೆಚ್ಚಳ, ಹಾಗೂ ಪೆಟ್ರೋಲ್ ದರದಲ್ಲಿ 05 ಪೈಸೆ ಏರಿಕೆಯಾಗಿತ್ತು. ದೆಹಲಿಯಲ್ಲಿ ಬುಧವಾರದಂದು ಡೀಸೆಲ್ ದರ ಪ್ರತಿ ಲೀಟರ್ ಗೆ 80.53 ರು ಇದ್ದರೆ, ಪೆಟ್ರೋಲ್ ದರ ಪ್ರತಿ ಲೀಟರ್ ಗೆ 80.43ರು ನಷ್ಟಿದೆ. ಒಟ್ಟಾರೆ 22ದಿನಗಳಿಂದ ಹೆಚ್ಚು ಕಡಿಮೆ ಪೆಟ್ರೋಲ್, ಡೀಸೆಲ್ ಬೆಲೆ ತಲಾ 10 ರುನಂತೆ ಹೆಚ್ಚಳ ಕಂಡಿವೆ.

No increase in petrol, diesel prices July 1

ಜೂನ್ 7ರಂದು ಸತತ 83 ದಿನಗಳ ವಿರಾಮದ ಬಳಿಕ ದೇಶಾದ್ಯಂತ ಇಂಧನ ದರ ಪರಿಷ್ಕರಣೆ ಪುನಾರಂಭಗೊಂಡಿತು. ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಪರಿಷ್ಕರಿಸುತ್ತಾ ಬಂದಿವೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರ, ಅಮೆರಿಕ-ಚೀನಾ ನಡುವಿನ ವಹಿವಾಟು ಆರಂಭದ ಮಾತುಕತೆ,ಭಾರತ ಹಾಗೂ ಚೀನಾ ನಡುವಿನ ಆಪ್ ನಿಷೇಧ ಆರ್ಥಿಕ ಸಮರ, ಗಡಿ ಸಂಘರ್ಷದ ಮಾತುಕತೆ, ಕೊರೊನಾವೈರಸ್ ಆರ್ಥಿಕ ಹೊಡೆತ, ಭಾರತದಲ್ಲಿ ತೈಲದ ಮೇಲೆ ಹೆಚ್ಚಿದ ಅಬಕಾರಿ ಸುಂಕ ಎಲ್ಲವೂ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ.

ಬೆಂಗಳೂರಿನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 83.04 ರು ನಷ್ಟಿದ್ದರೆ, ಡೀಸೆಲ್ ದರ ಪ್ರತಿ ಲೀಟರ್ ಗೆ 76.58 ರು ನಷ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+