ನಿಸಾನ್ ಮ್ಯಾಗ್ನೈಟ್ ಎಸ್‌ಯುವಿ ಬಿಡುಗಡೆ: ಆರಂಭಿಕ ಬೆಲೆ 4,99,000 ರೂಪಾಯಿ

ಬೆಂಗಳೂರು, ಡಿಸೆಂಬರ್ 02: ನಿಸಾನ್ ಇಂಡಿಯಾ ತನ್ನ ಬಹುನಿರೀಕ್ಷಿತ ಹೊಚ್ಚ ಹೊಸದಾದ ನಿಸಾನ್ ಮ್ಯಾಗ್ನೈಟ್ ನ ಬೆಲೆಯನ್ನು ಘೋಷಣೆ ಮಾಡಿದೆ ಮತ್ತು ದೇಶಾದ್ಯಂತ ಇರುವ ನಿಸಾನ್ ಡೀಲರ್ ಶಿಪ್ ಗಳಲ್ಲಿ ಬುಕಿಂಗ್ ಆರಂಭವನ್ನೂ ಪ್ರಕಟಿಸಿದೆ. ಇದಲ್ಲದೇ, ವೆಬ್ ಸೈಟ್ ನಲ್ಲಿಯೂ ಬುಕಿಂಗ್ ಆರಂಭಿಸಿದೆ.

ದೊಡ್ಡ, ಬೋಲ್ಡ್, ಸುಂದರ ಮತ್ತು ಚೆರಿಸ್ಮ್ಯಾಟಿಕ್ ಎಸ್ ಯುವಿ ಆಗಿರುವ ಈ ನಿಸಾನ್ ಮ್ಯಾಗ್ನೈಟ್ ವಿಶೇಷ ಆರಂಭಿಕ ಬೆಲೆಯಾದ 4,99,000 (ಎಕ್ಸ್-ಶೋರೂಂ) ರೂಪಾಯಿಗಳಲ್ಲಿ 2020 ರ ಡಿಸೆಂಬರ್ 31 ರವರೆಗೆ ಲಭ್ಯವಿದೆ.

ಈ ಬಗ್ಗೆ ಮಾಹಿತಿ ನೀಡಿರುವ ನಿಸಾನ್ ಮೋಟರ್ ಇಂಡಿಯಾದ ಅಧ್ಯಕ್ಷ ಸಿನಾನ್ ಒಝ್ಕೊಕ್ ಅವರು, ಹೊಚ್ಚ ಹೊಸದಾದ ನಿಸಾನ್ ಮ್ಯಾಗ್ನೈಟ್ ಭಾರತ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿನ ನಿಸಾನ್ ನೆಕ್ಸ್ಟ್ ವಿಭಾಗದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸುತ್ತಿದೆ. ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್ ಪರಿಕಲ್ಪನೆಯಲ್ಲಿ ತಯಾರಿಸಲಾಗಿರುವ ಈ ಹೊಚ್ಚ ಹೊಸ ನಿಸಾನ್ ಮ್ಯಾಗ್ನೈಟ್ 20 ಕ್ಕೂ ಹೆಚ್ಚು ಪ್ರಥಮ ದರ್ಜೆ ಮತ್ತು ಅತ್ಯುತ್ತಮ ಶ್ರೇಣಿಯ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಗ್ರಾಹಕರಿಗೆ ವಿಭಿನ್ನವಾದ, ಆವಿಷ್ಕಾರಕವಾದ ಮತ್ತು ಅತ್ಯದ್ಭುತವಾದ ಮಾಲೀಕತ್ವದ ಅನುಭವವನ್ನು ನೀಡಲಿದೆ'' ಎಂದು ಹೇಳಿದರು.

ತಂತ್ರಜ್ಞಾನದ ವಿನ್ಯಾಸ ಹೊಂದಿರುವ ಕಾರು

ತಂತ್ರಜ್ಞಾನದ ವಿನ್ಯಾಸ ಹೊಂದಿರುವ ಕಾರು

ಗ್ರಾಹಕರಿಗೆ ಉತ್ತಮವಾದ ಅನುಭವವಗಳನ್ನು ನೀಡುವ ನಿಟ್ಟಿನಲ್ಲಿ ನಿಸಾನ್ ಈ ಎಸ್ ಯುವಿ ತಯಾರಿಕೆಯಲ್ಲಿಯೂ ಆವಿಷ್ಕಾರಗಳನ್ನು ಮುಂದುವರಿಸಿಕೊಂಡು ಬಂದಿದೆ. ನಿಸಾನ್ ತಂತ್ರಜ್ಞಾನಗಳಿಗೆ ಹೆಸರುವಾಸಿಯಾಗಿದ್ದು, ಎಕ್ಸ್-ಟ್ರಾನಿಕ್ ಸಿವಿಟಿ, ಕ್ರೂಸ್ ಕಂಟ್ರೋಲ್, 360 ಡಿಗ್ರಿ ಅರೌಂಡ್ ವ್ಯೂವ್ ಮಾನಿಟರ್ ಮತ್ತು ನಿಸಾನ್ ಕನೆಕ್ಟ್ ನಂತಹ ಎಲ್ಲಾ ಮಾದರಿಯ ಶ್ರೇಣಿಗಳಲ್ಲಿ ಅತ್ಯುತ್ತಮ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬರುತ್ತಿದೆ. ನಿಸಾನ್ ಮ್ಯಾಗ್ನೈಟ್ ಅನ್ನು ಪ್ರತಿಯೊಂದು ಹಂತದಲ್ಲಿಯೂ ತುಂಬಾ ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿದೆ. ಈ ಮೂಲಕ ಭಾರತೀಯ ಗ್ರಾಹಕರ ನಿರೀಕ್ಷೆ ಮತ್ತು ಅಭಿರುಚಿಗೆ ತಕ್ಕಂತೆ ಸಿದ್ಧಪಡಿಸಲಾಗಿದೆ

ನಿಸಾನ್ ಕಾರಿನ ಫೀಚರ್ಸ್

ನಿಸಾನ್ ಕಾರಿನ ಫೀಚರ್ಸ್

ಮಾಗ್ನೈಟ್ ಆರಂಭಿಕ ಕಾರು ಮಾದರಿಯಲ್ಲಿ ಹ್ಯಾಲೊಜೆನ್ ಹೆಡ್‌ಲ್ಯಾಂಪ್, 16 ಇಂಚಿನ ಸ್ಟೀಲ್ ವೀಲ್ಹ್, ಬಾಡಿ ಕಲರ್ಡ್ ಡೋಲ್ ಹ್ಯಾಂಡಲ್ಸ್, ಎಲ್ಇಡಿ ಡಿಆರ್‌ಎಲ್‌ಎಸ್‌ನಲ್ಲಿ ಎಲ್ ಶೇಫ್ ಕ್ರೋಮ್ ಟಿಪ್ಸ್, ಫ್ರಂಟ್ ಫೆಂಡರ್‌ನಲ್ಲಿ ಟರ್ನ್ ಇಂಡಿಕೇಟರ್, ಬ್ಲ್ಯಾಕ್ ಫ್ರಾಬಿಕ್ಸ್ ಸೀಟ್, ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮೇಲೆ 3.5-ಇಂಚಿನ ಎಂಐಡಿ ಸ್ಕ್ರೀನ್ ಹೊಂದಿದೆ.

ಇದರ ಜೊತೆಗೆ ಟೆಕ್ ಪ್ಯಾಕ್' ನಲ್ಲಿ ವೈರ್ ಲೆಸ್ ಚಾರ್ಜರ್, ಏರ್ ಪ್ಯೂರಿಫೈಯರ್, ಆಂಬಿಯೆಂಟ್ ಮೂಡ್ ಲೈಟಿಂಗ್, ಪಡಲ್ ಲ್ಯಾಂಪ್ ಮತ್ತು ಹೈ-ಎಂಡ್ ಸ್ಪೀಕರ್ ಗಳಿರುತ್ತವೆ.

ನಿಸಾನ್ ಮೋಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶ್ರೀವಾಸ್ತವ ಅವರು ಮಾತನಾಡಿ, ಈ ಹೊಚ್ಚ ಹೊಸದಾದ ನಿಸಾನ್ ಮ್ಯಾಗ್ನೈಟ್ ಬಿಡುಗಡೆಯೊಂದಿಗೆ ನಿಸಾನ್ ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕ ಕೇಂದ್ರಿತ ಪ್ರಯಾಣದಲ್ಲಿ ಒಂದು ಸ್ಮರಣೀಯ ಮೈಲಿಗಲ್ಲನ್ನು ಸ್ಥಾಪಿಸಿದೆ. ವಿಶೇಷವಾಗಿ ನಮ್ಮ ನೆಚ್ಚಿನ ಭಾರತೀಯ ಗ್ರಾಹಕರಿಗಾಗಿ ನಾವು ದೊಡ್ಡದಾದ, ಬೋಲ್ಡ್, ಸುಂದರ ಮತ್ತು ಚೆರಿಸ್ಮ್ಯಾಟಿಕ್' ಎಸ್ ಯುವಿಯನ್ನು ವಿಶೇಷ ಉದ್ಘಾಟನಾ ಬೆಲೆಯಲ್ಲಿ ನೀಡುತ್ತಿದ್ದೇವೆ. ಈ ಹೊಚ್ಚ ಹೊಸದಾದ ನಿಸಾನ್ ಮ್ಯಾಗ್ನೈಟ್ ತನ್ನ ಅತ್ಯುನ್ನತವಾದ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಯಲ್ಲಿ ಗೇಮ್ ಚೇಂಜರ್ ಆಗಲಿದೆ ಎಂಬ ವಿಶ್ವಾಸ ನಮ್ಮದಾಗಿದೆ'' ಎಂದರು.

ನಿಸಾನ್ ಮ್ಯಾಗ್ನೈಟ್ ಕಾರಿನ ಎಂಜಿನ್

ನಿಸಾನ್ ಮ್ಯಾಗ್ನೈಟ್ ಕಾರಿನ ಎಂಜಿನ್

ಮ್ಯಾಗ್ನೈಟ್ ಕಾರಿನಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 1.0-ಲೀಟರ್ ಬಿ4ಡಿ ಪೆಟ್ರೋಲ್ ಎಂಜಿನ್ ಮತ್ತು ಹೆಚ್ಆರ್‌ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಗಳನ್ನು ಜೋಡಣೆ ಮಾಡಲಾಗುತ್ತಿದ್ದು, 1.0-ಲೀಟರ್ ಬಿ4ಡಿ ಪೆಟ್ರೋಲ್ ಮಾದರಿಯು ಸ್ಟ್ಯಾಂಡರ್ಡ್ ಆಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಗಳಲ್ಲಿ ನೀಡಲಾಗಿರುವ ಹೆಚ್ಆರ್‌ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಕ್ಸ್-ಟ್ರಾನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

ನಿಸಾನ್ ಮ್ಯಾಗ್ನೈಟ್ ವಿವಿಧ ಮಾಡೆಲ್‌ನ ಬೆಲೆ

ನಿಸಾನ್ ಮ್ಯಾಗ್ನೈಟ್ ವಿವಿಧ ಮಾಡೆಲ್‌ನ ಬೆಲೆ

ನಿಸಾನ್ ಮ್ಯಾಗ್ನೈಟ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.35 ಲಕ್ಷ ಬೆಲೆ ಪಡೆದುಕೊಂಡಿದೆ. XE, XL, XV ಪ್ರೀಮಿಯಂ ಮಾದರಿಗಳನ್ನು ಬಿಡುಗಡೆ ಮಾಡಿದೆ.

1.0 ಲೀ. ಪೆಟ್ರೋಲ್:

‍‍XE 4,99,000 ರೂಪಾಯಿ

XL 5,99,000 ರೂಪಾಯಿ

XV 6,68,000 ರೂಪಾಯಿ

XV ಪ್ರೀಮಿಯಂ 7,55,000 ರೂಪಾಯಿ

1.0 ಲೀ. ಟರ್ಬೋ ಪೆಟ್ರೋಲ್:

XL 6,99,000 ರೂಪಾಯಿ

XV 7,68,000 ರೂಪಾಯಿ

XV ಪ್ರೀಮಿಯಂ 8,45,000 ರೂಪಾಯಿ


1.0 ಲೀ. ಟರ್ಬೋ ಪೆಟ್ರೋಲ್ ಸಿವಿಟಿ:

XL 7,89,000 ರೂಪಾಯಿ

XV 8.58,000 ರೂಪಾಯಿ

XV ಪ್ರೀಮಿಯಂ 9,35,000 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+