ಮಲ್ಯ ನಂತರ ನೀರವ್ ಗೂ ದೇಶಭ್ರಷ್ಟ ಆರ್ಥಿಕ ಅಪರಾಧಿ ಟ್ಯಾಗ್

​ಮುಂಬೈ, ಡಿಸೆಂಬರ್ 05: ಪಂಜಾಬ್​ ನ್ಯಾಷನಲ್​ ಬ್ಯಾಂಕ್​ ನ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಉದ್ಯಮಿ ನೀರವ್ ಮೋದಿ ಅವರಿಗೂ ದೇಶಭ್ರಷ್ಟ ಆರ್ಥಿಕ ಅಪರಾಧಿ ಟ್ಯಾಗ್ ಬಿದ್ದಿದೆ. ಉದ್ಯಮಿ ವಿಜಯ್ ಮಲ್ಯ ಅವರಿಗೆ ಮೊದಲಿಗೆ ಈ ಟ್ಯಾಗ್ ಹಾಕಲಾಗಿತ್ತು. ಇಂದು ಮುಂಬೈಯ ವಿಶೇಷ ನ್ಯಾಯಾಲಯವೊಂದು ''fugitive economic offender'' ಎಂದು ನೀರವ್ ಮೋದಿಯನ್ನು ಘೋಷಿಸುವಂತೆ ಆದೇಶಿಸಿದೆ.

ಮನಿ ಲಾಂಡ್ರಿಂಗ್ ನಿಯಂತ್ರಣ ಕಾಯ್ದೆ( ಪಿಎಂಎಲ್ ಎ) ಉಲ್ಲಂಘಿಸಿ, ದೇಶದಿಂದ ಪರಾರಿಯಾಗಿರುವ ಆಭರಣ ಕ್ಷೇತ್ರದ ಉದ್ಯಮಿ ನೀರವ್ ಮೋದಿ ಅವರು ಸದ್ಯ ಲಂಡನ್ನಿನಲ್ಲಿ ನೆಲೆ ಕಂಡುಕೊಂಡಿದ್ದು, ವಂಡ್ಸ್​ವರ್ಥ್​​ನ ಜೈಲಿನಲ್ಲಿದ್ದಾರೆ. ಕಳೆದ ಜನವರಿಯಲ್ಲಿ ಸಾಲ ತೀರಿಸಲಾಗದೇ ಇಂಗ್ಲೆಂಡ್​ಗೆ ತೆರಳಿದ್ದ ಮದ್ಯದ ದೊರೆ ವಿಜಯ್​ ಮಲ್ಯರನ್ನು ಆರ್ಥಿಕ ದೇಶಭ್ರಷ್ಟ ಎಂದು ಮುಂಬೈ ಕೋರ್ಟ್​ ಘೋಷಿಸಿತ್ತು.

Nirav Modi Declared Fugitive Economic Offender, 2nd After Vijay Mallya To Get Tag

ಆರ್ಥಿಕ ಅಪರಾಧಗಳ ಆರೋಪ ಹೊತ್ತಿರುವ ನೀರವ್ ಅವರ ಜಾಮೀನು ಅರ್ಜಿಯನ್ನು ಲಂಡನ್​ ನ್ಯಾಯಾಲಯ ಹಲವು ಬಾರಿ ವಜಾಗೊಳಿಸಿದೆ. ಜನವರಿ 2ರಂದು ನ್ಯಾಯಾಲಯದಲ್ಲಿ ಮುಂದಿನ ವಿಚಾರಣೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+