ಷೇರುಪೇಟೆ ದಾಖಲೆ: 49,000 ಗಡಿದಾಟಿದ ಸೆನ್ಸೆಕ್ಸ್, ಐಟಿ, ಆಟೊಮೊಬೈಲ್ ಷೇರುಗಳ ಮಿಂಚು
ನವದೆಹಲಿ, ಜನವರಿ 11: ಭಾರತೀಯ ಮಾರುಕಟ್ಟೆಯಲ್ಲಿ ಷೇರುಪೇಟೆ ದಾಖಲೆಯ ಮಟ್ಟದಲ್ಲಿ ಸಾಗುತ್ತಿದೆ. ಸೋಮವಾರ ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಮೊಟ್ಟಮೊದಲ ಬಾರಿಗೆ 49,000 ಗಡಿ ದಾಟಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 137 ಪಾಯಿಂಟ್ಸ್ ಏರಿಕೆಗೊಂಡು 14,500ರ ಗಡಿ ಸಮೀಪಿಸಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 486.81 ಪಾಯಿಂಟ್ಸ್ ಅಥವಾ ಶೇಕಡಾ 1ರಷ್ಟು ಏರಿಕೆಗೊಂಡು 49,269.32 ಪಾಯಿಂಟ್ಸ್‌ಗಳಿಗೆ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 137.5 ಪಾಯಿಂಟ್ಸ್ ಅಥವಾ ಶೇಕಡಾ 0.36ರಷ್ಟು ಹೆಚ್ಚಳಗೊಂಡು 14,484.80 ಪಾಯಿಂಟ್ಸ್‌ಗಳನ್ನು ಮುಟ್ಟಿದೆ.
ಇಂದು 1423 ಷೇರುಗಳು ಏರಿಕೆ ದಾಖಲಿಸಿದ್ದು, 1672 ಷೇರುಗಳು ಕುಸಿದಿವೆ ಮತ್ತು 137 ಷೇರುಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಟಾಟಾ ಮೋಟಾರ್ಸ್, ಎಚ್‌ಸಿಎಲ್ ಟೆಕ್, ಇನ್ಫೋಸಿಸ್, ಎಚ್‌ಡಿಎಫ್‌ಸಿ ಮತ್ತು ವಿಪ್ರೊ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿವೆ.

ಇನ್ನು ಟಾಟಾ ಸ್ಟೀಲ್, ಬಜಾಜ್ ಫೈನಾನ್ಸ್, ಬಜಾಜ್ ಫಿನ್‌ಸರ್ವ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಲ್ ಅಂಡ್ ಟಿ ಷೇರುಗಳು ನಷ್ಟಕಂಡಿವೆ.
ಐಟಿ ಸೂಚ್ಯಂಕ ಶೇಕಡಾ 3ರಷ್ಟು, ಆಟೋ ಸೂಚ್ಯಂಕ ಶೇ .2.6 ಮತ್ತು ಎಫ್‌ಎಂಸಿಜಿ ಮತ್ತು ಫಾರ್ಮಾ ಸೂಚ್ಯಂಕಗಳು ತಲಾ ಶೇಕಡಾ 1ರಷ್ಟು ಏರಿಕೆಯಾದರೆ, ಮೆಟಲ್ ಮತ್ತು ಪಿಎಸ್‌ಯು ಬ್ಯಾಂಕ್ ಸೂಚ್ಯಂಕಗಳು ಶೇ 1 ರಷ್ಟು ಏರಿಕೆ ಕಂಡವು.












Click it and Unblock the Notifications