ಏರುತ್ತಲೇ ಸಾಗಿದ ಭಾರತೀಯ ಷೇರುಪೇಟೆ: ಹೊಸ ಮಟ್ಟಕ್ಕೆ ತಲುಪಿದ ಸೆನ್ಸೆಕ್ಸ್‌, ನಿಫ್ಟಿ

ಮುಂಬೈ, ಡಿಸೆಂಬರ್ 08: ಭಾರತೀಯ ಷೇರುಪೇಟೆಯ ನಾಗಾಲೋಟ ಮುಂದುವರಿದಿದ್ದು, ಮಂಗಳವಾರ ಹೂಡಿಕೆದಾರರ ಸಂಪತ್ತು ಮತ್ತಷ್ಟು ಏರಿಕೆಯಾಗಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 181.54 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ ಹಸಿರು ಬಣ್ಣವನ್ನೇ ಮುಂದುವರಿಸಿ ಹೊಸ ಹಂತ ತಲುಪಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 181.54 ಪಾಯಿಂಟ್ಸ್‌ ಅಥವಾ ಶೇ. 0.40ರಷ್ಟು ಹೆಚ್ಚಳಗೊಂಡು 45,608.51ಕ್ಕೆ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 37.2 ಪಾಯಿಂಟ್ಸ್‌ ಅಥವಾ ಶೇ. 0.28ರಷ್ಟು ಏರಿಕೆಗೊಂಡು ಹೊಸ ದಾಖಲೆ 13,392.95 ಹಂತಕ್ಕೆ ತಲುಪಿದೆ.

ಮಂಗಳವಾರ ಒಟ್ಟಾರೆ 1344 ಷೇರುಗಳು ಲಾಭಗಳಿಸಿದರೆ, 1374 ಷೇರುಗಳು ಕುಸಿದವು ಮತ್ತು 130 ಷೇರುಗಳು ಯಾವುದೇ ಬದಲಾವಣೆ ಆಗಿಲ್ಲ. ಅಲ್ಟ್ರಾಟೆಕ್ ಸಿಮೆಂಟ್, ಟಿಸಿಎಸ್, ರಿಲಯನ್ಸ್ ಇಂಡಸ್ಟ್ರೀಸ್, ವಿಪ್ರೋ ಮತ್ತು ಎಚ್‌ಸಿಎಲ್ ಟೆಕ್ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದವ ಷೇರುಗಳಾಗಿವೆ.

Nifty Ends Near 13400: Sensex Gains 181 Points; Metal, Farma Stock Slip

ಇನ್ನು ಸನ್ ಫಾರ್ಮಾ, ಹಿಂಡಾಲ್ಕೊ ಇಂಡಸ್ಟ್ರೀಸ್, ಇಂಡಸ್ಇಂಡ್ ಬ್ಯಾಂಕ್, ಕೋಲ್ ಇಂಡಿಯಾ ಮತ್ತು ಅದಾನಿ ಪೋರ್ಟ್ಸ್‌ ನಿಫ್ಟಿಯಲ್ಲಿ ಮುಗ್ಗರಿಸಿದ ಷೇರುಗಳು. ಇದರ ನಡುವೆ ಕೆನರಾ ಬ್ಯಾಂಕ್ ಷೇರುಗಳ ಬೆಲೆ ಶೇ. 6 ರಷ್ಟು ಹೆಚ್ಚಾಗಿದೆ. ತನ್ನ ಅರ್ಹ ಸಾಂಸ್ಥಿಕ ನಿಯೋಜನೆಗಾಗಿ (ಕ್ಯೂಐಪಿ) 2,000 ಕೋಟಿ ರೂ.ಗಳನ್ನು ಸಂಗ್ರಹಿಸಲು ಪ್ರತಿ ಷೇರಿಗೆ 103.50 ರೂ.ಗಳ ಮೂಲ ಬೆಲೆಯನ್ನು ನಿಗದಿಪಡಿಸಿದೆ ಎಂದು ಬ್ಯಾಂಕ್ ಹೇಳಿದೆ.

ಇಂದು ನಿಫ್ಟಿ ಮೆಟಲ್ ಮತ್ತು ಫಾರ್ಮಾ ಸೂಚ್ಯಂಕಗಳು ತಲಾ 1 ಪ್ರತಿಶತದಷ್ಟು ಕುಸಿದರೆ, ಪಿಎಸ್‌ಯು ಬ್ಯಾಂಕ್ ಸೂಚ್ಯಂಕವು ಶೇಕಡಾ 7 ಕ್ಕಿಂತ ಹೆಚ್ಚಾಗಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಅಲ್ಪ ನಷ್ಟದೊಂದಿಗೆ ಕೊನೆಗೊಂಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+