ಮೊದಲ ಬಾರಿಗೆ 14,000 ಗಡಿ ದಾಟಿ ವಹಿವಾಟು ಮುಗಿಸಿದ ನಿಫ್ಟಿ, ಸೆನ್ಸೆಕ್ಸ್ ಕೂಡ ಏರಿಕೆ

ನವದೆಹಲಿ, ಜನವರಿ 01: ಹೊಸ ವರ್ಷದ ದಿನದಂದು ಭಾರತೀಯ ಷೇರುಪೇಟೆಯು ಹಸಿರು ಬಣ್ಣದಲ್ಲೇ ವಹಿವಾಟು ಕೊನೆಗೊಳಿಸಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 117 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಮೊದಲ ಬಾರಿಗೆ 14,000 ಗಡಿದಾಟಿ ವಹಿವಾಟು ಕೊನೆಗೊಳಿಸಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 117.65 ಪಾಯಿಂಟ್ಸ್‌ ಅಥವಾ ಶೇ. 0.65ರಷ್ಟು ಏರಿಕೆಗೊಂಡು 47,868.98 ಪಾಯಿಂಟ್ಸ್ ತಲುಪಿದೆ ಮತ್ತು ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 36.70 ಪಾಯಿಂಟ್ಸ್ ಅಥವಾ ಶೇ. 0.26ರಷ್ಟು ಹೆಚ್ಚಳಗೊಂಡು 14,018.50 ಪಾಯಿಂಟ್ಸ್‌ಗೆ ಏರಿಕೆಗೊಂಡಿದೆ. 1998 ಷೇರುಗಳು ಏರಿಕೆ ದಾಖಲಿಸಿದ್ದು, 940 ಷೇರುಗಳು ಇಳಿಕೆಗೊಂಡಿವೆ ಮತ್ತು 163 ಷೇರುಗಳು ಯಾವುದೇ ಬದಲಾವಣೆ ಕಂಡಿಲ್ಲ.

ಅದಾನಿ ಪೋರ್ಟ್ಸ್, ಐಟಿಸಿ, ಟಿಸಿಎಸ್, ಎಂ&ಎಂ ಮತ್ತು ಎಸ್‌ಬಿಐ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಐಸಿಐಸಿಐ ಬ್ಯಾಂಕ್, ಎಸ್‌ಬಿಐ ಲೈಫ್ ಇನ್ಶುರೆನ್ಸ್, ಹಿಂಡಾಲ್ಕೊ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಟೈಟಾನ್ ಕಂಪನಿಗಳ ಷೇರುಗಳು ನಷ್ಟಗೊಂಡಿವೆ.

Nifty Closes Above 14K For 1st Time: Sensex Up 117 Points

ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ ಭಾರತೀಯ ರೂಪಾಯಿ ದಿನದ ಕನಿಷ್ಠ 73.12 ಕ್ಕೆ ಕೊನೆಗೊಂಡಿತು. ಇದು ಗುರುವಾರ 73.07 ರ ಸಮೀಪಕ್ಕೆ ಹೋಲಿಸಿದರೆ ಪ್ರತಿ ಡಾಲರ್‌ಗೆ 73.09 ವಹಿವಾಟು ಆರಂಭಿಸಿ, 73.02-73.13 ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+