ಫಾಸ್ಟ್ಯಾಗ್: ಒಂದೇ ದಿನ ದಾಖಲೆಯ 104 ಕೋಟಿ ಟೋಲ್ ಸಂಗ್ರಹ

ನವದೆಹಲಿ, ಫೆಬ್ರವರಿ 27: ದೇಶದಾದ್ಯಂತ ಫಾಸ್ಟ್ಯಾಗ್ ಮೂಲಕ ಸಂಗ್ರಹಿಸಲಾಗುತ್ತಿರುವ ದೈನಂದಿನ ಟೋಲ್ ಸಂಗ್ರಹಣೆಯು ಸುಮಾರು 104 ಕೋಟಿ ರೂ.ಗೆ ತಲುಪಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶುಕ್ರವಾರ ತಿಳಿಸಿದೆ.

ಫೆಬ್ರವರಿ 16ರಿಂದ ದೇಶಾದ್ಯಂತ ಎಲ್ಲ ವಾಹನಗಳೂ ರಾಷ್ಟ್ರೀಯ ಹೆದ್ದಾರಿಯ ಟೋಲ್‌ಗೇಟ್ ಮೂಲಕ ಹಾದುಹೋಗಲು ಫಾಸ್ಟ್ಯಾಗ್ ಅನ್ನು ಕಡ್ಡಾಯಗೊಳಿಸಲಾಗಿದೆ. ಅಂದಿನಿಂದ ಫಾಸ್ಟ್ಯಾಗ್ ಸುಂಕ ಸಂಗ್ರಹಣೆ ಪ್ರಮಾಣ ನಿರಂತರ ಏರಿಕೆಯಾಗಿದೆ ಎಂದು ಅದು ಹೇಳಿದೆ.

ಈ ವಾರವಿಡೀ ಫಾಸ್ಟ್ಯಾಗ್ ಟೋಲ್ ಸಂಗ್ರಹಣೆ ಪ್ರತಿ ದಿನ 100ಕೋಟಿ ರೂಗಿಂತ ಅಧಿಕವಿದೆ. ಫೆಬ್ರವರಿ 25ರಂದು ಅದು 64.5 ಲಕ್ಷ ವ್ಯವಹಾರಗಳೊಂದಿಗೆ ಅತ್ಯಧಿಕ ಅಂದರೆ, 103.94 ಕೋಟಿ ರೂಪಾಯಿಗೆ ತಲುಪಿದೆ ಎಂದು ಎನ್‌ಎಚ್‌ಎಐ ತಿಳಿಸಿದೆ.

NHAI Said Its Daily Toll Collection Through FASTag Reaches Rs 104 Crore

ಫಾಸ್ಟ್ಯಾಗ್‌ನ ಸುಗಮ ಅನುಷ್ಠಾನವು ವಿದ್ಯುನ್ಮಾನ ಸುಂಕ ಸಂಗ್ರಹಣಾ ವ್ಯವಹಾರಗಳಲ್ಲಿ ಶೇ 20ರಷ್ಟು ಬೆಳವಣಿಗೆ ಕಂಡಿದೆ. ಹಾಗೆಯೇ ಫಾಸ್ಟ್ಯಾಗ್ ಮೂಲಕ ಬಳಕೆದಾರರ ಶುಲ್ಕ ಸಂಗ್ರಹಣೆಯಲ್ಲಿ ಕೂಡ ಶೇ 27ರಷ್ಟು ಹೆಚ್ಚಳ ಕಂಡಿದೆ. ಕಳೆದ ಎರಡು ವಾರಗಳಲ್ಲಿ ಅಂದಾಜು 20 ಲಕ್ಷ ಹೊಸ ಫಾಸ್ಟ್ಯಾಗ್ ಬಳಕೆದಾರರು ಸೇರ್ಪಡೆಯಾಗಿದ್ದಾರೆ. ಇದರಿಂದ ಒಟ್ಟಾರೆ ಫಾಸ್ಟ್ಯಾಗ್ ವಿತರಣೆ 2.8 ಕೋಟಿಗೆ ಮುಟ್ಟಿದೆ.

ಫಾಸ್ಟ್ಯಾಗ್ ಜಾರಿಯಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳಲ್ಲಿ ಕಾಯುವ ಸಮಯ ಗಣನೀಯವಾಗಿ ತಗ್ಗಿದೆ. ಇದರಿಂದ ಬಳಕೆದಾರರ ಅನುಭವ ವೃದ್ಧಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+