ಭಾರತದಲ್ಲಿ 2021 ಜೀಪ್ ಕಂಪಾಸ್ ಮಾರುಕಟ್ಟೆಗೆ, ಬೆಲೆ ಎಷ್ಟು?
ಬೆಂಗಳೂರು, ಜನವರಿ 29: ವಿಶ್ವದ ಜನಪ್ರಿಯ ಸ್ಪೋರ್ಟ್ ಯುಟಿಲಿಟಿ ವಾಹನ (ಎಸ್‍ಯುವಿ) ಬ್ರ್ಯಾಂಡ್ ಜೀಪ್(jeep)ಭಾರತದಲ್ಲಿ ಹೊಸ ಜೀಪ್‍ಕಂಪಾಸ್ ಮಾರುಕಟ್ಟೆಗೆ ಪರಿಚಯಿಸಿದೆ. ಭಾರತದಲ್ಲೇ ತಯಾರಿಸಲಾದ ಜೀಪ್‍ಕಂಪಾಸ್‍ನ ಬೆಲೆ ರೂ. 16.99 ಲಕ್ಷ(ನವದೆಹಲಿ/ಮುಂಬೈ ಶೋರೂಮ್‍ಗಳಾಚೆ)ದಿಂದ ಆರಂಭವಾಗಿದೆ. ಫೆಬ್ರವರಿ 2, 2021ರಿಂದ ಜೀಪ್ ಬ್ರ್ಯಾಂಡ್ ಡೀಲರ್ ಶಿಪ್ ಗ್ರಾಹಕ ಪರೀಕ್ಷಾ ಚಾಲನೆ ಮತ್ತು ವಾಹನ ಡೆಲಿವರಿಗಳನ್ನು ಆರಂಭಿಸಲಿವೆ.
ಹೊಸ ಜೀಪ್‍ಕಂಪಾಸ್‍ನ ಪರಿಚಯದ ಜೊತೆಗೆ, 80ನೆ ವಾರ್ಷಿಕೋತ್ಸವ ಸೀಮಿತ ಆವೃತ್ತಿಯನ್ನು ಹೊರ ತರಲಾಗಿದೆ. ನಾಲ್ಕು ಟ್ರಿಮ್‍ಗಳ ಆಯ್ಕೆಯಜೊತೆಗೆ, 11 ವೈವಿಧ್ಯಗಳು ಹಾಗು 7 ಬಣ್ಣಗಳೊಡನೆ ಹೊಸ ಜೀಪ್‍ಕಂಪಾಸ್ 80ನೇ ವಾರ್ಷಿಕೋತ್ಸವ ಸೀಮಿತ ಆವೃತ್ತಿಯಲ್ಲಿ ಮೂರು ವೈವಿಧ್ಯಗಳೊಂದಿಗೆ ಲಭ್ಯವಾಗಲಿದೆ.
ಹೊಸ ಕಂಪಾಸ್ ಬಗ್ಗೆ ಮಾತನಾಡುತ್ತಾ, ಎಫ್‍ಸಿಎ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಡಾ. ಪಾರ್ಥದತ್ತ, "ಹೊಸ ಜೀಪ್‍ಕಂಪಾಸ್‍ನ ಅತ್ಯಾಧುನಿಕ ಪ್ಯಾಕೇಜ್ ನಮ್ಮ ಗ್ರಾಹಕರ ಅಭಿಪ್ರಾಯ ಮಾಹಿತಿಯಿಂದ ಪಡೆದುಕೊಂಡ ಸಲಹೆಗಳನ್ನು ಅಳವಡಿಸಿಕೊಂಡಿರುವ ಆವೃತ್ತಿಯಾಗಿದೆ. ಹೊಸ ಕಂಪಾಸ್‍ಅನ್ನು ನಾವು ಹೆಚ್ಚು ಪ್ರೀಮಿಯಮ್ ಆಗಿರುವಂತೆಯೂ ಗ್ರಾಹಕ ಕೇಂದ್ರಿತವಾಗಿರುವಂತೆಯೂ ವಿನ್ಯಾಸಗೊಳಿಸಿದ್ದು ಇದರಲ್ಲಿ ಅನೇಕ ಸೌಲಭ್ಯಗಳು ಹಾಗು ಸಂಪರ್ಕಗೊಂಡ ಅಂಶಗಳು ಇವೆ. ಅತ್ಯಾಧುನಿಕ ಅಂಶಗಳು ಹಾಗು ಕಾರ್ಯಕ್ಷಮತೆ ಇರುವ ಸಂಪೂರ್ಣವಾಗಿ ಹೊಸ ಒಳಾಂಗಣವನ್ನು ಇದು ಹೊಂದಿದೆ. ನಾವು ನಮ್ಮ ಶ್ರೇಣಿಯನ್ನು ಸರಿಗಾತ್ರಕ್ಕೆ ಸಜ್ಜುಗೊಳಿಸಿದ್ದು ಗ್ರಾಹಕರಿಗೆ ಗರಿಷ್ಟ ಮೌಲ್ಯ ನೀಡುವ ಆಯ್ಕೆಗಳನ್ನು ಒದಗಿಸಲು ನಮ್ಮಅಂಶಭರಿತ ವೈವಿಧ್ಯಗಳನ್ನು ಪುನರ್ ವಿನ್ಯಾಸ ಮಾಡಿದ್ದೇವೆ."ಎಂದರು.

ಹೊಸ ಜೀಪ್‍ಕಂಪಾಸ್ ಪ್ಯಾಕೇಜ್
ಭಾರತೀಯ ಗ್ರಾಹಕರು, ಸ್ಪೋರ್ಟ್, ಲಾಂಗಿಟ್ಯೂಡ್, ಲಿಮಿಟೆಡ್ ಮತ್ತು ಮಾಡಲ್'S'ಗಳಾದ್ಯಂತ ಲಭ್ಯವಿರುವ 11 ಫ್ರಂಟ್ ವ್ಹೀಲ್‍ಡ್ರೈವ್(4x2) ವೈವಿಧ್ಯಗಳಿಂದ ಮತ್ತು80ನೆ ವಾರ್ಷಿಕೋತ್ಸವ ಸೀಮಿತ ಆವೃತ್ತಿಯಿಂದ ಆಯ್ಕೆ ಮಾಡಿಕೊಳ್ಳಬಹುದು. ಎಲ್ಲಾ ಫ್ರಂಟ್ ವ್ಹೀಲ್ ಚಾಲನೆಯ ವೈವಿಧ್ಯಗಳು ಎರಡು ಸಾಬೀತಾದ BS-VI ಅನುಸರಣೆಯ ಪವರ್ ಟ್ರೈನ್ಸ್ , ಅಂದರೆ, 2.0-ಲೀಟರ್, 172 PS, 350 Nm,ಟರ್ಬೋಡೀಸಲ್(Multiair) ಮತ್ತು1.4-ಲೀಟರ್163 PS, 250 Nm,ಟರ್ಬೋ-ಪೆಟ್ರೋಲ್(ಮಲ್ಟಿಏರ್)ನ ವೈವಿಧ್ಯಗಳಲ್ಲಿ ಆಯ್ಕೆಗೆ ಲಭ್ಯವಿರುತ್ತವೆ. 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡಿಡಿಸಿಟಿ ಪ್ರಸರಣದಆಯ್ಕೆಯೊಂದಿಗೆ ಹೊಸ ಕಂಪಾಸ್‍ಅನ್ನುಒದಗಿಸಲಾಗುತ್ತಿದ್ದು, ಇವೆರೆಡೂ, ಪ್ರಸಿದ್ಧ ಗ್ರಾಹಕ ಬೇಡಿಕೆಯಿಂದಾಗಿ ಸ್ಪೋರ್ಟ್‍ನಲ್ಲಿ ಹೊಸದಾಗಿ ಪರಿಚಯಿಸಲಾಗಿರುವ ವೈವಿಧ್ಯಗಳಾಗಿವೆ.

ಜೀಪ್ ಸೆಲೆಕ್ಟ್ ಟರೇನ್
ಐತಿಹಾಸಿಕ ಜೀಪ್ ಸೆಲೆಕ್ಟ್ ಟರೇನ್ (SelecTerrain) 4x4 ಸಿಸ್ಟಮ್ ಇರುವ ಮೂರು ಆಲ್-ವ್ಹೀಲ್-ಡ್ರೈವ್(4x4) ವೈವಿಧ್ಯಗಳು, ಮೂರೂ ಟ್ರಿಮ್‍ಗಳು ಅಂದರೆ, ಲಿಮಿಟೆಡ್(O) ಮತ್ತು ಮಾಡಲ್'S'ಮತ್ತು 80ನೆ ವಾರ್ಷಿಕೋತ್ಸವ ಸೀಮಿತ ಆವೃತ್ತಿಗಳಾದ್ಯಂತ, 9-ಸ್ಪೀಡ್ ಸ್ವಯಂಚಾಲಿತ ಪ್ರಸರಣದಜೊತೆಗೆ, 2.0-ಲೀಟರ್ ಬೋರ್ಡ್ ಡೀಸಲ್‍ನ ಸಂಯೋಜನೆಯೊಂದಿಗೆ ಲಭ್ಯವಾಗಲಿವೆ. ಎಲ್ಲಾ 9-ಸ್ಪೀಡ್ ಸ್ವಯಂಚಾಲಿತ, AWD ವೈವಿಧ್ಯಗಳಲ್ಲಿ ಕ್ರೂಸ್ ನಿಯಂತ್ರಣವನ್ನು ಸಾಮಾನ್ಯಅಂಶವನ್ನಾಗಿ ಅಳವಡಿಸಲಾಗಿದೆ.
ಹೊಸ ಜೀಪ್‍ಕಂಪಾಸ್ ಏಳು ಬಣ್ಣಗಳಲ್ಲಿ ಲಭ್ಯವಿದ್ದು ಇವುಗಳ ಪೈಕಿ ಮೂರು ಹೊಸ ಬಣ್ಣಗಳು- ಟೆಕ್ನೋ ಮೆಟಾಲಿಕ್ ಹಸಿರು, ಗ್ಯಲಾಕ್ಸಿ ನೀಲಿ, ಮತ್ತು ಬ್ರೈಟ್ ವೈಟ್, ಪ್ರಸಿದ್ಧ ಗ್ರಾಹಕ ಬೇಡಿಕೆಯಿಂದಾಗಿ ಪರಿಚಯಿಸಿದವುಗಳಾಗಿವೆ.

ಡೆಲಿವರಿಗಳು ಫೆಬ್ರವರಿ 2, 2021ರಿಂದ ಆರಂಭ
ಗ್ರಾಹಕ ಪರೀಕ್ಷಾ ಚಾಲನೆ ಹಾಗು ವಾಹನ ಡೆಲಿವರಿಗಳು ಫೆಬ್ರವರಿ 2, 2021ರಿಂದ ಆರಂಭ
• ಹೊಸ ಕಂಪಾಸ್, ಹೆಚ್ಚು ಆಧುನಿಕವಾಗಿದೆ, ಹೆಚ್ಚು ಸಂಪರ್ಕಗೊಂಡಿದೆ ಮತ್ತು ಹೆಚ್ಚು ಗ್ರಾಹಕ-ಕೇಂದ್ರಿತವಾಗಿದೆ
• 4 ಟ್ರಿಮ್‍ಗಳಾದ್ಯಂತ 11 ವೈವಿಧ್ಯಗಳು-ಸ್ಪೋರ್ಟ್, ಲಾಂಗಿಟ್ಯೂಡ್, ಲಿಮಿಟೆಡ್(O) ಮತ್ತು ಮಾಡಲ್'S'
• ಜೀಪ್ ಬ್ರ್ಯಾಂಡ್‍ನ ಆಚರಣಾ 80ನೆ ವಾರ್ಷಿಕೋತ್ಸವ ಆವೃತ್ತಿಯನ್ನುಕೂಡ 3 ವೈವಿಧ್ಯಗಳಲ್ಲಿ ಪರಿಚಯಿಸಲಾಗಿದೆ
• 7 ಬಣ್ಣಗಳ ಆಯ್ಕೆ- 3 ಹೊಸತು- ಟೆಕ್ನೋ ಮೆಟಾಲಿಕ್ ಹಸಿರು, ಗ್ಯಾಲಕ್ಸಿ ನೀಲಿ, ಮತ್ತು ಬ್ರೈಟ್ ವೈಟ್
• ಎಲ್ಲಾ ಶ್ರೇಣಿಗಳಾದ್ಯಂತ ಸಂಪರ್ಕಗೊಂಡ ಅಂಶಗಳೊಂದಿಗೆ ಹೊಚ್ಚ ಹೊಸ ಒಳಾಂಗಣ ಸಜ್ಜು
• ಮೇಲ್ದರ್ಜೆಯ ಟ್ರಿಮ್ ಆಗಿ ಹೊಸ ಜಾಗತಿಕ ವೈವಿಧ್ಯ ಮಾಡಲ್'S' ಪರಿಚಯ
• ಮಾಡಲ್'S'ನಲ್ಲಿ 20-ಅಂಗುಲಗಳ ಡಿಜಿಟಲ್ ಸ್ಕ್ರೀನ್ ಒದಗಿಸಲಾಗಿದೆ
• ಎರಡು ಟ್ರಿಮ್‍ಗಳಾದ ಲಿಮಿಟೆಡ್(O) ಮತ್ತು ಮಾಡಲ್'S', ರಮಣೀಯವಾದ ಸನ್‍ರೂಫ್ ಹೊಂದಿವೆ.
• ಗ್ರಾಹಕ ಅಭಿಪ್ರಾಯ ಮಾಹಿತಿಯನ್ನು ಅಳವಡಿಸಿ ಸ್ಪೋರ್ಟ್‍ಟ್ರಿಮ್‍ನಲ್ಲಿ 7-ಸ್ಪೀಡ್ ಡಿಡಿಸಿಟಿ ಅಳವಡಿಕೆ

ಹೊಸ ಜೀಪ್‍ಕಂಪಾಸ್ 80ನೆ ವಾರ್ಷಿಕೋತ್ಸವ ಆವೃತ್ತಿ
80ನೆ ವಾರ್ಷಿಕೋತ್ಸವದ ಈ ವಿಶೇಷ ಆವೃತ್ತಿಯು, ಬಾಡಿ ಪೈಂಟ್ ಮಾಡಲಾದ ಮುಂಬದಿ ಹಾಗು ಹಿಂಬದಿ ನೋಟ, ಸಿಲ್ ಮೌಲ್ಡಿಂಗ್ ಮತ್ತು ಫೆಂಡರ್ ಪ್ಲೇರ್ಸ್, ಹೊಳೆಯುವ ಕಪ್ಪು ಮುಂಬದಿ ಗ್ರಿಲ್, ಕಪ್ಪುಡ್ಯುಯಲ್‍ಟೋನ್‍ಛಾವಣಿ, ಕಪ್ಪು ಕನ್ನಡಿಗಳು, ಡ್ಯುಯಲ್ ಪೇನ್ ಮನೋಹರ ಸನ್‍ರೂಫ್, ಸ್ವಯಂಚಾಲಿತಎಲ್‍ಇಡಿ ಪ್ರತಿಫಲನ ಹೆಡ್‍ಲ್ಯಾಂಪುಗಳು, ಮಳೆ ಕಂಡುಹಿಡಿಯುವ ವೈಪರ್ಸ್, ಮತ್ತು 18-ಅಂಗುಲ ಗ್ರಾನೈಟ್‍ಕ್ರಿಸ್ಟಲ್ ಅಲಾಯ್ ಚಕ್ರಗಳನ್ನು ಹೊಂದಿದೆ. ಜೊತೆಗೆ ಕಪ್ಪು ಒಳಾಂಗಣ, 10.1 ಅಂಗುಲ ಯುಕನೆಕ್ಟ್-5 ಇನ್ಫೋಟೇನ್‍ಮೆಂಟ್ ಟಚ್‍ಸ್ಕ್ರೀನ್ ಮತ್ತು ಸಂಪರ್ಕ ಅಂಶಗಳನ್ನು ಹೊಂದಿರುವುದಲ್ಲದೆ ಆರು ಏರ್ ಬ್ಯಾಗುಗಳನ್ನೂ ಹೊಂದಿದೆ. 80ನೆ ವಾರ್ಷಿಕೋತ್ಸವ ಆವೃತ್ತಿಯು, ಮುಂಬದಿ ಸೀಟುಗಳಲ್ಲಿ ಹೊರಭಾಗಕ್ಕೆ ಜೀಪ್ ಬ್ರ್ಯಾಂಡ್‍ನ ಪರಂಪರೆಯ ಮುದ್ರೆ, ಮತ್ತು ಮುಂಬದಿ ಪ್ಯಾಸಂಜರ್ ಭಾಗದ ಇನ್ಸ್ ಟ್ರುಮೆಂಟ್ ಪ್ಯಾನೆಲ್ ಕೂಡ ಹೊಂದಿದೆ. ಭಾರತದಲ್ಲೇ ತಯಾರಾಗಿರುವ ಇದು ಎಲ್ಲಾ ಏಳು ಬಣ್ಣಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.












Click it and Unblock the Notifications