ಬೆಂಗಳೂರಿನ ಬಿಲಿಯೇನರ್‌ ಸ್ಟ್ರೀಟ್‌ನಲ್ಲಿದೆ ನಂದನ್‌ ನಿಲೇಕಣಿ ಮನೆ: ಈ ಐಶಾರಾಮಿ ನಿವಾಸದಲ್ಲಿ ಏನೇನಿವೆ?

ನಂದನ್‌ ನಿಲೇಕಣಿ ಕರ್ನಾಟಕದವರಿಗೆ ಪರಿಚಯ ಇಲ್ಲದವರೇನಲ್ಲ. ಉದ್ಯಮ, ತಂತ್ರಜ್ಞಾನದಲ್ಲಿ ದೊಡ್ಡ ಹೆಸರು ಮಾಡಿದ ವ್ಯಕ್ತಿ. ಈ ಕನ್ನಡಿಗನ ಸಾಧನೆ ಕಡಿಮೆಯೇನಲ್ಲ. ಆದರೂ ಇವರ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿರಲಿಲ್ಲ. ಆದರೆ ಕಳೆದ ವಾರದಿಂದ ಈ ಹೆಸರು ಮತ್ತೆ ಜನಪ್ರಿಯ. ಈಗಲೂ ಈ ಹೆಸರು ಮತ್ತೊಮ್ಮೆ ಟ್ರೆಂಡ್‌ನಲ್ಲಿದೆ. ಇನ್ಫೋಸಿಸ್‌ ಸಹ-ಸಂಸ್ಥಾಪಕ ಮತ್ತು ನಾನ್‌ ಎಕ್ಸಿಕ್ಯೂಟಿವ್‌ ಚೇರ್‌ ಮ್ಯಾನ್.‌ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (ಯುಐಡಿಎಐ) ಮಾಜಿ ಅಧ್ಯಕ್ಷರು ಹೌದು. ಕಾಕ್ರೋಚ್‌ ಜನತಾ ಪಾರ್ಟಿ ಪ್ರತಿಭಟನೆಯ ನಂತರ ಅಂದರೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ಬಳಿಕ ನಂದನ್‌ ನಿಲೇಕಣಿ ಬಗ್ಗೆ ಗೂಗಲ್‌ನಲ್ಲಿ ಮತ್ತಷ್ಟು ಸರ್ಚ್ ಆಗುತ್ತಿವೆ.

ಕರ್ನಾಟಕದವೇ ಆದ ನೀಲೆಕಣಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು. ಬೆಂಗಳೂರಿನಲ್ಲಿ ವಾಸ. ಹಿಂದೆ ಕೈ ಪಕ್ಷದಿಂದ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸಂಸತ್‌ ಸ್ಥಾನಕ್ಕೂ ಸ್ಪರ್ಧಿಸಿ, ಬಿಜೆಪಿ ಅನತ್ ಕುಮಾರ್ ವಿರುದ್ಧ ಸೋಲು ಕಂಡಿದ್ದರು. ಈ ಐಟಿ ದಿಗ್ಗಜ, ಆಧುನಿಕ ಭಾರತದ ಪ್ರವರ್ತಕ ನಂದನ್ ಅವರಿಗೆ ಬೆಂಗಳೂರಿನ 'ಬಿಲಿಯನೇರ್ ಸ್ಟ್ರೀಟ್‌ನಲ್ಲಿ ಮನೆಯಿದೆ.

ಶ್ರೀಮಂತರ ಏರಿಯಾದಲ್ಲಿದೆ ಈ ಅರಮನೆ :

ಹೌದು, ಬೆಂಗಳೂರಿನ ಕೋರಮಂಗಲದ 3ನೇ ಬ್ಲಾಕ್‌ನಲ್ಲಿ ನಂದನ್ ನಿಲೇಕಣಿ ಮನೆ ಇದೆ. ಹೇಳಿ ಕೇಳಿ ಇದು ಬಿಲಿಯೇನರ್‌ ಸ್ಟ್ರೀಟ್.‌ ಹೆಸರೇ ಹೇಳುವಂತೆ ಈ ಏರಿಯಾದಲ್ಲಿ ಶ್ರೀಮಂತರ ಮನೆಗಳೇ ಹೆಚ್ಚು. ಕೋರಮಂಗಲ ಅಂದರೆ ಅದು ಬೆಂಗಳೂರಿನ ಅತ್ಯಂತ ಐಷಾರಾಮಿ ರೆಸಿಡೆನ್ಶಿಯಲ್‌ ಏರಿಯಾ. ಹಾಗಾಗಿ ಇಲ್ಲಿ ಪ್ರೀಮಿಯಂ ವಿಲ್ಲಾಗಳು, ಹಸಿರು ಮರಗಳು ಜಾಸ್ತಿ. ಇಲ್ಲಿಂದ ಟೆಕ್‌ ಕಾರಿಡಾರ್‌ಗೆ ಹೋಗುವುದೂ ಸುಲಭ. ಈ ಏರಿಯಾದಲ್ಲಿ ದೊಡ್ಡ ದೊಡ್ಡ ಉದ್ಯಮಿಗಳು, ಇಂಡಸ್ಟ್ರಿಯಲಿಸ್ಟ್‌ಗಳು ವಾಸವಿದ್ದಾರೆ.

Nandan Nilekani

ಬಿಲಿಯನೇರ್ ಸ್ಟ್ರೀಟ್‌ನ ದುಬಾರಿ ಮನೆ :

2022ರಲ್ಲಿ ನೀಲೆಕಣಿಯವರು ಸ್ಥಾಪಿಸಿದ ಎನ್‌ಆರ್‌ಜೆಎನ್‌ ಫ್ಯಾಮಿಲಿ ಟ್ರಸ್ಟ್‌ ಈ ಮನೆಯನ್ನು ಸುಮಾರು 59 ಕೋಟಿಗೆ ಕೊಂಡುಕೊಂಡಿದೆ. ಈ ಏರಿಯಾದ ಅತ್ಯಂತ ದುಬಾರಿ ಮನೆ ಇದು. ಈ ಮನೆ 9,600 ಸ್ಕೇರ್ ಫೀಟ್‌ ವಿಸ್ತಾರವಾಗಿದ್ದು, ಈ ಮನೆಗೆ ತಾಗಿಕೊಂಡಿರುವಂತೆಯೇ ಖಾಲಿ ನಿವೇಶನವನ್ನೂ ಟ್ರಸ್ಟ್‌ ಖರೀಸಿದೆಯಂತೆ.

ಮನೆಯ ವಿನ್ಯಾಸ ಹೇಗಿದೆ ?:

ಈ ಮನೆಯ ಫ್ಲೋರ್‌ ಪ್ಲಾನ್‌, ವಾಸ್ತುಶಿಲ್ಪ ಮತ್ತು ಒಳಗಿನ ಫೋಟೋಗಳನ್ನು ಎಲ್ಲೂ ಬಿಡುಗಡೆ ಮಾಡಿಲ್ಲ. ಈ ಕುಟುಂಬ ತಮ್ಮ ಪರ್ಸನಲ್‌ ಲೈಫ್‌ ಅನ್ನು ಪರ್ಸನಲ್‌ ಆಗಿಯೇ ಇಟ್ಟುಕೊಂಡಿದೆ. ಸೋಷಿಯಲ್‌ ಮೀಡಿಯಾ ಆಗಲಿ, ಸುದ್ದಿ ಮಾಧ್ಯಮಗಳಾಗಲಿ ಎಲ್ಲೂ ಈ ಮನೆಯ ಒಂದೇ ಒಂದು ತುಣುಕು ಕಾಣಿಸುವುದಿಲ್ಲ. ಕೋರಮಂಗಲದ 3ನೇ ಬ್ಲಾಕ್‌ನಲ್ಲಿರುವ ಉನ್ನತ-ಮಟ್ಟದ ಮನೆಗಳ ವಿನ್ಯಾಸದ ಪ್ರಕಾರ ನೋಡುವುದಾದರೆ ಇಲ್ಲಿನ ಮನೆಗಳಲ್ಲಿ ಸಾಮಾನ್ಯವಾಗಿ ಸುಂದರ ಗಾರ್ಡನ್‌ಗಳಿರುತ್ತವೆ. ದೊಡ್ಡ ಹಿತ್ತಳೂ ಇರುತ್ತೆ. ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಿರಬಹುದು, ಕಲ್ಲು, ಮರ ಮತ್ತು ಗಾಜಿನಂತಹ ನೈಸರ್ಗಿಕ ವಸ್ತುಗಳನ್ನು ಅಲಂಕಾರಕ್ಕಾಗಿ ಬಳಸಿರಬಹುದು ಎಂದು ಅಂದಾಜಿಸಲಾಗಿದೆ.

ನಡೆಯುತ್ತದೆ ದೊಡ್ಡವರ ಮಿಟೀಂಗ್‌ :

ಇವರ ಮನೆಗೆ ದೊಡ್ಡ ಉದ್ಯಮಿಗಳು ಬರುತ್ತಿರುತ್ತಾರೆ. ಈ ಮನೆಯಲ್ಲಿ ವ್ಯಾಪಾರ ಮುಖಂಡರು ಮತ್ತು ತಂತ್ರಜ್ಞರ ಮೀಟಿಂಗ್‌ಗಳು ನಡೆಯುತ್ತಿರುತ್ತದೆ. ಮನಿ ಕಂಟ್ರೋಲ್ ವರದಿ ಪ್ರಕಾರ, ನಿಲೇಕಣಿ ಅವರ ಮನೆಯಲ್ಲಿ ಹಿಂದೆ ಆಂಥ್ರೊಪಿಕ್ ಸಿಇಒ ಡೇರಿಯೊ ಅಮೋಡೆ ಮತ್ತು ವಿಪ್ರೋ ಅಧ್ಯಕ್ಷ ರಿಷದ್ ಪ್ರೇಮ್‌ಜಿ, ಕ್ರೆಡಿಟ್‌ನ ಕುನಾಲ್ ಶಾ, ಮೀಶೋನ ವಿದಿತ್ ಆತ್ರೆ, ಅಥರ್‌ನ ತರುಣ್ ಮೆಹ್ತಾ, ರ್ಯಾಪಿಡೋದ ಅರವಿಂದ್ ಸಂಕಾ, ಸರ್ವಂನ ವಿವೇಕ್ ರಾಘವನ್, ಸ್ಲೈಸ್ 'ರಾಜನ್ ಬಜಾಜ್, ಜಾರ್‌ನ ನಿಶ್ಚಯ್ ಆಗ್, ಪ್ರೊಸಸ್‌ನ ಅಶುತೋಷ್ ಶರ್ಮಾ, ಲೈಟ್‌ಸ್ಪೀಡ್‌ನ ಹೇಮಂತ್ ಮೊಹಾಪಾತ್ರ ಮತ್ತು ಡಿಪಿಐ ದಾರ್ಶನಿಕ ಪ್ರಮೋದ್ ವರ್ಮಾ ಸೇರಿದಂತೆ ಹಲವಾರು ಮಂದಿ ಅನೌಪಚಾರಿಕ ಮೀಟಿಂಗ್‌ಗಳನ್ನು ನಡೆಸಿದ್ದಾರೆಯಂತೆ.

ಉನ್ನತ ಮಟ್ಟದ ಕಾರ್ಯಪಡೆಯ ನೇತೃತ್ವ :

ಪರೀಕ್ಷಾ ಸುಧಾರಣೆಗಾಗಿ ಕೇಂದ್ರ ಸರ್ಕಾರ ರಚಿಸಿದ ಕಾರ್ಯಪಡೆಯ ನೇತೃತ್ವವನ್ನು ನಂದನ್ ನಿಲೇಕಣಿ ವಹಿಸಲಿದ್ದಾರೆ. ಭಾರತದ ಪರೀಕ್ಷಾ ವ್ಯವಸ್ಥೆಯನ್ನು ಸುಧಾರಿಸುವ ಸಲುವಾಗಿ ಆರು ಸದಸ್ಯರ ಹೊಸ ಉನ್ನತ ಮಟ್ಟದ ಕಾರ್ಯಪಡೆಯನ್ನು ರಚಿಸಲಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೇಳಿಕೆ ನೀಡಿದ್ದರು.

ನೀಟ್-ಯುಜಿ 2026 ರ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಸಿಬಿಎಸ್‌ಇ ಆನ್-ಸ್ಕ್ರೀನ್ ಮಾರ್ಕಿಂಗ್ ಪ್ರಕ್ರಿಯೆಯಲ್ಲಿನ ಅಕ್ರಮಗಳ ಕುರಿತು ಕಾಕ್ರೋಚ್‌ ಜನತಾ ಪಾರ್ಟಿ ನೇತೃತ್ವದಲ್ಲಿ 36 ದಿನಗಳ ಕಾಲ ದಿಲ್ಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆದಿತ್ತು. ಇದಾದ ಬಳಿಕ ಪ್ರತಿಭಟನಾಕಾರರ ಬೇಡಿಕೆಯಂತೆ ಧರ್ಮೇಂದ್ರ ಪ್ರಧಾನ್ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಈ ಬೆಳವಣಿಗೆ ನಂತರ ಕೇಂದ್ರ ಸರ್ಕಾರ ಉನ್ನತ ಮಟ್ಟದ ಕಾರ್ಯಪಡೆಯನ್ನು ರಚಿಸಿದೆ.

ಭವಿಷ್ಯದ ಪರೀಕ್ಷೆಗಳನ್ನು ನ್ಯಾಯಯುತ ರೀತಿಯಲ್ಲಿ ನಡೆಸಲು ಎನ್‌ಟಿಎಗೆ ಸೂಕ್ತವಾದ ರಚನಾತ್ಮಕ ಮತ್ತು ತಂತ್ರಜ್ಞಾನ ಆಧಾರಿತ ಬದಲಾವಣೆಗಳನ್ನು ಸಮಿತಿಯ ಸಂಕ್ಷಿಪ್ತ ವರದಿಯು ಶಿಫಾರಸು ಮಾಡುತ್ತದೆ.

ನಿಲೇಕಣಿ ಅವರಲ್ಲದೆ, ಬಹುಶಿಸ್ತೀಯ ಕಾರ್ಯಪಡೆಯಲ್ಲಿ ಮಾಜಿ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್, ಮಾಜಿ ಇಂಟೆಲಿಜೆನ್ಸ್ ಬ್ಯೂರೋ ನಿರ್ದೇಶಕ ತಪನ್ ದೇಕಾ, ಐಐಟಿ ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ, ಮಾಜಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ ಅನಿತಾ ಕರ್ವಾಲ್ ಮತ್ತು ಲಾಜಿಸ್ಟಿಕ್ಸ್ ತಜ್ಞ ಅಮೃತ್ ಲಾಲ್ ಮೀನಾ ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+