ಸುಳ್ಳು ಸುದ್ದಿ ಹಿಂದೆ ಬಿದ್ದು ಬಿಟ್ ಕಾಯಿನ್ ಮೌಲ್ಯ ಕುಸಿದಿದ್ದು ಎಷ್ಟು?
ಬೆಂಗಳೂರು, ಮೇ 17: ಡಿಜಿಟಲ್ ಕರೆನ್ಸಿ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಪಾಲನ್ನು ಟೆಲ್ಸಾ ಸಂಸ್ಥೆ ಮಾರಾಟ ಮಾಡಿದೆ ಎಂಬ ಸುದ್ದಿ ಹಬ್ಬಿ, ಬಿಟ್ ಕಾಯಿನ್ ದಿಢೀರ್ ಆಗಿ ಕುಸಿತ ಕಾಣಲು ಕಾರಣವಾಯಿತು. ಆದರೆ, ನಂತರ ಟೆಲ್ಸಾ ತನ್ನ ಪಾಲಿನ ಬಿಟ್ ಕಾಯಿನ್ ಮಾರಿಲ್ಲ ಎಂದು ಇಲಾನ್ ಮಾಸ್ಕ್ ಸ್ಪಷ್ಟನೆ ನೀಡಿದರು. ಇನ್ನೊಂದೆಡೆ ಟ್ವಿಟ್ಟರ್ ಸಿಇಒ ಜಾಕ್ ಡೊರ್ಸೆ ಅವರು ಬಿಟ್ ಕಾಯಿನ್ ಪರ ಹೇಳಿಕೆ ನೀಡಿದರು. ಇವತ್ತು ಡಿಜಿಟಲ್ ದುಡ್ಡಿನ ದುನಿಯಾದಲ್ಲಿ ಬಿಟ್ ಕಾಯಿನ್ ಏರಿಳಿತದ್ದೇ ಸುದ್ದಿ.
ಇಥೆರಿಯಂ, ಡೋಜ್ ಕಾಯಿನ್ ಸೇರಿದಂತೆ ಹಲವು ಕರೆನ್ಸಿಗಳ ಮೌಲ್ಯ ಸ್ಥಿರವಾಗಿದ್ದು, ಕೆಲವು ಉತ್ತಮ ಮೌಲ್ಯ ಪಡೆದುಕೊಳ್ಳುತ್ತಿವೆ. ಕೊರೊನಾ ಸಂಕಷ್ಟದ ಕಾಲದಲ್ಲಿ ಡಿಜಿಟಲ್ ದುಡ್ಡಿನ ಮೇಲೆ ಹೂಡಿಕೆ ಮಾಡಲು ಅನೇಕ ಉದ್ಯಮಿಗಳು ಮುಂದಾಗಿದ್ದಾರೆ. ಆದರೆ, ಇಲಾನ್ ಹೇಳಿಕೆ ಎಲ್ಲವನ್ನು ಅಲ್ಲೋಲ ಕಲ್ಲೋಲ ಮಾಡಿದ್ದಂತೂ ನಿಜ.
ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಮೌಲ್ಯ $2 ಟ್ರಿಲಿಯನ್‌ಗೆ ಏರಿಕೆಯಾಗಿ ಬಹುಕಾಲವಾಗಿದೆ. ಬಿಟ್ ಕಾಯಿನ್ ಈ ಹಿಂದಿನ $61,222 ಮೌಲ್ಯ ದಾಖಲೆ ಮುರಿದು ಏಪ್ರಿಲ್ ತಿಂಗಳಲ್ಲಿ ಮೊದಲ ಬಾರಿಗೆ 64 ಸಾವಿರ ಡಾಲರ್ ಮೌಲ್ಯಕ್ಕೇರಿತ್ತು.
ಎಲ್ಲಾ ಕ್ರಿಪ್ಟೋಕರೆನ್ಸಿಗಳ ಮೌಲ್ಯ ಒಟ್ಟಾರೆ ಈ ಸಮಯಕ್ಕೆ ಕುಸಿತ ಕಂಡು 1,972,642,322,864 ಟ್ರಿಲಿಯನ್ ಡಾಲರ್ ಆಗಿದೆ. ಕಳೆದ ಒಂದು ವರ್ಷದಲ್ಲಿ, ಬಿಟ್‌ಕಾಯಿನ್ ಶೇಕಡಾ 103.72ರಷ್ಟು ಲಾಭವನ್ನು ನೀಡಿದೆ.
To clarify speculation, Tesla has not sold any Bitcoin
— Elon Musk (@elonmusk) May 17, 2021
ಮೇ 17ರಂದು ಈ ಸಮಯ(23:00)ಕ್ಕೆ ಬಿಟ್ ಕಾಯಿನ್ ಮೌಲ್ಯ:
ಬಿಟ್ ಕಾಯಿನ್ ಬೆಲೆ: $42,277.35
ಒಟ್ಟಾರೆ ಮಾರುಕಟ್ಟೆ ಮೌಲ್ಯ: $795,514,103,906 (ನಿನ್ನೆ ದರ:$923,352,421,468)
ಒಂದು ಬಿಟ್ ಕಾಯಿನ್ ಬೆಲೆ = 30,99,748.40 (ನಿನ್ನೆ ದರ: 36,22,926.03 ರು)
(1 USD=73.34 ರುಪಾಯಿ)
ಬಿಟ್ ಕಾಯಿನ್ ಕಳೆದ 24 ಗಂಟೆಗಳಲ್ಲಿ ಶೇ 10.02ರಷ್ಟು ಕುಸಿತ ಕಂಡಿದೆ. ಈ ವಾರ ಶೇ 26.40 ರಷ್ಟು ಇಳಿಕೆಯಾಗಿದೆ. ಈ ನಡುವೆ ಮತ್ತೊಂದು ಡಿಜಿಟಲ್ ಕರೆನ್ಸಿ ಇಥೆರಿಯಂ (Ethereum) ಕಳೆದ 24 ಗಂಟೆಗಳಲ್ಲಿ ಶೇ 11.40ರಷ್ಟು ಕುಸಿತ ಕಂಡು 3,132.86ಡಾಲರ್ ಮೌಲ್ಯ ಪಡೆದಿದೆ. ಈ ವಾರದಲ್ಲಿ 24.88% ಇಳಿಕೆಯಾಗಿ ಒಟ್ಟಾರೆ $367,015,686,994 ಮೌಲ್ಯ ಹೊಂದಿದೆ.

ಬಿಟ್‌ಕಾಯಿನ್: ಇದು ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿಯಾಗಿದೆ. ಡಿಜಿಟಲ್ ಕರೆನ್ಸಿಯಾಗಿರುವುದರಿಂದ ಯಾವುದೇ ರೀತಿಯಲ್ಲಿ ಮುದ್ರಣ ರೂಪದಲ್ಲಿ ಸಿಗುವುದಿಲ್ಲ. ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಯಾವುದೇ ದೇಶ, ಭಾಷೆ, ಬ್ಯಾಂಕುಗಳಿಗೆ ಇದು ಸೀಮಿತವಾಗಿಲ್ಲ. ಭಾರತ, ಸೌದಿ ಅರೇಬಿಯಾ, ಅಲ್ಜೀರಿಯಾ, ಬೊಲಿವಿಯಾ ಅನೇಕ ದೇಶಗಳಲ್ಲಿ ನಿಷೇಧವಾಗಿರುವ ಕ್ರಿಪ್ಟೋ ಕರೆನ್ಸಿ ಇತ್ತೀಚೆಗೆ ಭಾರಿ ಬೇಡಿಕೆ ಪಡೆದು ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ. ಆದರೆ, ಡಿಜಿಟಲ್ ಆಸ್ತಿ ರೂಪದಲ್ಲಿ ಕ್ರಿಪ್ಟೋ ಕರೆನ್ಸಿ ಬಳಕೆಯಾಗಬಹುದೇ ಹೊರತೂ ಸಾಮಾನ್ಯ ವ್ಯವಹಾರಕ್ಕೆ ಸೂಕ್ತವಲ್ಲ ಎಂದು ತಜ್ಞರು ಕೂಡಾ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications