ಮುದ್ರಾ ಬ್ಯಾಂಕ್ನಿಂದ 1.22 ಲಕ್ಷ ಕೋಟಿ ರು. ಸಾಲ ನೀಡಿಕೆ
ನವದೆಹಲಿ, ಸೆಪ್ಟೆಂಬರ್. 26: ಸಣ್ಣ ಮತ್ತು ಅತಿ ಸಣ್ಙ ಉದ್ಯಮಿಗಳಿಗೆ ನೆರವಾಗಲು ಆರಂಭವಾದ ಮುದ್ರಾ ಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷದ ಅಂತ್ಯದೊಳಗೆ 1.22 ಲಕ್ಷ ಕೋಟಿ ರು. ಸಾಲ ನೀಡಿಕೆ ಮಾಡಲಿದೆ.
ಪ್ರಧಾನ ಮಂತ್ರಿ 'ಮುದ್ರಾ' (ಕಿರು ಉದ್ಯಮಗಳ ಅಭಿವೃದ್ಧಿ ಮತ್ತು ಮರು ಹಣಕಾಸು ಸಂಸ್ಥೆ ) ಯೋಜನೆಯ ಬೃಹತ್ ಸಾಲ ವಿತರಣಾ ಯೋಜನೆಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಯೋಜನೆ ಅಡಿ ಈಗಾಗಲೇ 27 ಲಕ್ಷ ಕಿರು ಉದ್ಯಮಿಗಳಿಗೆ 24 ಸಾವಿರ ಕೊಟಿ ರು. ಸಾಲ ನೀಡಿಕೆ ಮಾಡಲಾಗಿದೆ ಎಂದು ತಿಳಿಸಿದರು.[ಮುದ್ರಾ ಬ್ಯಾಂಕ್ ಬಂತು, ಸಾಲದ ತಲೆಬಿಸಿ ಹೋಯ್ತು]

2016ರ ಮಾರ್ಚ್ ಅಂತ್ಯದೊಳಗೆ 1.22 ಲಕ್ಷ ಕೋಟಿ ರು. ಸಾಲ ನೀಡಿಕೆ ಮಾಡಲಾಗುತ್ತದೆ. ಪರಿಣಾಮ ಹೊಸ ಉದ್ಯೋಗ ಸೃಷ್ಟಿಯಾಗಲಿದೆ. ಬೀದಿಬದಿ ವರ್ತಕರು, ಅತಿ ಸಣ್ಣ ಉದ್ದಿಮೆದಾರರಿಗೆ ಅತ್ಯಲ್ಪ ಮೊತ್ತದ ಸಾಲ ನೀಡುವ ಸಣ್ಣ ಹಣಕಾಸು ಸಂಸ್ಥೆಗಳನ್ನೂ ಈ ಮುದ್ರಾ ಬ್ಯಾಂಕ್ ನಿಯಂತ್ತರಿಸಲಿದೆ ಎಂದು ಹೇಳಿದರು.
ಸದಾನಂದ ಗೌಡ ಎಚ್ಚರಿಕೆ
'ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆಯ (ಪಿಎಂಕೆವಿವೈ) ಫಲಾನುಭವಿಗಳಿಗೆ ಮುದ್ರಾ ಬ್ಯಾಂಕ್ನಿಂದ ಸಾಲ ನೀಡಲು ತಕರಾರು ಮಾಡುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕೇಂದ್ರ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಕೇಂದ್ರ ಕಾನೂನು ಸಂಸದೀಯ ಖಾತೆ ಸಚಿವ ಡಿ.ವಿ.ಸದಾನಂದಗೌಡ ಚಿತ್ರದುರ್ಗದಲ್ಲಿ ಎಚ್ಚರಿಕೆ ನೀಡಿದ್ದಾರೆ.


Click it and Unblock the Notifications
