ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

44.51 ಕೋಟಿ ಗ್ರಾಹಕರಿಗೆ ಶುಭ ಸುದ್ದಿ ಕೊಟ್ಟ ಎಸ್ಬಿಐ

|
Google Oneindia Kannada News

ಮುಂಬೈ, ಮಾರ್ಚ್ 12: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ಬಿಐ) ಗುರುವಾರದಂದು 44.51 ಕೋಟಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರಿಗೆ ಶುಭ ಸುದ್ದಿ ನೀಡಿದೆ. ಪ್ರತಿ ತಿಂಗಳು ಗ್ರಾಹಕರ ಖಾತೆ ಹೊಂದಿರಬೇಕಾಗಿದ್ದ ಕನಿಷ್ಠ ಸರಾಸರಿ ಮೊತ್ತ(AMB) ತೆಗೆದು ಹಾಕಲಾಗಿದೆ .ಇದು ಎಲ್ಲಾ ರೀತಿಯ ಖಾತೆಗಳಿಗೂ ಅನ್ವಯ ಎಂದು ಪ್ರಕಟಣೆ ಹೊರಡಿಸಿದೆ.

ಈ ಮೂಲಕ ಉಳಿತಾಯ ಖಾತೆಯಲ್ಲಿ ಮಿನಿಮಯ್ ಬ್ಯಾಲೆನ್ಸ್ ಇಟ್ಟುಕೊಳ್ಳಲು ಪರದಾಡುತ್ತಿದ್ದ ಗ್ರಾಹಕರಿಗೆ ನಿರಾಳ ಮೂಡಿದೆ. ಹೀಗಾಗಿ, ಜೀರೋ ಬ್ಯಾಲೆನ್ಸ್ ಕೂಡಾ ಇಟ್ಟುಕೊಂಡು ಬ್ಯಾಂಕಿಂಗ್ ವ್ಯವಹಾರ ನಡೆಸಬಹುದಾಗಿದೆ.

ಮಾರ್ಚ್ 01ರಿಂದ ಬ್ಯಾಂಕಿಂಗ್ ವಹಿವಾಟಿನಲ್ಲಿ ಏನೇನು ಬದಲಾವಣೆ?ಮಾರ್ಚ್ 01ರಿಂದ ಬ್ಯಾಂಕಿಂಗ್ ವಹಿವಾಟಿನಲ್ಲಿ ಏನೇನು ಬದಲಾವಣೆ?

Averagae Monthly Balance ಎಂದರೇನು?: ಒಂದು ತಿಂಗಳಲ್ಲಿ ಖಾತೆಯಲ್ಲಿರುವ ಮೊತ್ತವನ್ನು ಆ ತಿಂಗಳ ದಿನಗಳ ಸಂಖ್ಯೆಯಿಂದ ಭಾಗಿಸಿದಾಗ ಸಿಗುವ ಮೊತ್ತ ಇದಾಗಿದೆ. ಎಸ್ಬಿಐನಲ್ಲಿ ಕನಿಷ್ಠ ಸರಾಸರಿ ಮೊತ್ತ ವಿವಿಧ ಪ್ರದೇಶಗಳ ಆಧಾರ ಮೇಲೆ ವಿಂಗಡಿಸಲಾಗಿದೆ. ಮೆಟ್ರೋ ನಗರಗಳಲ್ಲಿ ಖಾತೆ ಹೊಂದಿರುವವರು 3000ರು, ಸೆಮಿ ಅರ್ಬನ್ 2,000 ರು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಖಾತೆ ಹೊಂದಿರುವವರು 1000 ರು ಎಎಂಬಿ ಹೊಂದಿರಬೇಕು. ಕನಿಷ್ಠ ಸರಾಸರಿ ಮೊತ್ತ ಹೊಂದಿಲ್ಲದ ಖಾತೆ ಮೇಲೆ ಪ್ರದೇಶಕ್ಕೆ ಅನುಗುಣವಾಗಿ 5 ರಿಂದ 15 ರು ಪ್ಲಸ್ ತೆರಿಗೆ ಸೇರಿಸಿ ದಂಡ ಹಾಕಲಾಗುತ್ತಿತ್ತು.

SBI gives good news to 44.51 SB account holders

ಇದಲ್ಲದೆ, ಎಸ್ಎಂಎಸ್ ನೋಟಿಫಿಕೇಷನ್ ಗಾಗಿ ವಿಧಿಸಲಾಗುತ್ತಿತ್ತು ಶುಲ್ಕವನ್ನು ಎಸ್ಬಿಐ ತೆಗೆದು ಹಾಕಿದೆ. ಜೊತೆಗೆ ಉಳಿತಾಯ ಖಾತೆ ಬಡ್ಡಿದರ ಬದಲಾಯಿಸಲಾಗಿದ್ದು, ಏಕರೂಪ ಬಡ್ಡಿದರ ಶೇ 3ರಷ್ಟು ನಿಗದಿ ಪಡಿಸಲಾಗಿದೆ.

English summary
State Bank of India(SBI) announced on Thursday(March 12) that it has decided to waive maintenance of Average Monthly Balance(AMB) for all saving accounts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X