ಮೈಕ್ರೋಸಾಫ್ಟ್ ಇಮೇಲ್ ನಲ್ಲಿ ಕನ್ನಡ ಭಾಷೆ ಏಕಿಲ್ಲ?

ಬೆಂಗಳೂರು, ಫೆಬ್ರವರಿ 23 : ಅಂತಾರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಅಂಗವಾಗಿ ಮೈಕ್ರೋಸಾಫ್ಟ್ ಸಂಸ್ಥೆ ತನ್ನ ಹಲವು ಅಪ್ಲಿಕೇಷನ್ ಗಳನ್ನು ಭಾರತೀಯ ಭಾಷೆಗಳಲ್ಲೂ ಬಳಸಬಹುದು ಎಂದು ಪ್ರಕಟಿಸಿತ್ತು. ಆದರೆ, ಕನ್ನಡ ಭಾಷೆಯನ್ನು ಕಡೆಗಣಿಸಲಾಗಿದೆ.

ಈ ಬಗ್ಗೆ ಅನೇಕ ಮಂದಿ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಶ್ನಿಸಿದ್ದರು. ಮುಂದಿನ ಅಪ್ಡೇಟ್ ನಲ್ಲಿ ಇದನ್ನು ಸರಿಪಡಿಸಲಾಗುವುದು ಎಂಬ ಉತ್ತರ ಸಿಕ್ಕಿತ್ತು. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರ ಬಂದಿಲ್ಲ.

Microsoft announces wide support for e-mail addresses in Indian languages

ಮೈಕ್ರೋಸಾಫ್ಟ್ ಹೊರಡಿಸಿರುವ ಈ ಹಿಂದಿನ ಪ್ರಕಟಣೆಯಂತೆ, ಮೈಕ್ರೋಸಾಫ್ಟ್ ನ ಆಫೀಸ್ 365, ಔಟ್ ಲುಕ್ 2016, ಔಟ್ ಲುಕ್.ಕಾಂ, ಎಕ್ಸ್ ಜೇಂಜ್ ಆನ್ ಲೈನ್, ಎಕ್ಸ್ ಜೇಂಜ್ ಆನ್ ಲೈನ್ ಪ್ರೊಟೆಕ್ಷನ್ (ಇಒಪಿ) ಗಳಲ್ಲಿ ಇದೇ ಮೊದಲ ಬಾರಿಗೆ ಗ್ರಾಹಕರು ಭಾರತೀಯ ಭಾಷೆಗಳನ್ನು ಬಳಸಬಹುದಾಗಿದೆ. ಉದಾಹರಣೆಗೆ : ಹಿಂದಿಯಲ್ಲಿ ಇಮೇಲ್ ಐಡಿ : व्यक्ति@संगठन.भारत. ಇರಬಹುದಾಗಿದೆ.

ಆಂಡ್ರಾಯ್ಡ್, ಐಒಎಸ್ ನಲ್ಲಿ ಬಳಸುವ ಔಟ್ ಲುಕ್ ಅಪ್ಲಿಕೇಷನ್ ಗಳಿಗೂ ಈ ಸೌಲಭ್ಯ ಲಭ್ಯವಿದೆ. ಹಿಂದಿ, ಬೊಡೋ, ಡೊಂಗ್ರಿ, ಕೊಂಕಣಿ, ಮರಾಠಿ, ಮೈಥಿಲಿ, ನೇಪಾಳಿ, ಸಿಂಧಿ, ಬೆಂಗಾಲಿ, ಗುಜರಾತಿ, ಪಂಜಾಬಿ, ತಮಿಳು, ತೆಲುಗು, ಉರ್ದು ಭಾಷೆಯನ್ನು ಬೆಂಬಲಿಸಲಿವೆ.

ಈ 15 ಭಾಷೆಗಳು .IN registryಯಲ್ಲಿ ನೋಂದಾಯಿಸಲಾಗಿದೆ.ಭಾರತದಲ್ಲಿ ಸ್ಥಳೀಯ ಭಾಷೆಯ ಇಮೇಲ್ ವಿಳಾಸಗಳನ್ನು Internationalized Domain Names (IDNs) ನೋಂದಾಯಿಸಲು ಮೇಲ್ಕಂಡ ರಿಜಿಸ್ಟ್ರಿ ಅಧಿಕೃತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+