Today Gold Rate: ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಚಿನ್ನದ ಬೇಡಿಕೆಯಲ್ಲಿ ಶೇ.29ರಷ್ಟು ಕುಸಿತ, ಇಂದಿನ ದರಪಟ್ಟಿ ಇಲ್ಲಿದೆ
ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತಗಳು ಮುಂದುವರಿದಿವೆ. ಜಾಗತಿಕ ವಿದ್ಯಮಾನಗಳು, ಹಣದುಬ್ಬರ ಹಾಗೂ ದೇಶೀಯ ಮಾರುಕಟ್ಟೆಯ ಬೆಳವಣಿಗೆಗಳು ಲೋಹದ ಬೆಲೆಯ ಮೇಲೆ ನೇರ ಪರಿಣಾಮ ಬೀರುತ್ತಿವೆ.
ಗ್ರಾಹಕರು ಹಬ್ಬದ ಹಾಗೂ ಮುಂಬರುವ ಮದುವೆ ಸೀಸನ್‌ಗಾಗಿ ಖರೀದಿಗೆ ಮುಂದಾಗುತ್ತಿರುವ ಈ ಸಂದರ್ಭದಲ್ಲಿ, ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಹಾಗೂ MCX ಮಾರುಕಟ್ಟೆಯ ಇಂದಿನ (ನವೆಂಬರ್ 04, 2026) ನಿಖರ ದರದ ಸಂಪೂರ್ಣ ಮಾಹಿತಿ ಇಲ್ಲಿದೆ.

ಪಿಎಂ ಮೋದಿ ಕರೆ ಬೆನ್ನಲ್ಲೇ ಚಿನ್ನದ ಬೇಡಿಕೆ ಕುಸಿತ: WGC ವರದಿ
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ದೇಶದ ಜನತೆಯನ್ನುದ್ದೇಶಿಸಿ ಇನ್ನೂ ಒಂದು ವರ್ಷ ಚಿನ್ನ ಖರೀದಿಸಬೇಡಿ ಎಂದಿದ್ದರು. ಈ ಕರೆ ಬೆನ್ನಲ್ಲೇ ಭಾರತದಲ್ಲಿ ಚಿನ್ನದ ಬೇಡಿಕೆ ಶೇ.29 ಕುಸಿತ ಕಂಡಿರುವುದು ಮಾರುಕಟ್ಟೆಯಲ್ಲಿ ತೀವ್ರ ಸಂಚಲನ ಮೂಡಿಸಿದೆ.
ವಿಶ್ವ ಚಿನ್ನದ ಮಂಡಳಿ (WGC) ಬಿಡುಗಡೆ ಮಾಡಿರುವ ಹೊಸ ವರದಿಯ ಪ್ರಕಾರ, 2026ರಲ್ಲಿ ಭಾರತದ ಚಿನ್ನದ ಬೇಡಿಕೆ ಆರು ವರ್ಷಗಳ ಕನಿಷ್ಠ ಮಟ್ಟಕ್ಕೆ ತಲುಪುವ ನಿರೀಕ್ಷೆಯಿದೆ.
ಚೀನಾದ ನಂತರ ವಿಶ್ವದ ಅತಿ ದೊಡ್ಡ ಚಿನ್ನದ ಗ್ರಾಹಕ ದೇಶವಾಗಿರುವ ಭಾರತ, ಇರಾನ್ ಯುದ್ಧದ ಪರಿಣಾಮವಾಗಿ ಹೆಚ್ಚಿನ ಜೀವನ ವೆಚ್ಚವನ್ನ ಎದುರಿಸುತ್ತಿದೆ. ಡಬ್ಲ್ಯೂಜಿಸಿಯ ಭಾರತೀಯ ಕಾರ್ಯಾಚರಣೆಗಳ ಮುಖ್ಯಸ್ಥ ಸಚಿನ್ ಜೈನ್ ಅವರ ಪ್ರಕಾರ, ಈ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಆಭರಣ ಬೇಡಿಕೆ ಭಾರೀ ಕುಸಿದಿದ್ದು, ಒಟ್ಟು ಬೇಡಿಕೆ ಕೇವಲ 650 ಮೆಟ್ರಿಕ್ ಟನ್‌ಗಳಿಗೆ ಸೀಮಿತವಾಗುವ ಸಾಧ್ಯತೆಯಿದೆ. ಇದು 2020ರ ಕೋವಿಡ್-19 ಸಾಂಕ್ರಾಮಿಕದ ಬಳಿಕ ಕಂಡ ಅತ್ಯಂತ ಕನಿಷ್ಠ ಮಟ್ಟವಾಗಿದೆ.
ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ ವರ್ಷದಿಂದ ವರ್ಷಕ್ಕೆ ಶೇ.29 ರಷ್ಟು ಕುಸಿದು 162.5 ಮೆಟ್ರಿಕ್ ಟನ್‌ಗೆ ಇಳಿದಿದೆ. ಇದರಲ್ಲಿ ಆಭರಣ ಖರೀದಿ ಶೇ.20 ರಷ್ಟು ಇಳಿಕೆಯಾಗಿದ್ದರೆ, ಹೂಡಿಕೆ ಬೇಡಿಕೆ ಶೇ.40 ರಷ್ಟು ಕುಸಿದಿದೆ.
ಭಾರತದ ಚಿನ್ನದ ಬೇಡಿಕೆಯ ಅರ್ಧಕ್ಕಿಂತ ಹೆಚ್ಚಿನ ಪಾಲು ಗ್ರಾಮೀಣ ಪ್ರದೇಶಗಳಿಂದಲೇ ಬರುತ್ತದೆ. ಆದರೆ,ಈ ಬಾರಿ ಸರಿಯಾಗಿ ಮುಂಗಾರು ಮಳೆಯಾಗದ ಕಾರಣ ಗ್ರಾಮೀಣ ಆರ್ಥಿಕತೆ ಕುಗ್ಗಿದ್ದು, ಗಗನಕ್ಕೇರಿರುವ ಚಿನ್ನದ ಬೆಲೆಗಳು ಬೇಡಿಕೆಯನ್ನ ಮತ್ತಷ್ಟು ಮಿತಿಗೊಳಿಸಿವೆ.
ನಿನ್ನೆಯ ದರಕ್ಕೆ ಹೋಲಿಸಿದರೆ ಇಂದಿನ ಚಿನ್ನ, ಬೆಳ್ಳಿ ಬೆಲೆ
ನಿನ್ನೆ (ನವೆಂಬರ್ 3) ಹಾಗೂ ಇಂದಿನ (ನವೆಂಬರ್ 4) ಮಾರುಕಟ್ಟೆ ದರವನ್ನು ಹೋಲಿಕೆ ಮಾಡಿ ನೋಡಿದಾಗ, ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಏರಿಕೆ ಕಂಡುಬಂದಿದೆ. ನಿನ್ನೆ ಮಾರುಕಟ್ಟೆಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 12,800 ರೂಪಾಯಿ ಇತ್ತು. ಆದರೆ ಇಂದು ಪ್ರತಿ ಗ್ರಾಂ ಚಿನ್ನದ ಮೇಲೆ 25 ರೂಪಾಯಿ ಹೆಚ್ಚಳವಾಗಿದ್ದು, ದರ 12,825 ರೂಪಾಯಿಗೆ ತಲುಪಿದೆ. ಇನ್ನೂ 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 13,964 ರೂಪಾಯಿ ಇತ್ತು. ಆದರೆ ಇಂದು ಪ್ರತಿ ಗ್ರಾಂ ಚಿನ್ನದ ಮೇಲೆ 27 ರೂಪಾಯಿ ಹೆಚ್ಚಾಗಿ 13,991 ರೂಪಾಯಿಗೆ ತಲುಪಿದೆ.
ಅದೇ ರೀತಿ ಬೆಳ್ಳಿ ಬೆಲೆಯಲ್ಲೂ ಸಹ ಏರಿಳಿತಗಳಾಗಿದ್ದು, ಪ್ರಸ್ತುತ ಒಂದು ಕೆಜಿ ಬೆಳ್ಳಿಯ ದರವು ಅಂದಾಜು 1,80,000 ರೂಪಾಯಿಗಳ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ.
ವಿವಿಧ ನಗರಗಳಲ್ಲಿ ಇಂದಿನ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ಪಟ್ಟಿ
ದೇಶದ ಪ್ರಮುಖ ನಗರಗಳಲ್ಲಿ ಇಂದಿನ 22 ಕ್ಯಾರಟ್ 1 ಗ್ರಾಂ ಚಿನ್ನದ ನಿಖರ ಬೆಲೆ ಈ ಕೆಳಗಿನಂತಿದೆ:
* ಬೆಂಗಳೂರು - 12,825 ರೂಪಾಯಿ
* ದೆಹಲಿ - 12,840 ರೂಪಾಯಿ
* ಚೆನ್ನೈ - 12,950 ರೂಪಾಯಿ
* ಮುಂಬೈ - 12,825 ರೂಪಾಯಿ
* ಹೈದರಾಬಾದ್ - 12,825 ರೂಪಾಯಿ
* ಅಹಮದಾಬಾದ್ - 12,830 ರೂಪಾಯಿ
* ಪುಣೆ - 12,825 ರೂಪಾಯಿ
* ಕೋಲ್ಕತ್ತಾ - 12,825 ರೂಪಾಯಿ
ಗಮನಿಸಿ: ಈ ಮೇಲಿನ ದರಗಳೂ ಕೇವಲ ಮೂಲ ದರಗಳಾಗಿದ್ದು ಮೇಕಿಂಗ್ ಜಾರ್ಜ್ ಮತ್ತು ಸರ್ಕಾರದ ಜಿಎಸ್‌ಟಿ ತೆರಿಗೆಗಳು ಸೇರಿರುವುದಿಲ್ಲ.. ನೀವು ಚಿನ್ನ ಖರೀದಿಸಿದ ನಂತರ ಅಂತಿಮ ಬಿಲ್‌ನಲ್ಲಿ ದರಗಳು ಸ್ವಲ್ಪ ಹೆಚ್ಚಾಗುವ ಸಾಧ್ಯತೆ ಇರುತ್ತದೆ.


Click it and Unblock the Notifications
