Gold Rate Today: ಮತ್ತೆ ಏರಿಕೆಯಾಯ್ತಾ ಹಳದಿ ಲೋಹದ ಬೆಲೆ? ಇಂದಿನ ಚಿನ್ನ, ಬೆಳ್ಳಿ ದರ ಪಟ್ಟಿ ಇಲ್ಲಿದೆ
ಭಾರತೀಯರಿಗೆ ಪಾಲಿಗೆ ಚಿನ್ನ ಹಾಗೂ ಬೆಳ್ಳಿಗೆ ತನ್ನದೇ ಆದ ವಿಶೇಷ ಸ್ಥಾನವಿದೆ. ಇದು ಕೇವಲ ಆಭರಣವಾಗಿ ಮಾತ್ರವಲ್ಲದೆ, ಆರ್ಥಿಕ ಭದ್ರತೆ ಸಂಕೇತವೂ ಹೌದು. ಜಾಗತಿಕ ಮಾರುಕಟ್ಟೆಯ ಏರಿಳಿತಗಳಿಗೆ ಅನುಗುಣವಾಗಿ ಪ್ರತಿದಿನ ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಬದಲಾವಣೆಗಳಾಗುತ್ತಲೇ ಇರುತ್ತವೆ.
ಇಂದು, ಅಂದರೆ 2026ರ ಸೆಪ್ಟೆಂಬರ್ 25 ರಂದು ಎಂಸಿಎಕ್ಸ್ ಹಾಗೂ ರಿಟೇಲ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ ಕಂಡುಬಂದಿದ್ದು, ಆಭರಣ ಖರೀದಿಸುವವರಿಗೆ ಇದು ತುಸು ನಿರಾಸೆ ಮೂಡಿಸಿದೆ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
ಬೆಂಗಳೂರು ಮಾರುಕಟ್ಟೆಯಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆಯನ್ನು ಗಮನಿಸುವುದಾದರೆ, ದರದಲ್ಲಿ ಅಲ್ಪ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ಇಂದು 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 14,010 ರೂಪಾಯಿ ದಾಖಲಾಗಿದೆ. ಅದೇ ರೀತಿ ಸಂಪೂರ್ಣ ಶುದ್ಧ ಚಿನ್ನ ಎನಿಸಿಕೊಂಡಿರುವ 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 15,284 ರೂಪಾಯಿ ಇದೆ.
ಇನ್ನೂ ಬೆಳ್ಳಿ ಬೆಲೆಯನ್ನ ನೋಡುವುದಾದರೆ, ಇಂದು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ 245 ರೂಪಾಯಿಯಷ್ಟಿದ್ದು, 10 ಗ್ರಾಂಗೆ 2,450 ರೂಪಾಯಿ ಹಾಗೂ 100 ಗ್ರಾಂಗೆ 24,500 ರೂಪಾಯಿ ದರ ನಿಗದಿಯಾಗಿದೆ.
ನಿನ್ನೆಯ (ಸೆಪ್ಟೆಂಬರ್ 24) ದರಗಳಿಗೆ ಇಂದಿನ ಬೆಲೆಯನ್ನ ಹೋಲಿಕೆ ಮಾಡಿದರೆ, ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ನಿನ್ನೆ ಬೆಂಗಳೂರಿನಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 13,995 ರೂ. ಇತ್ತು. ಅದು ಇಂದು 15 ರೂ. ಏರಿಕೆಯಾಗಿ 14,010 ರೂಪಾಯಿಗೆ ತಲುಪಿದೆ. ಅದೇ ರೀತಿ, 24 ಕ್ಯಾರಟ್ 1 ಗ್ರಾಂ ಚಿನ್ನ ನಿನ್ನೆ 15,268 ರೂ. ಇತ್ತು, ಇಂದು 16 ರೂ. ಹೆಚ್ಚಳ ಕಂಡು 15,284 ರೂಪಾಯಿಗೆ ತಲುಪಿದೆ.
ಇನ್ನು ಬೆಳ್ಳಿಯ ಬೆಲೆಯಲ್ಲಿಯೂ ಕೊಂಚ ಬದಲಾವಣೆ ಕಂಡುಬಂದಿದ್ದು, ಮಾರುಕಟ್ಟೆಯಲ್ಲಿ ಹಬ್ಬದ ಸೀಸನ್‌ಗೂ ಮುನ್ನ ದರ ಏರಿಕೆ ಮುಂದುವರಿಯುವ ಲಕ್ಷಣಗಳು ಗೋಚರಿಸುತ್ತಿವೆ.
ದೇಶದ ಪ್ರಮುಖ ನಗರಗಳಲ್ಲಿ ಇಂದಿನ 22 ಕ್ಯಾರಟ್ 1 ಗ್ರಾಂ ಚಿನ್ನದ ನಿಖರವಾದ ಬೆಲೆ ಪಟ್ಟಿ ಈ ಕೆಳಗಿನಂತಿದೆ:
* ಬೆಂಗಳೂರು - 14,010 ರೂಪಾಯಿ
* ದೆಹಲಿ - 14,025 ರೂಪಾಯಿ
* ಚೆನ್ನೈ - 14,015 ರೂಪಾಯಿ
* ಮುಂಬೈ - 14,010 ರೂಪಾಯಿ
* ಹೈದರಾಬಾದ್ - 14,010 ರೂಪಾಯಿ
* ಅಹಮದಾಬಾದ್ - 14,015 ರೂಪಾಯಿ
* ಪುಣೆ - 14,010 ರೂಪಾಯಿ
* ಕೋಲ್ಕತ್ತಾ - 14,010 ರೂಪಾಯಿ
ನಿನ್ನೆಗೆ ಹೋಲಿಸಿದರೆ 22 ಕ್ಯಾರಟ್ ಚಿನ್ನದ ದರದಲ್ಲಿ 15 ರೂಪಾಯಿ ಏರಿಕೆಯಾಗಿದ್ದು, ಬೆಂಗಳೂರು, ಮುಂಬೈ, ಹೈದರಾಬಾದ್, ಪುಣೆ ಹಾಗೂ ಕೋಲ್ಕತ್ತಾದಂತಹ ಬಹುತೇಕ ನಗರಗಳಲ್ಲಿ 1 ಗ್ರಾಂಗೆ 14,010 ರೂ. ದರ ನಿಗದಿಯಾಗಿದೆ. ದೆಹಲಿ ಮತ್ತು ಚೆನ್ನೈನಲ್ಲಿ ದರ ಕೊಂಚ ಹೆಚ್ಚಿದೆ.
ಗಮನಿಸಿ: ನೀವು ಯಾವುದೇ ನಗರದಲ್ಲಿ ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸುವ ಮುನ್ನ ಅಲ್ಲಿನ ಸ್ಥಳೀಯ ಮಾರುಕಟ್ಟೆಯಲ್ಲಿನ ಜಿಎಸ್‌ಟಿ, ಮೇಕಿಂಗ್ ಚಾರ್ಜಸ್ ಸೇರಿ ಅಂತಿಮ ಬೆಲೆಯಲ್ಲಿ ಸ್ವಲ್ಪ ವ್ಯತ್ಯಾಸವಾಗುತ್ತದೆ.


Click it and Unblock the Notifications
