LPG: ಸೆಪ್ಟೆಂಬರ್‌ 1ರಿಂದ ಎಲ್‌ಪಿಜಿ ಸಿಲಿಂಡರ್ ದರ ಸೇರಿ ಹಲವು ನಿಯಮಗಳಲ್ಲಿ ಬದಲಾವಣೆ

New Rules: ಆಗಸ್ಟ್‌ ಮುಗಿದು ಸೆಪ್ಟೆಂಬರ್‌ ಎಂಟ್ರಿಗೆ ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಸೆಪ್ಟೆಂಬರ್‌ ತಿಂಗಳಿನಲ್ಲಿ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್ ದರ ಸೇರಿ ಹಲವು ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಹಾಗಾದ್ರೆ, ಯಾವೆಲ್ಲಾ ಹೊಸ ನಿಯಮಗಳು ಜಾರಿ ಆಗಲಿವೆ ಹಾಗೂ ಇದರಿಂದ ಪ್ರಯೋಜನಾವಾ ಅಥವಾ ಜನಸಾಮಾನ್ಯರಿಗೆ ತೊಂದರೆ ಆಗಲಿದ್ಯಾ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಸೆಪ್ಟೆಂಬರ್‌ 2025 ನಿಮ್ಮ ಮಾಸಿಕ ವೆಚ್ಚಗಳ ಮೇಲೆ ಪರಿಣಾಮ ಬೀರುವ ಹಲವಾರು ಆರ್ಥಿಕ ಬದಲಾವಣೆಗಳು ಆಗಲಿವೆ. ಕೆಲವೇ ದಿನಗಳಲ್ಕು ಸೆಪ್ಟೆಂಬರ್ ತಿಂಗಳು ಪ್ರಾರಂಭ ಆಗಲಿದೆ. ಸೆಪ್ಟೆಂಬರ್ 1, 2025ರಿಂದ ದೇಶದಲ್ಲಿ ಹಲವು ನಿಯಮಗಳು ಬದಲಾಗಳು ಆಗಲಿವೆ. ಬ್ಯಾಂಕಿಂಗ್ ನಿಯಮಗಳಿಂದ ಹಿದಿದು ಎಟಿಎಂವರೆಗೆ ಹಲವು ನಿಯಮಗಳು ಬದಲಾಗಲಿವೆ.

Major Financial Rule Changes from September 1 2025 Including LPG Cylinder Prices

ಎಬಿಐ ಹೊಸ ನಿಯಮಗಳು: ದೇಶದ ಅತಿದೊಡ್ಡ ಬ್ಯಾಂಕ್‌ಗಳಲ್ಲಿ ಒಂದಾಗಿರಯವ ಎಸ್‌ಬಿಐ ತನ್ನ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಹೊಸ ನಿಯಮವನ್ನ ಜಾರಿಗೆ ತರುವುದಾಗಿ ಘೋಷಿಸಿದೆ. ಸೆಪ್ಟೆಂಬರ್ 1, 2025ರಿಂದ, ಕೆಲವು ವಿಶೇಷ ಕಾರ್ಡ್‌ಗಳಲ್ಲಿ ದೊಡ್ಡ ಬದಲಾವಣೆಗಳಾಗಲಿವೆ. ಇದೀಗ ಡಿಜಿಟಲ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು, ವ್ಯಾಪಾರಿಗಳು ಮತ್ತು ಸರ್ಕಾರಿ ವಹಿವಾಟುಗಳಲ್ಲಿ ರಿವಾರ್ಡ್ ಪಾಯಿಂಟ್‌ಳು ಲಭ್ಯ ಇರುವುದಿಲ್ಲ.

ಪ್ಯಾನ್ ಕಾರ್ಡ್‌ಗೆ ಆಧಾರ್ ಕಡ್ಡಾಯ: ಸೆಪ್ಟೆಂಬರ್ 1 ರಿಂದ ಪ್ಯಾನ್ ಕಾರ್ಡ್ ಪಡೆಯಬೇಕೆಂದರೆ, ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ. ಅಲ್ಲದೆ, ಪ್ಯಾನ್ ಕಾರ್ಡ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಲು ಕೊನೆಯ ದಿನಾಂಕ ಡಿಸೆಂಬರ್ 31, 2025 ಆಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ನ ಹೊಸ ನಿಯಮ: ಸೆಪ್ಟೆಂಬರ್ 1ರಿಂದ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಇದೀಗ ಎಚ್‌ಡಿಎಫ್‌ಸಿ ಬಳಕೆದಾರರು ಮೂರನೇ ಬಾರಿ ಪಾವತಿ ಮಾಡಲು ಶೇಕಡ 1ರಷ್ಟು ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಯುಟಿಲಿಟಿ ಬಿಲ್ ಪಾವತಿಗೆ ಹಣ ಸಹ ಪಾವತಿ ಮಾಡಬೇಕಾಗುತ್ತದೆ.

ಐಸಿಐಸಿಐ ಎಟಿಎಂ ಹೊಸ ನಿಯಮಗಳು: ಸೆಪ್ಟೆಂಬರ್ 1ರಿಂದ ಐಸಿಐಸಿಐ ಬ್ಯಾಂಕ್‌ನ ಎಟಿಎಂಗೆ ಸಂಬಂಧಿಸಿದ ನಿಯಮಗಳು ಸಹ ಬದಲಾವಾಣೆಯಾಗಲಿವೆ. ಇದೀಗ ಗ್ರಾಹಕರು ಈ ಬ್ಯಾಂಕ್‌ನ ಎಟಿಎಂ ಅನ್ನು ಬಳಕೆ ಮಾಡುವುದು ದುಬಾರಿ ಆಗಲಿದೆ. ನೀವು ಮಿತಿಗಿಂತ ಹೆಚ್ಚಿನ ಹಣವನ್ನು ಹಿಂಪಡೆಯಬೇಕಾದರೆ ಈ ರೂಪಾಯಿಗೆ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.

ಐಸಿಐಸಿಐ ಕೇವಲ ಐದು ಉಚಿತ ವಹಿವಾಟುಗಳನ್ನ ನೀಡುತ್ತದೆ. ಮೆಟ್ರೋ ನಗರಗಳಲ್ಲಿ, ಈ ಮಿತಿಯನ್ನು ಕೇವಲ ಮೂರು ಬಾರಿ ಮಾತ್ರ ನೀಡಲಾಗಿದೆ. ನೀವು ಹೊಸ ನಿಯಮದ ಬಗ್ಗೆ ತಿಳಿದಿರಬೇಕು. ಇಲ್ಲದಿದ್ದರೆ, ತೊಂದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಎಲ್‌ಪಿಜಿ ಸಿಲಿಂಡರ್ ದರಗಳು: ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಇಂಧನ ಕಂಪನಿಗಳು ವಾಣಿಜ್ಯ ಸಿಲಿಂಡರ್ ದರವನ್ನು ಕಡೊತಗೊಳಿಸಿದ್ದವು. 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು ಸುಮಾರು 33.50 ರೂಪಾಗಳಷ್ಟು ಕಡಿಮೆ ಮಾಡಲಾಗಿತ್ತು. ಸೆಪ್ಟೆಂಬರ್ 1ರಿಂದ ದೇಶೀಯ ಎಲ್‌ಪಿಜಿ ಬೆಲೆ ಕಡಿತ ಆಗುವ ನಿರೀಕ್ಷೆಯಲ್ಲಿ ಗ್ರಾಹಕರಿದ್ದಾರೆ. ಈಗಾಗಲೇ ಎಲ್‌ಪಿಜಿ ಅಡುಗೆ ಸಿಲಿಂಡರ್ ದರವನ್ನು 50 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಇದು ಮುಂದಿನ ದಿನಗಳಲ್ಲಿ ಕಡಿಮೆಯಾಗುವ ನಿರೀಕ್ಷೆಯಲ್ಲಿ ಗ್ರಾಹಕರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+