ಮುಖೇಶ್ ಅಂಬಾನಿ ಹಿಂದಿಕ್ಕಿದ ಜಗತ್ತಿನ ಶ್ರೀಮಂತ ಮಹಿಳೆ ಮ್ಯಾಕೆಂಜಿ

ಮುಂಬೈ, ಏಪ್ರಿಲ್ 15: ಜಗತ್ತಿನ ಅತಿ ಶ್ರೀಮಂತ ವ್ಯಕ್ತಿ ಅಮೆಜಾನ್‌ ಸಂಸ್ಥಾಪಕ ಜೆಫ್ ಬೆಜೊಸ್ ಅವರ ಮಾಜಿ ಪತ್ನಿ ಮ್ಯಾಕೆಂಜಿ ಬೆಜೊಸ್, ಈಗ ಭಾರತದ ಅತಿ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿದ್ದಾರೆ.

ಬ್ಲೂಮ್‌ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ, ಮೆಕೆಂಜಿ ಬೆಜೊಸ್ ಅವರ ಆಸ್ತಿ ಈ ವರ್ಷ 8.2 ಬಿಲಿಯನ್ ಡಾಲರ್‌ನಿಂದ 45.3 ಬಿಲಿಯನ್ ಡಾಲರ್‌ಗೆ ಏರಿಕೆ ಕಂಡಿದೆ. ಈ ಮೂಲಕ ಜಗತ್ತಿನ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 18ನೇ ಸ್ಥಾನಕ್ಕೆ ಬಡ್ತಿ ಪಡೆದುಕೊಂಡಿದ್ದಾರೆ.

ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಮೆಕೆಂಜಿ ಬೆಜೊಸ್ ಅವರ ಏರಿಕೆ ನಂತರ ಮುಖೇಶ್ ಅಂಬಾನಿ ಒಂದು ಸ್ಥಾನ ಕುಸಿತ ಕಂಡಿದ್ದಾರೆ. 18ನೇ ಸ್ಥಾನದಿಂದ 19ನೇ ಸ್ಥಾನಕ್ಕೆ ಜಾರಿದ್ದಾರೆ.

Mackenzie Bezos Overtakes Mukesh Ambani In Net Worth

ವಿಶ್ವಾದ್ಯಂತ ಹಲವು ದೇಶಗಳಲ್ಲಿ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಮುಖೇಶ್ ಅಂಬಾನಿ 3.6 ಲಕ್ಷ ಕೋಟಿ ನಷ್ಟ ಅನುಭವಿಸಿದ್ದಾರೆ ಎಂದು ವರದಿಯಾಗಿತ್ತು. ಈ ನಷ್ಟ ಉಂಟಾದ ಹಿನ್ನೆಲೆ ಆದಾಯದಲ್ಲಿ ಇಳಿಕೆ ಕಂಡಿದೆ. ಇದು ವಿಶ್ವ ಮಟ್ಟದಲ್ಲಿ ಹಿನ್ನಡೆಯಾಗುವಂತೆ ಮಾಡಿದೆ.

ಅಂದ್ಹಾಗೆ, ಮೆಕೆಂಜಿ ಬೆಜೊಸ್ ಮತ್ತು ಅಮೆಜಾನ್‌ ಸಂಸ್ಥಾಪಕ ಜೆಫ್ ಬೆಜೊಸ್ ದಾಂಪತ್ಯ 2019ರಲ್ಲಿ ಮುರಿದು ಬಿದ್ದಿತ್ತು. ಜೆಫ್‌ನಿಂದ ವಿಚ್ಛೇದನ ಪಡೆದ ಬಳಿಕ, ಅಮೆಜಾನ್‌ನಲ್ಲಿ ಶೇಕಡಾ 4 ರಷ್ಟು ಪಾಲನ್ನು ಒಪ್ಪಂದದ ಪ್ರಕಾರ ಪತ್ನಿ ಬಿಟ್ಟುಕೊಟ್ಟಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+