ಲುಲು ಗ್ರೂಪ್ ಅಧ್ಯಕ್ಷ ಯೂಸುಫ್ ಅಲಿಗೆ ಇಡಿಯಿಂದ ಸಮನ್ಸ್

ಕೇರಳ ಮೂಲದ ಯುಎಇಯ ಬಿಲಿಯನೇರ್ ಯೂಸುಫ್‌ ಅಲಿ ಅವರನ್ನು ಮಾರ್ಚ್ 16 ರಂದು ಇಡಿ ವಿಚಾರಣೆಗೆ ಕರೆದಿದೆ.

ನವದೆಹಲಿ, ಮಾರ್ಚ್‌ 14: ವಡಕ್ಕಂಚೇರಿ ಲೈಫ್ ಮಿಷನ್ ವಸತಿ ಸಂಕೀರ್ಣ ಹಗರಣದಲ್ಲಿ ವಿದೇಶಿ ಕೊಡುಗೆ (ನಿಯಮಾವಳಿ) ಕಾಯಿದೆಯ ಉಲ್ಲಂಘನೆಯ ಆರೋಪದ ತನಿಖೆಗೆ ಸಂಬಂಧಿಸಿದಂತೆ ಲುಲು ಗ್ರೂಪ್ ಇಂಟರ್‌ನ್ಯಾಶನಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷ ಎಂ.ಎ. ಯೂಸುಫ್ ಅಲಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಕರೆದಿದೆ.

ಕೇರಳ ಮೂಲದ ಯುಎಇಯ ಬಿಲಿಯನೇರ್ ಯೂಸುಫ್‌ ಅಲಿ ಅವರನ್ನು ಮಾರ್ಚ್ 16 ರಂದು ಇಡಿ ವಿಚಾರಣೆಗೆ ಕರೆದಿದೆ. ಇಡಿ ಮೂಲಗಳ ಪ್ರಕಾರ ಈ ಹಿಂದೆ ಅಲಿ ಅವರನ್ನು ಮಾರ್ಚ್ 1 ರಂದು ಕರೆಯಲಾಗಿತ್ತು ಆದರೆ ಇಡಿ ಕಚೇರಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಯೂಸುಫ್‌ ಅಲಿ ಅವರ ಲುಲು ಗ್ರೂಪ್ ವಿಶ್ವಾದ್ಯಂತ ಲುಲು ಹೈಪರ್‌ಮಾರ್ಕೆಟ್‌ಗಳು ಮತ್ತು ಲುಲು ಶಾಪಿಂಗ್ ಮಾಲ್‌ಗಳಿಗೆ ಹೆಸರುವಾಸಿಯಾಗಿದೆ.

Lulu Group chairman Yusuf Ali summoned by ED

ಲೈಫ್ ಮಿಷನ್ ಹಗರಣಕ್ಕೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರನ್ನು ಶನಿವಾರ ಇಡಿ ಬಂಧಿಸಿದ್ದು, ನಂತರ ಕೊಚ್ಚಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಲೈಫ್ ಮಿಷನ್ ಹಗರಣವು ತ್ರಿಶೂರ್‌ನ ವಡಕ್ಕಂಚೇರಿ ಪಟ್ಟಣದಲ್ಲಿ ಸರ್ಕಾರದ ಪ್ರಮುಖ ವಸತಿ ಯೋಜನೆಯ ಬಿಲ್ಡರ್‌ಗಳಿಂದ ಪಡೆದ ಲಂಚಕ್ಕೆ ಸಂಬಂಧಿಸಿದೆ.

ಯುಎಇ ಕಾನ್ಸುಲೇಟ್ ಮೂಲಕ ರೆಡ್ ಕ್ರೆಸೆಂಟ್ ನೀಡಿದ 20 ಕೋಟಿ ರೂ.ಗಳಲ್ಲಿ 14.50 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಪ್ರದೇಶದಲ್ಲಿ 140 ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿಕೊಡಬೇಕಿತ್ತು. 2020 ರಲ್ಲಿ ಕೊಚ್ಚಿ ನ್ಯಾಯಾಲಯದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಬಿ ಮತ್ತು ಎಫ್‌ಸಿಆರ್‌ಎ ಸೆಕ್ಷನ್ 35 ರ ಅಡಿಯಲ್ಲಿ ಆಗಿನ ಕಾಂಗ್ರೆಸ್ ಶಾಸಕ ಅನಿಲ್ ಅಕ್ಕರ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿದ ಸಿಬಿಐ, ಯುನಿಟಾಕ್ ಬಿಲ್ಡರ್‌ನ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಈಪ್ಪನ್ ಅವರನ್ನು ಮೊದಲ ಆರೋಪಿಯನ್ನಾಗಿ ಪಟ್ಟಿ ಮಾಡಿತ್ತು. ಮತ್ತು ಸೇನ್ ವೆಂಚರ್ಸ್ ಎರಡನೇ ಆರೋಪಿ.

ಲೈಫ್ ಮಿಷನ್ ಯೋಜನೆಗೆ 20 ಕೋಟಿ ರೂಪಾಯಿ ನೀಡಲು ಒಪ್ಪಿಕೊಂಡಿದ್ದ ಅಂತರರಾಷ್ಟ್ರೀಯ ಮಾನವೀಯ ಆಂದೋಲನ ರೆಡ್ ಕ್ರೆಸೆಂಟ್ ಅವರೊಂದಿಗೆ ಮಾಡಿಕೊಂಡ ಒಪ್ಪಂದದ ಆಧಾರದ ಮೇಲೆ ಎರಡು ಕಂಪನಿಗಳು ನಿರ್ಮಾಣವನ್ನು ಕೈಗೆತ್ತಿಕೊಂಡಿವೆ. ರೆಡ್ ಕ್ರೆಸೆಂಟ್ ಗುತ್ತಿಗೆದಾರರ ಆಯ್ಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ.

Lulu Group chairman Yusuf Ali summoned by ED

ಆದಾಗ್ಯೂ, ರೆಡ್ ಕ್ರೆಸೆಂಟ್ ತಮ್ಮೊಂದಿಗೆ ಮಾಡಿಕೊಂಡ ಒಪ್ಪಂದದ ಆಧಾರದ ಮೇಲೆ ಯುನಿಟಾಕ್ ಮತ್ತು ಸೇನ್ ವೆಂಚರ್ಸ್ ನಿರ್ಮಾಣವನ್ನು ಕೈಗೊಂಡಿದೆ ಮತ್ತು ವಿದೇಶಿ ಏಜೆನ್ಸಿಯಾದ ರೆಡ್ ಕ್ರೆಸೆಂಟ್‌ನಿಂದ ವಿದೇಶಿ ಕೊಡುಗೆಗಳನ್ನು ನೇರವಾಗಿ ಸ್ವೀಕರಿಸಿದೆ ಎಂದು ಲೈಫ್ ಮಿಷನ್ ಸಿಇಒ ನ್ಯಾಯಾಲಯದ ಮುಂದೆ ಸಲ್ಲಿಸಿದ್ದರು. ರೆಡ್ ಕ್ರೆಸೆಂಟ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ಕಂಪನಿಗಳು ಎಫ್‌ಸಿಆರ್‌ಎ ಸೆಕ್ಷನ್ 3 ರ ಪ್ರಕಾರ ಯಾವುದೇ ವಿದೇಶಿ ಕೊಡುಗೆಯನ್ನು ಸ್ವೀಕರಿಸದಂತೆ ನಿಷೇಧಿಸಲಾದ ವ್ಯಕ್ತಿಗಳ ವರ್ಗಗಳ ಅಡಿಯಲ್ಲಿ ಬರುವುದಿಲ್ಲ ಎಂದು ಸಿಇಒ ವಾದಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+