LPG Price: ಎಲ್‌ಪಿಜಿ ಸಿಲಿಂಡರ್ ದರ ಇಳಿಕೆ; ಪ್ರಮುಖ ನಗರವಾರು ದರ ಪಟ್ಟಿ ಇಲ್ಲಿದೆ
LPG Price: ದೇಶದಲ್ಲಿ ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನ ವಾಣಿಜ್ಯ ಸಿಲಿಂಡರ್ ದರವನ್ನು ಪರಿಷ್ಕರಣೆ ಮಾಡುತ್ತಿರುತ್ತವೆ. ಹಾಗೆಯೇ ಇದೀಗ ಮೇ ತಿಂಗಳ ಆರಂಭದಲ್ಲೇ ದರ ಇಳಿಕೆ ಮಾಡುವ ಮೂಲಕ ಗುಡ್ ನ್ಯೂಸ್ ನೀಡಿವೆ. ಹಾಗಾದ್ರೆ ಎಷ್ಟು ಇಳಿಕೆಯಾಗಿದೆ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈಗಾಗಲೇ ಕಳೆದ ತಿಂಗಳು ಗೃಹ ಬಳಕೆ ಎಲ್‌ಪಿಜಿ ದರ ಏರಿಕೆ ಮಾಡಿ ತೈಲ ಕಂಪನಿಗಳು ಜನರಿಗೆ ಶಾಕ್ ನೀಡಿದ್ದವು. ಹೀಗೆ ಬೆಲೆ ಏರಿಕೆ ಬಿಸಿಯಿಂದ ಬೇಸತ್ತಿದ್ದ ದೇಶದ ಜನರಿಗೆ ತೈಲ ಕಂಪನಿಗಳು ಎಲ್‌ಪಿಜಿ ದರ ಇಳಿಕೆ ಮಾಡುವ ಮೂಲಕ ಸಂತಸ ತಂದಿವೆ. 19 ಕೆಜಿ ಎಲ್‌ಪಿಜಿ ಸಿಲಿಂಡರ್ ದರ ಇಳಿಕೆಯಾಗಿದೆ.

ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು ಆಯಾ ಪ್ರದೇಶಗಳಿಗೆ ಅನುಗುಣವಾಗಿ ಸುಮಾರು ವಾಣಿಜ್ಯ ಸಿಲಿಂಡರ್ ದರವನ್ನು 14.5 ರೂಪಾಯಿಯಿಂದ 17 ರೂಪಾಯಿವರೆಗೆ ಇಳಿಕೆಯಾಗಿದೆ. 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಬೆಂಗಳೂರಲ್ಲಿ 1769.50 ರೂಪಾಯಿ, ಚೆನ್ನೈನಲ್ಲಿ 1,900 ರೂಪಾಯಿ, ಮುಂಬೈ 1,700 ರೂಪಾಯಿ, ನವದೆಹಲಿ 1,747 ರೂಪಾಯಿ, ಕೋಲ್ಕತ್ತಾದಲ್ಲಿ 1,851.50 ರೂಪಾಯಿ ಆಗಿದೆ.
ಪ್ರಮುಖ ನಗರಗಳಲ್ಲಿ ಎಲ್‌ಪಿಜಿ ಸಿಲಿಂಡರ್ ದರ
* ಬೆಂಗಳೂರು - 1769.50 ರೂಪಾಯಿ
* ಚೆನ್ನೈ - 1,900 ರೂಪಾಯಿ
* ಮುಂಬೈ - 1,700 ರೂಪಾಯಿ
* ನವದೆಹಲಿ - 1,747 ರೂಪಾಯಿ
* ಕೋಲ್ಕತ್ತಾ - 1,851.50 ರೂಪಾಯಿ
ಹೀಗೆ ಮೇ 1ರಂದು ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಸಿಲಿಂಡರ್ ದರವನ್ನು 14.5 ರೂಪಾಯಿಗಳಷ್ಟು ಕಡಿಮೆ ಮಾಡಿದೆ.ಹೆಚ್ಚಿನ ಪರಿಹಾರವನ್ನು ನೀಡಿವೆ. ಬೆಲೆ ಇಳಿಕೆಯ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1747.50 ರೂಪಾಯಿಗೆ ಇಳಿಕೆಯಾಗಿದೆ. ಆದರೆ ಇದಕ್ಕು ಮೊದಲು ಇಲ್ಲಿ 1762 ರೂಪಾಯಿ ಇತ್ತು.
ಇನ್ನು ಕಳೆದ ತಿಂಗಳಿ ಅಂದರೆ ಏಪ್ರಿಲ್ 8ರಂದು ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ 803-853 ರೂಪಾಯಿಗೆ ಏರಿಕೆ ಆಗಿತ್ತು. ಇನ್ನು ಉಜ್ವಲ್ ಸ್ಕೀಂ ಅಡಿಯಲ್ಲಿ ಬರುವ ಸಿಲಿಂಡರ್ ಬೆಲೆ 503-553 ರೂಪಾಯಿಗೆ ಏರಿಕೆಯಾಗಿತ್ತು. ಈ ಬಾರಿ ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಪ್ರಸ್ತುತ ದೇಶದಲ್ಲಿ 32.9 ಕೋಟಿ ಎಲ್‌ಪಿಜಿ ಸಂಪರ್ಕಗಳಿವೆ. ಈ ಪೈಕಿ 10.33 ಕೋಟಿ ಗ್ರಾಹಕರು ಉಜ್ವಲ ಯೋಜನೆ ಫಲಾನುಭವಿಗಳಾಗಿದ್ದಾರೆ. ಇದರ ಯೋಜನೆ ಅಡಿಯಲ್ಲಿ ಬಡವರಿಗೆ ಪ್ರತಿ ಸಿಲಿಂಡರ್‌ಗೆ 300 ರೂಪಾಯಿ ಸಬ್ಸಿಡಿ ಸಿಗುತ್ತದೆ. ತಮಿಳುನಾಡು ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳಲ್ಲಿ, ರಾಜ್ಯ ಸರ್ಕಾರದ ಯೋಜನೆಯ ಹಿನ್ನೆಲೆ ಉಜ್ವಲ ಯೋಜನೆಯ ಶೇಕಡ 10ರಷ್ಟು ಫಲಾನುಭವಿಗಳು ಇದ್ದಾರೆ. ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯಲ್ಲಿ ಏಪ್ರಿಲ್ 2022ರಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಆಗಿತ್ತು. ಏಪ್ರಿಲ್ 1, 2022 ರಂದು, ಸಿಲಿಂಡರ್‌ನ ಬೆಲೆ 249.50 ರೂಪಾಯಿಗಳಿಂದ 268.50 ರೂಪಾಯಿಗಳಿಗೆ ಏರಿಕೆ ಆಗಿತ್ತು. ಆ ವೇಳೆ ಅದರ ಬೆಲೆ ಪ್ರತಿ ಸಿಲಿಂಡರ್‌ಗೆ 2,406 ರೂಪಾಯಿ ತಲುಪಿತ್ತು.












Click it and Unblock the Notifications