LPG Price Cut: ಹೊಸವರ್ಷಕ್ಕೂ ಮುನ್ನ ಡಿಸೆಂಬರ್ 1ರಂದೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ ಇಳಿಕೆ: ಇಲ್ಲಿದೆ ವಿವರ
LPG Price Cut: ಇಂಧನ ಕಂಪನಿಗಳು ಪ್ರತಿ ತಿಂಗಳ ಆರಂಭದಲ್ಲಿ ಎಲ್‌ಪಿಜಿ ಸಿಲಿಂಡರ್ ದರವನ್ನು ಪರಿಷ್ಕರಣೆ ಮಾಡುತ್ತಲಿರುತ್ತವೆ. ಇದೀಗ ಇಂದು (ಡಿಸೆಂಬರ್ 1) ದರವನ್ನು ಇಳಿಕೆ ಮಾಡಲಾಗಿದೆ. ಹಾಗಾದ್ರೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಪ್ರತಿ ತಿಂಗಳ ಮೊದಲ ದಿನದಂದು ಪರಿಷ್ಕರಣೆ ಮಾಡಲಾಗುತ್ತದೆ. ಇದೀಗ ಇಂದು (ಡಿಸೆಂಬರ್ 1) ಬೆಲೆಯನ್ನು ಭರ್ಜರಿ ಇಳಿಕೆ ಮಾಡಲಾಗಿದೆ. ಆದರೆ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅದೇ ಹಳೇ ದರ ಮುಂದುವರೆದಿದೆ.

ಡಿಸೆಂಬರ್ ತಿಂಗಳು ಆರಂಭದಲ್ಲೇ ತೈಲ ಮಾರಾಟ ಕಂಪನಿಗಳು ವಾಣಿಜ್ಯ ಸಿಲಿಂಡರ್ ಹೊಸ ದರಗಳನ್ನು ಬಿಡುಗಡೆ ಮಾಡಿದದೆ. ಆದರೆ, ಗೃಹಬಳಕೆ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿಲ್ಲ. ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ದರದಲ್ಲಿ 10 ರೂಪಾಯಿ ಇಳಿಕೆಯಾಗಿದೆ. ಹಾಗಾದ್ರೆ ಯಾವ್ಯಾವ ನಗರದಲ್ಲಿ ದರ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ವಾಣಿಜ್ಯ ಬಳಕೆಯ (19 ಕೆ.ಜಿ) ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 10 ರೂಪಾಯಿ ಇಳಿಕೆ ಮಾಡಲಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಶನ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಈ ದರವು ದೇಶದಾದ್ಯಂತ ಇಂದಿನಿಂದ ಅನ್ವಯ ಆಗಿದೆ. ಇನ್ನೂ ನವೆಂಬರ್‌ನಲ್ಲಿ 5 ರೂಪಾಯಿ ಇಳಿಕೆಯಾದ್ರೆ, ಅಕ್ಟೋಬರ್‌ನಲ್ಲಿ 16 ರೂಪಾಯಿ ಹೆಚ್ಚಳ ಆಗಿತ್ತು. ಸೆಪ್ಟೆಂಬರ್‌ನಲ್ಲಿ 51 ರೂಪಾಯಿ ಇಳಿಕೆಯಾಗಿತ್ತಯ.
ಪ್ರಮುಖ ನಗರಗಳಲ್ಲಿ ವಾಣಿಜ್ಯ (19 ಕೆ.ಜಿ.) ಸಿಲಿಂಡರ್ ದರಗಳು
* ಬೆಂಗಳೂರು - 1,654 ರೂಪಾಯಿ (ಹಿಂದಿನ ದರ 1,664.50)
* ನವದೆಹಲಿ - 1,580.50 ರೂಪಾಯಿ (ಹಿಂದಿನ ದರ 1590.50 ರೂಪಾಯಿ)
* ಕೋಲ್ಕತ್ತಾ - 1,684 ರೂಪಾಯಿ (ಹಿಂದಿನ ದರ 1,694 ರೂಪಾಯಿ)
* ಮುಂಬೈ - 1,531 ರೂಪಾಯಿ (ಹಿಂದಿನ ದರ 1,541 ರೂಪಾಯಿ)
* ಚೆನ್ನೈ - 1,739.50 ರೂಪಾಯಿ (ಹಿಂದಿನ ದರ 1,749.50 ರೂಪಾಯಿ)
ಇನ್ನೂ ಜನಸಾಮಾನ್ಯರು ಜನರು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಇಳಿಕೆಯಾಗುತ್ತದೆ ಎನ್ನುವ ಭರವಸೆ ಸುಳ್ಳದಂತಾಗಿದೆ. ಈ 14.2 ಕೆ.ಜಿ. ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ತೈಲ ಕಂಪನಿಗಳು ತಿಳಿಸಿವೆ. ಇದೇ ದರಗಳು ಮುಂದುವರೆದಿದ್ದು, ಯಾವುದೇ ಹೆಚ್ಚಳ ಅಥವಾ ಇಳಿಕೆಯಾಗಿಲ್ಲ. ಹಾಗಾದ್ರೆ ಯಾವ ನಗರಗಳಲ್ಲಿ ದರ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಪ್ರಮುಖ ನಗರಗಳಲ್ಲಿ (14.2 ಕೆ.ಜಿ.) ಗೃಹಬಳಕೆ ಎಲ್‌ಪಿಜಿ ದರಗಳು
* ಬೆಂಗಳೂರು - 855.50 ರೂಪಾಯಿ
* ದೆಹಲಿ - 853 ರೂಪಾಯಿ
* ಮುಂಬೈ - 852.50 ರೂಪಾಯಿ
* ಲಕ್ನೋ - 890.50 ರೂಪಾಯಿ
* ಹೈದರಾಬಾದ್ - 905 ರೂಪಾಯಿ
* ಪಾಟ್ನಾ - 951 ರೂಪಾಯಿ












Click it and Unblock the Notifications