LPG: ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ವಿಮೆ ಕುರಿತು ಮಹತ್ವದ ಮಾಹಿತಿ
LPG Insurance Policy: ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣಗಳು ಹೆಚ್ಚಾಗುತ್ತಲಿವೆ. ಆದರೆ, ಇದಕ್ಕೂ ಕೂಡ ವಿಮೆ ಪಡೆಯಬಹುದು ಎಂಬ ಮಾಹಿತಿ ಹಲವರಿಗೆ ಗೊತ್ತಿರುವುದಿಲ್ಲ. ಹಾಗಾದ್ರೆ, ಈ ಪ್ರಯೋಜನ ಪಡೆಯುವುದು ಹೇಗೆ? ಯಾರೆಲ್ಲಾ ಅರ್ಹರು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಗ್ಯಾಸ್ ಸಿಲಿಂಡರ್ ಸ್ಫೋಟಕ್ಕೆ ಒಳಗಾದವು ವಿಮಾ ಸೌಲಭ್ಯವನ್ನು ಪಡಯದಬಹುದು. ಎಷ್ಟೇ ಮುನ್ನೆಚ್ಚರಿಕೆಗಳನ್ನು ವಹಿಸಿದರೂ ಕೂಡ ಕೆಲವೊಮ್ಮೆ ಮನೆಯಲ್ಲಿನ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಅಪಘಾತ ಸಂಭವಿಸಬಹುದು. ಇಂತಹ ಘಟನೆಗಳಿಗೆ ಕಾರಣಗಳು ಕೂಡ ಇರುತ್ತವೆ. ಯಾವುದೋ ಖಾಸಗಿ ಕಂಪನಿಯ ಸಿಲಿಂಡರ್ ಬಳಕೆ ಮಾಡಿದರೆ ಅವುಗಳಿಗೆ ಯಾವುದೇ ವಾರಂಟಿ, ಗ್ಯಾರಂಟಿಗಳು ಇರುವುದಿಲ್ಲ. ಇದಕ್ಕೂ ಹೆಚ್ಚಾಗಿ ಇವುಗಳಿಂದ ಅಪಾಯ ಹೆಚ್ಚಿರುತ್ತದೆ.

ಇನ್ನೂ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡರೆ, ವಿಮೆ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಈ ಸೇವೆ ಸಂಪೂರ್ಣವಾಗಿ ಉಚಿತವಾಗಿದೆ. ಈ ಮಾಹಿತಿ ಗೊತ್ತಿಲ್ಲದೆ, ಕ್ಲೈಮ್‌ಗಳನ್ನು ಸಲ್ಲಿಸದೆ ಜನರು ತಮಗೆ ಬರಬೇಕಾದ ಹಣವನ್ನು ಪಡೆಯಲು ಸಾಧ್ಯ ಆಗುತ್ತಿಲ್ಲ. ಹಾಗಾದ್ರೆ, ಸಿಲಿಂಡರ್ ಸ್ಫೋಟದಿಂದ ಅಪಘಾತ ಸಂಭವಿಸಿದರೆ, ಕ್ಲೈಮ್ ಅನ್ನು ಹೇಗೆ ಸಲ್ಲಿಕೆ ಮಾಡುವುದು ಹಾಗೂ ಎಷ್ಟು ಹಣವನ್ನು ಪಡೆಯಬಹುದು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಎಲ್‌ಪಿಜಿ ಸಂಬಂಧಿತ ಅಪಘಾತಗಳಿಗೆ ಒಳಗಾದವರಿಗೆ ತಕ್ಷಣದ ಪರಿಹಾರವನ್ನು ಒದಗಿಸಲು, ತೈಲ ಮಾರುಕಟ್ಟೆ ಕಂಪನಿಗಳು ನಾಗರಿಕ ಹೊಣೆಗಾರಿಕೆ ನೀತಿಗಾಗಿ ತೈಲ ಉದ್ಯಮದ ಅಡಿಯಲ್ಲಿ ಸಮಗ್ರ ವಿಮಾ ಪಾಲಿಸಿಗಳನ್ನು ನೀಡುತ್ತಿವೆ. ಈ ವಿಮೆ ಒಎಂಸಿಗಳಲ್ಲಿ ನೋಂದಾಣಿ ಮಾಡಲಾದ ಎಲ್ಲಾ ಎಲ್‌ಪಿಜಿ ಗ್ರಾಹಕರಿಗೆ ಅನ್ವಯ ಆಗುತ್ತದೆ.
ಬೆಂಕಿಯ ಪ್ರಾಥಮಿಕ ಕಾರಣದಿಂದ ಎಲ್‌ಪಿಜಿ ಆಗಿರುವ ಸಂದರ್ಭಗಳಲ್ಲಿ ಮಾತ್ರ ಈ ಸಾರ್ವಜನಿಕ ಹೊಣೆಗಾರಿಕೆ ವಿಮಾ ಪಾಲಿಸಿ ಅನ್ವಯ ಆಗುತ್ತದೆ. ಆದರೆ, ಬೇರೆ ಯಾವುದೇ ಕಾರಣದಿಂದ ಬೆಂಕಿ ಹೊತ್ತಿಕೊಂಡು ಎಲ್‌ಪಿಜಿ ಸಿಲಿಂಡರ್ ಬೆಂಕಿಯಲ್ಲಿ ಸ್ಫೋಟಗೊಂಡರೆ, ಈ ವಿಮಾ ಪಾಲಿಸಿ ಅನ್ವಯ ಆಗುವುದಿಲ್ಲ.
ವಿಮಾ ಮೊತ್ತದ ವಿವರ: ಈ ವಿಮಾ ಪಾಲಿಸಿಯು ವಿವಿಧ ರೀತಿಯ ನಷ್ಟಗಳಿಗೆ ಪರಿಹಾರವನ್ನು ಒದಗಿಸುತ್ತದೆ. ಸಾವಿನ ಸಮಯದಲ್ಲಿ ಪ್ರತಿ ವ್ಯಕ್ತಿಗೆ 600,000 ರೂಪಾಯಿ ವರೆಗಿನ ವೈಯಕ್ತಿಕ ಅಪಘಾತ ರಕ್ಷಣೆಯನ್ನು ಒದಗಿಸಲಾಗುತ್ತದೆ. ಗಾಯ, ಚಿಕಿತ್ಸೆ ಮತ್ತು ವೈದ್ಯಕೀಯ ವೆಚ್ಚಗಳ ಸಂದರ್ಭದಲ್ಲಿ, ಪ್ರತಿ ವ್ಯಕ್ತಿಗೆ 200,000 ರೂಪಾಯಿವರೆಗೆ ರಕ್ಷಣೆ ನೀಡಲಾಗುತ್ತದೆ. ಆದರೆ ಒಂದೇ ಅಪಘಾತಕ್ಕೆ ಒಟ್ಟು ವೈದ್ಯಕೀಯ ವಿಮಾ ಮಿತಿ 3000,000 ರೂಪಾಯಿವರೆಗೆ ಇರುತ್ತದೆ.
ಮನೆಯಲ್ಲಿ ಬೆಂಕಿ ಅಥವಾ ಆಸ್ತಿ ಹಾನಿಯ ಸಂದರ್ಭದಲ್ಲಿ, ಗ್ರಾಹಕರ ನೋಂದಾಯಿತ ವಿಳಾಸದಲ್ಲಿ 200,000 ರೂಪಾಯಿವರೆಗೆ ಪರಿಹಾರವನ್ನು ನೀಡಲಾಗುತ್ತದೆ. ಈ ವಿಮಾ ಮೊತ್ತವು ಗ್ರಾಹಕರಿಗೆ ಯಾವುದೇ ಹೆಚ್ಚುವರಿ ವೆಚ್ಚಇಲ್ಲದೆ ಲಭ್ಯವಿದೆ. ಏಕೆಂದರೆ ಪ್ರೀಮಿಯಂ ಅನ್ನು ತೈಲ ಕಂಪನಿಗಳು ಪಾವತಿ ಮಾಡುತ್ತವೆ.
ಯಾವೆಲ್ಲಾ ಕಂಪನಿಗಳಿಂದ ವಿಮಾ ಸೌಲಭ್ಯ?
* HP Gas
* Indane
* Bharat Gas
ನಿಮ್ಮ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸಂಬಂಧಿತ ಅಪಘಾತ ಸಂಭವಿಸಿದಲ್ಲಿ, ನೀವು ಮೊದಲು ಹತ್ತಿರದ ಪೊಲೀಸ್ ಠಾಣೆಗೆ ದೂರು ಸಲ್ಲಿಕೆ ಮಾಡಬೇಕು. ಘಟನೆಯ ಬಗ್ಗೆ ನೀವು ನಿಮ್ಮ ಎಲ್‌ಪಿಜಿ ವಿತರಕರಿಗೆ ತಿಳಿಸಬೇಕು. ಬಳಿಕ ಗ್ಯಾಸ್ ಕಂಪನಿಯು ಘಟನೆಯ ತನಿಖೆ ನಡೆಸುತ್ತದೆ. ಎಲ್‌ಪಿಜಿ ಸಿಲಿಂಡರ್ ಅಥವಾ ಅನುಸ್ಥಾಪನೆಯಿಂದ ಬೆಂಕಿ ಅಥವಾ ಸ್ಫೋಟ ಸಂಭವಿಸಿದೆ ಎಂದು ತನಿಖೆಯು ಸಾಬೀತುಪಡಿಸಿದರೆ, ಕಂಪನಿಯು ವಿಮಾ ಕಂಪನಿಗೆ ತಿಳಿಸುತ್ತದೆ.
ಬೇಕಾಗುವ ದಾಖಲೆಗಳು: ಕ್ಲೇಮ್‌ಗಳಿಗೆ ಪೊಲೀಸ್ ಎಫ್‌ಐಆರ್‌ನ ಪ್ರತಿ, ವೈದ್ಯಕೀಯ ಬಿಲ್‌ಗಳು, ವೈದ್ಯರ ಪ್ರಿಸ್ಕ್ರಿಪ್ಷನ್, ಆಸ್ಪತ್ರೆಯ ಡಿಸ್ಚಾರ್ಜ್ ಸ್ಲಿಪ್, ಸಾವಿನ ಸಂದರ್ಭದಲ್ಲಿ ಮರಣ ಪ್ರಮಾಣಪತ್ರ, ಮರಣೋತ್ತರ ವರದಿ, ಆಸ್ತಿ ಹಾನಿಯ ಛಾಯಾಚಿತ್ರಗಳನ್ನು ನೀಡಬೇಕಾಗುತ್ತದೆ. ತೈಲ ಕಂಪನಿಯು ವಿಮಾ ಕಂಪನಿಯ ಸಹಯೋಗದೊಂದಿಗೆ ಕ್ಲೇಮ್ ಅನ್ನು ಪ್ರಕ್ರಿಯೆಗೊಳಿಸುತ್ತದೆ ಮತ್ತು ನಿಯಮಗಳ ಪ್ರಕಾರ, ಪರಿಹಾರವನ್ನು ನೇರವಾಗಿ ವಿತರಣೆ ಮಾಡಲಾಗುತ್ತದೆ.
ಸ್ಫೋಟದ ಬಗ್ಗೆ ತಕ್ಷಣ ಯಾರಿಗೆ ತಿಳಿಸಬೇಕು?
* LPG ಡೀಲರ್
* ಪೊಲೀಸರು
* ವಿಮೆ ಪ್ರತಿನಿಧಿ
* ಸ್ಥಳೀಯ ಅಧಿಕಾರಿಗಳು
ಯಾರಿಗೆ ಈ ಸೌಲಭ್ಯ ಸಿಗುವುದಿಲ್ಲ?
* ನಕಲಿ ಸಿಲಿಂಡರ್ ಬಳಕೆ
* ಅಕ್ರಮ ಗ್ಯಾಸ್ ಸಂಪರ್ಕ
* ಬೇರೆ ಮೂಲದ ಗ್ಯಾಸ್ ಬಳಕೆ
* ಉದ್ದೇಶಪೂರ್ವಕ ಹಾನಿ












Click it and Unblock the Notifications