ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಯಾನ್-ಆಧಾರ್ ಕಾರ್ಡ್ ಇನ್ನೂ ಲಿಂಕ್ ಮಾಡಿಲ್ಲವಾ? ವಿಸ್ತೃತ ಅವಧಿ, ದಂಡದ ಮೊತ್ತ ಇತ್ಯಾದಿ ವಿವರ

|
Google Oneindia Kannada News

ಬೆಂಗಳೂರು, ಏ. 9: ನಮ್ಮ ದೇಶದ ನಾಗರಿಕರಿಗೆ ನೀಡಲಾಗುವ ಮಹತ್ವದ ದಾಖಲೆಗಳ ಪೈಕಿ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಸೇರಿವೆ. ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ಕೇಂದ್ರ ಸರಕಾರ ಹಲವು ಗಡುವುಗಳನ್ನ ಕೊಟ್ಟಾಗಿದೆ. ಮಾರ್ಚ್ 31ಕ್ಕೆ ಕೊನೆಯ ದಿನವಾಗಿತ್ತು. ಇದೀಗ ಮುಂದಿನ ವರ್ಷ, ಅಂದರೆ 2023, ಮಾರ್ಚ್ 31ರವರೆಗೆ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಜೋಡಿಸಲು ಡೆಡ್‌ಲೈನ್ ಕೊಡಲಾಗಿದೆ. ಆದರೆ, ಈ ಅವಧಿಯೊಳಗೆ ಲಿಂಕ್ ಮಾಡಲು ಒಂದು ಸಾವಿರದವರೆಗೂ ದಂಡ ಪಾವತಿಸಬೇಕು. ಆ ವಾಯಿದೆ ಮೀರಿ ಹೋದರೆ ಕೇಂದ್ರ ಸರಕಾರದಿಂದ ನಿಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಅವಕಾಶ ಇದೆ.

ಜೂನ್ 30ರೊಳಗೆ ಲಿಂಕ್ ಮಾಡಿದರೆ 500 ರೂ ದಂಡ:
ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ಕಾಲಾವಧಿಯನ್ನ ವಿಸ್ತರಿಸಲಾಗಿದೆಯಾದರೂ ದಂಡ ಪಾವತಿಸಲೇ ಬೇಕು. ಆದರೆ, ಜೂನ್ ೩೦ರೊಳಗೆ ಲಿಂಕ್ ಮಾಡಿದರೆ ದಂಡದ ಪ್ರಮಾಣ 500 ಮಾತ್ರ ಇರುತ್ತದೆ. ಜೂನ್ ನಂತರದಿಂದ ಮುಂದಿನ ವರ್ಷ ಮಾರ್ಚ್ 31ರ ಅವಧಿಯಲ್ಲಿ ನೀವು ಲಿಂಕ್ ಮಾಡಬೇಕಾದರೆ ಒಂದು ಸಾವಿರ ರೂ ಹಣವನ್ನು ದಂಡವಾಗಿ ಕಟ್ಟಬೇಕಾಗುತ್ತದೆ.

Changes from 1st April : ಉಳಿತಾಯಕ್ಕೂ ಮೊದಲು ಓದಿ: ದೇಶದಲ್ಲಿ ಏಪ್ರಿಲ್ 1ರಿಂದ ಏನೆಲ್ಲಾ ನಿಯಮಗಳ ಬದಲಾವಣೆ?Changes from 1st April : ಉಳಿತಾಯಕ್ಕೂ ಮೊದಲು ಓದಿ: ದೇಶದಲ್ಲಿ ಏಪ್ರಿಲ್ 1ರಿಂದ ಏನೆಲ್ಲಾ ನಿಯಮಗಳ ಬದಲಾವಣೆ?

ಹೊಸ ವಾಯಿದೆಯೊಳಗೆ ಲಿಂಕ್ ಮಾಡದಿದ್ದರೆ ಏನಾಗುತ್ತದೆ?
ನೀವು 2023, ಮಾರ್ಚ್ 31ರೊಳಗೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಜೋಡಿಸದೇ ಹೋದಲ್ಲಿ ನಿಮ್ಮ ಪ್ಯಾನ್ ಕಾರ್ಡ್ ಅಸಿಂಧುಗೊಳ್ಳುತ್ತದೆ ಅಥವಾ ನಿಷ್ಕ್ರಿಯಗೊಳ್ಳುತ್ತದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಹೇಳಿದೆ.

Link PAN and Aadhar Card Now with penalty or face consequences; Know how to do

ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ಏನಾಗುತ್ತದೆ?
ಹಲವು ಹಣಕಾಸು ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯ ಇದೆ. ಸಕ್ರಿಯ ಪ್ಯಾನ್ ಕಾರ್ಡ್ ಇಲ್ಲದೇ ಐಟಿ ರಿಟರ್ನ್ ಫೈಲ್ ಮಾಡುವುದು ಅಸಾಧ್ಯ. ಈಗಾಗಲೇ ಫೈಲ್ ಆಗಿರುವ ಐಟಿ ರಿಟರ್ನ್‌ಗಳಿಂದ ಹಣ ಮರಳುವುದಿಲ್ಲ.

RBI : ರಿಯಲ್ ಜಿಡಿಪಿ ಇನ್ನಷ್ಟು ಕುಂಠಿತಗೊಳ್ಳುವ ನಿರೀಕ್ಷೆ; ಶೇ. 7.2 ಎಂದು ಆರ್‌ಬಿಐ ಅಂದಾಜು RBI : ರಿಯಲ್ ಜಿಡಿಪಿ ಇನ್ನಷ್ಟು ಕುಂಠಿತಗೊಳ್ಳುವ ನಿರೀಕ್ಷೆ; ಶೇ. 7.2 ಎಂದು ಆರ್‌ಬಿಐ ಅಂದಾಜು

ಇನ್ನು ಬ್ಯಾಂಕುಗಳಲ್ಲಿ ನೀವು ಈ ಹಿಂದೆ ಸಲ್ಲಿಸಿದ್ದ ಪ್ಯಾನ್ ಕಾರ್ಡ್ ಅಸಿಂಧುಗೊಳ್ಳುತ್ತದೆ. ನಿಮ್ಮ ಬ್ಯಾಂಕ್ ಅಕೌಂಟ್ ಸ್ಥಗಿತಗೊಳ್ಳಬಹುದು. ನಿಮ್ಮ ಬ್ಯಾಂಕ್ ಖಾತೆಗೆ ಸರಕಾರದಿಂದ ಬರುವ ಸಹಾಯಧನ ನಿಂತುಹೋಗಬಹುದು. ಹೀಗೆ ಹಲವು ಸಮಸ್ಯೆಗಳು ನಿಮಗೆ ತಲೆದೋರಬಹುದು.

ಹೀಗಾಗಿ, ಈಗ ನೀವು ನಿಮ್ಮ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಗಳನ್ನ ಲಿಂಕ್ ಮಾಡಿಲ್ಲದೇ ಇದ್ದಲ್ಲಿ ಕೂಡಲೇ ಆ ಕೆಲಸ ಮಾಡಿ.

Link PAN and Aadhar Card Now with penalty or face consequences; Know how to do

ಆಧಾರ್ - ಪಾನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?
ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ನಂಬರ್‌ಗಳನ್ನ ನೀವು ಆನ್‌ಲೈನ್ ಮೂಲಕವೇ ಸುಲಭವಾಗಿ ಜೋಡಿಸಬಹುದು. ಅದು ಬಹಳ ಸರಳ ಪ್ರಕ್ರಿಯೆಯೂ ಹೌದು.
ನೀವು https://www.incometaxindiaefiling.gov.in/home ವೆಬ್‌ಸೈಟ್‌ಗೆ ಹೋದರೆ ಅಲ್ಲಿ 'ಲಿಂಕ್ ಆಧಾರ್' ಆಯ್ಕೆ ಕಾಣಿಸುತ್ತದೆ.
ನಂತರ ನಿಮ್ಮ ಪ್ಯಾನ್ ನಂಬರ್ ಮತ್ತು ಆಧಾರ್ ನಂಬರ್‌ಗಳನ್ನ ನಮೂದಿಸಿ. ಆಧಾರ್ ಕಾರ್ಡ್ ಮೇಲೆ ಇರುವಂತೆ ಹೆಸರು ನಮೂದಿಸಿ.
ಬಳಿಕ I agree to validate my Aadhaar details with UIDAI ಎಂಬುದನ್ನು ಟಿಕ್ ಮಾಡಿ.
ಕೊನೆಯಲ್ಲಿ 'Link Aadhaar' ಅನ್ನು ಕ್ಲಿಕ್ ಮಾಡಿ.
ಈಗ ನಿಮ್ಮ ಆಧಾರ್ ಕಾರ್ಡ್ ಜೊತೆ ಜೋಡಿತವಾಗಿರುವ ಮೊಬೈಲ್ ನಂಬರ್‌ಗೆ ಓಟಿಪಿ ಸಂದೇಶ ಬರುತ್ತದೆ. ಆ ಓಟಿಪಿ ಸಂಖ್ಯೆ ನಮೂದಿಸಿ 'Validate' ಮೇಲೆ ಕ್ಲಿಕ್ ಮಾಡಿ.
ಎಲ್ಲವೂ ಸರಿ ಇದ್ದಲ್ಲಿ ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ನಂಬರ್ ಗಳು ಯಶಸ್ವಿಯಾಗಿ ಜೋಡಣೆ ಆಗಿರುವ ಸಂದೇಶ ಪ್ರತ್ಯಕ್ಷವಾಗುತ್ತದೆ.

ಎಸ್ಸೆಮ್ಮೆಸ್ ಮೂಲಕವೂ ಜೋಡಣೆ ಸಾಧ್ಯ:
ನೀವು ಫೋನ್ ಮೂಲಕ ಆನ್‌ಲೈನ್‌ಗಿಂತಲೂ ಸರಳವಾಗಿ ಆಧಾರ್ ಮತ್ತು ಪ್ಯಾನ್ ನಂಬರ್‌ಗಳನ್ನ ಲಿಂಕ್ ಮಾಡಬಹುದು.
ನಿಮ್ಮ ನೊಂದಾಯಿತ ಮೊಬೈಲ್ ಸಂಖ್ಯೆಯಿಂದ "UIDPAN " ಎಂದು ಬರೆದು 567678 ಅಥವಾ 56161ಗೆ ಮೆಸೇಜ್ ಕಳುಹಿಸಿ.
ಅಂದರೆ ಸಂದೇಶದಲ್ಲಿ UIDPAN ಒಂದು ಸ್ಪೇಸ್, ನಿಮ್ಮ 12 ಅಂಕಿ ಆಧಾರ್ ಸಂಖ್ಯೆ, ಒಂದು ಸ್ಪೇಸ್ ಮತ್ತು 10 ಅಂಕಿ ಪಾನ್ ನಂಬರ್ ಅನ್ನು ಬರೆದಿರಬೇಕು.

(ಒನ್ಇಂಡಿಯಾ ಸುದ್ದಿ)

English summary
Last date to link PAN and Aadhar numbers passed last month. CBDT have extended deadline to one year, but have to pay penalty upto 1000 rs. If not done after 2023, March 31st deadline, one has to face certain consequences.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X